ತುಮಕೂರು : ಮಕರ ಸಂಕ್ರಾoತಿ ಹಾಗೂ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ರಾಮನಲಲ್ಲ ಮೂರ್ತಿಯ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ತುಮಕೂರಿನ ಮಲ್ಲಸಂದ್ರದ ಅರಿಯೂರು ರೈಲ್ವೇ ಗೇಟ್ ಬಳಿಯಿರುವ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಶ್ರೀರಾಮರಾಜ್ಯಂ ಹಿಂದುತ್ವ ಚೈತನ್ಯ ವೇದಿಕೆ ಟ್ರಸ್ಟ್ ವತಿಯಿಂದ ಮಕ್ಕಳಿಗೆ ರಂಗೋಲಿ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಚಿತ್ರಕಲಾ ಮತ್ತು ರಂಗೋಲಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀರಾಮರಾಜ್ಯಂ ಹಿಂದುತ್ವ ಚೈತನ್ಯ ವೇದಿಕೆ ಟ್ರಸ್ಟ್ನ ವ್ಯವಸ್ಥಾಪಕ ಅಧ್ಯಕ್ಷರಾದ ಅಂಡಕೊoಡರಾಮುಡು ಮಾತನಾಡಿ ಮಕ್ಕಳಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಚಾರಗಳ ಕುರಿತು ಅರಿವು ಮೂಡಿಸುವುದು ಮತ್ತು ಆ ಕುರಿತು ಜ್ಞಾನವನ್ನು ಮೂಡಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಈ ಭಾಗದ ಗ್ರಾಮೀಣ ಮಕ್ಕಳು ಇಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಂತೋಷಕರವಾದ ಸಂಗತಿ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಪಿ.ಎನ್.ರವರು ನಮ್ಮ ಟ್ರಸ್ಟ್ ವತಿಯಿಂದ ಈಗಾಗಲೇ ಹಲವಾರು ಗ್ರಾಮೀಣ ಭಾಗದ ಮಕ್ಕಳಲ್ಲಿ ನಮ್ಮ ಸಂಸ್ಕೃತಿ, ಧಾರ್ಮಿಕ ವಿಚಾರ ಧಾರೆಗಳು ಸೇರಿದಂತೆ ನಾವು ಹಬ್ಬದ ಸಡಗರವನ್ನು ಮಕ್ಕಳೊಂದಿಗೆ ಆಚರಿಸಿಕೊಂಡು ಬರುತ್ತಿದ್ದೇವೆ, ಅದರಂತೆ ಈ ಭಾರಿ ಮಲ್ಲಸಂದ್ರ ಪಂಚಯಿತಿಯ ಸಹಯೋಗ ಮತ್ತು ದೇವಾಲಯದ ಅರ್ಚಕರು ಹಾಗೂ ಸ್ಥಾನಿಕ ನಿವಾಸಿಗಳ ಸಹಕಾರದೊಂದಿಗೆ ಈ ಭಾರಿ ಸಂಕ್ರಾoತಿ ಹಬ್ಬದೊಂದಿಗೆ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆಯ ಕುರಿತು ಇತಿಹಾಸವನ್ನು ಮಕ್ಕಳಿಗೆ ತಿಳಿಯಪಡಿಸುವ ಕಾರ್ಯವನ್ನು ನಮ್ಮ ಟ್ರಸ್ಟ್ ವತಿಯಿಂದ ಮಾಡಲಾಗುತ್ತಿದೆಂದು ಹೇಳಿದರು.