ತುಮಕೂರು: ಗೋವಾದ ಪಣಜಿಯಲ್ಲಿ ಜನವರಿ ೭ರಂದು ನಡೆದ ಪ್ಯಾರಾ ಒಲಂಪಿಕ್ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ನಿವೇದಿತಾ ಡಿ.ಹೆಚ್.ರವರು ಗುಂಡು ಎಸೆತದ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದು ನಮ್ಮ ಜಿಲ್ಲೆಯ ನಮ್ಮ ರಾಜ್ಯಕ್ಕೆ ಗೌರವ ತಂದಿರುತ್ತಾರೆ ಇವರ ಸಾಧನೆಯನ್ನು ಮೆಚ್ಚಿ ಇಂದು ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟು ಟೀಕೆ ಆನಂದ್ ನೇತೃತ್ವದಲ್ಲಿ ಮುಂಜಾನೆ ಗೆಳೆಯರ ಬಳಗ ವತಿಯಿಂದ ಅಭಿನಂದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು
ಈ ಸಂಧರ್ಭದಲ್ಲಿ ಅಭಿನಂದನೆ ಮಾತನಾಡಿದ ಹೆಚ್.ಡಿ. ನಿವೇಧಿತರವರು ತಾನು ಹೊನ್ನುಡಿಕೆ ಗ್ರಾಮೀಣ ಪ್ರದೇಶದಿಂದ ಬಂದು ಪ್ಯಾರಾ ಓಲಪಿಂಕ್ಸ್ನಲ್ಲಿ ಪದಕವನ್ನು ಗೆದ್ದಿರುವುದು ತನಗೆ ಸಂತಸ ತಂದಿದೆ ಈ ಸಾಧoನೆ ತನ್ನಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ. ತನ್ನ ಸಾಧನೆಯನ್ನು ಗುರುತಿಸಿದ ಮುಂಜಾನೆ ಗೆಳೆಯರ ಬಳಗದ ವತಿಯಿಂದ ಧನ್ಯವಾದಗಳನ್ನು ತಿಳಿಸಿದರು.
ತುಮಕೂರಿನ ಬಿ.ಜೆ.ಪಿ. ಪಕ್ಷದ ವಕ್ತಾರ ಚಂದ್ರಶೇಖರವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭ ಹಾರೈಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಚಂದ್ರಶೇಖರ್ ಮಾತನಾಡುತ್ತಾ ಕ್ರೀಡೆಗಳಲ್ಲಿ ಗೆಲುವು ಸಾದಿಸಿದರೆ, ರಾಷ್ಟ್ರವೇ ತಮ್ಮನ್ನು ಗೌರವಿಸುತ್ತದೆ. ಗ್ರಾಮೀಣ ಪ್ರತಿಭೆ ನಿವೇಧಿತರವರ ಸಾದನೆ ನಾವೆಲ್ಲ ಹೆಮ್ಮೆ ಪಡುವಂತoಹದು ಎಂದು ನುಡಿದರು.
ತುಮಕೂರಿನ ಅಶೋಕರಸ್ತೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ಕೇಂದ್ರ ಬಸ್ನಿಲ್ದಾಣಕ್ಕೆ ದಿವಂಗತ ದೇವರಾಜು ಅರಸುರವರ ಹೆಸರಿಡಲು ಶ್ರಮಿಸಿದ ಕನ್ನಡ ಸೇನೆಯ ಅಧ್ಯಕ್ಷರು ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಧನಿಯಾಕುಮಾರ್ರವನ್ನು ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಧನಿಯಾಕುಮಾರ್ರವರು ದಿವಂಗತ ದೇವರಾಜು ಅರಸು ರವರ ಹೆಸರನ್ನು ಕೆ.ಎಸ್.ಆರ್.ಟಿ.ಸಿ ನಿಲ್ದಾಣಕ್ಕೆ ಇಡಲು ಸುಮಾರು ೧೦-೧೨ ವರ್ಷಗಳ ಹೋರಾಟ ಈ ಒಂದು ಕೆಲಸಕ್ಕೆ ಮುಖ್ಯ ಕಾರಣೀಭೂತರೆಂದರೆ, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣನವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವಲ್ಲಿ ಟಿ.ಕೆ.ಆನಂದ್ರವರು ಮುಂಚೂಣಿಯಲ್ಲಿದ್ದಾರೆ.
ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟು ಟಿ.ಕೆ.ಆನಂದ್ ಮಾತನಾಡಿ ಗೃಹಿಣಿಯಾದ ಹೆಚ್.ಡಿ. ನಿವೇಧಿತರವರ ಸಾಧನೆ ಶ್ಲಾಘನೀಯವಾದದ್ದು, ಹಾಗೂ ಕ್ರೀಡಾಪಟುಗಳು ತಮ್ಮ ಸಾಧನೆಯನ್ನು ಕ್ರೀಡೆಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದರೆ ಆಗ ಇಡೀ ರಾಷ್ಟ್ರವೇ ಅವರನ್ನು ಗೌರವಿಸುತ್ತೆ ಹಾಗೂ ಅವರು ಈ ದೇಶದ ಆಸ್ತಿಯಾಗುತ್ತಾರೆ. ತುಮಕೂರು ಕೇಂದ್ರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ದಿವಂಗತ ದೇವರಾಜು ಅರಸುರವರ ಹೆಸರು ಇಡಲು ಅವಿರತವಾಗಿ ಶ್ರಮಿಸಿದ ಧನಿಯಾಕುಮಾರ್ ಮತ್ತು ಅವರ ಸ್ನೇಹಿತರಿಗೆ ವಂದನೆಗಳನ್ನು ತಿಳಿಸಿದರು.