ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದÀ ಮೇಲೆ ಸುಳ್ಳು ದೂರು ನೀಡಿರುವ ವ್ಯಕ್ತಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು,ಎನ್.ಪಿ.ಎಸ್.ರದ್ದು ಪಡಿಸಿ,ಓಪಿಎಸ್ ಜಾರಿಗೊಳಿಸಬೇಕು,೭ನೇ ವೇತನ ಆಯೋಗದ ವರದಿಯನ್ನು ಪಡೆದು, ಶೀಘ್ರವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದವತಿಯಿAದ ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಅವರ ನೇತೃತ್ವದಲ್ಲಿ ಸರಕಾರದ ವಿವಿಧ ಇಲಾಖೆಗಳು ನೂರಾರು ಸರಕಾರಿ ನೌಕರರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮಧ್ಯಾಹ್ನದ ಊಟದ ಬಿಡುವಿನಲ್ಲಿ ಸಭೆ ಸೇರಿ, ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ನರಸಿಂಹರಾಜು, ೧೯೨೦ರಲ್ಲಿ ಪ್ರಾರಂಭವಾದ ಸರಕಾರಿ ನೌಕರರ ಸಂಘ ಪ್ರಸ್ತುತ ೫.೨೫ ಲಕ್ಷ ಸರಕಾರಿ ನೌಕರರ ಸದಸ್ಯತ್ವವನ್ನು ಹೊಂದಿದೆ.ಸರಕಾರ ನೀಡಿದ ನಿವೇಶನದಲ್ಲಿ ಸಂಘದ ಕಟ್ಟಡ ಕಟ್ಟಿಕೊಂಡು ಸಂಘವನ್ನು ಮುನ್ನೆಡೆಸಲಾಗುತ್ತಿದೆ.ಪ್ರಸ್ತುತ ಸಂಘದ ರಾಜ್ಯಾಧ್ಯಕ್ಷರಾಗಿರುವ ಸಿ.ಎಸ್.ಷಡಕ್ಷರಿ ಅವರು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು,೭ನೇ ವೇತನ ಆಯೋಗದ ಮದ್ಯಂತರ ಪರಿಹಾರ,ಹೆಣ್ಣು ಮಕ್ಕಳಿಗೆ ಆರು ತಿಂಗಳ ಕಾಲ ವೇತನ ಸಹಿತ ರಜೆಯ ಜೊತೆಗೆ, ಮಹಿಳಾ ನೌಕರರ ಪತಿ ಅವರಿಗೂ ಹೆರಿಗೆ ಸಂಬAಧ ರಜೆ ಮಂಜೂರು,ಹಬ್ಬದ ಮುಂಗಡ ಹೆಚ್ಚಳ, ತುಟ್ಟಿ ಭತ್ಯೆ ಹೆಚ್ಚಳ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಸರಕಾರಿ ನೌಕರರು ಈಗಿನ ಅಧ್ಯಕ್ಷರ ಕಾಲಾವಧಿಯಲ್ಲಿ ಪಡೆದಿದ್ದೇವೆ ಎಂದರು.ಆದರೆ ಕೆಲವರು ಸರಕಾರಿ ನೌಕರರ ಸಂಘವನ್ನು ದುಬರ್ಲಗೊಳಿಸುವ ಉದ್ದೇಶದಿಂದ ಐದಾರು ಜನರು ಸತ್ಯಕ್ಕೆ ದೂರವಾದ ಆರೋಪಗಳನ್ನು ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ವಿರುದ್ದ ದೂರು ಸಲ್ಲಿಸಿರುವುದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಯ ಬಿಟ್ಟು ತೇಜೋವಧೆ ಮಾಡುತ್ತಿದ್ದಾರೆ.ಹಾಗಾಗಿ ಇಂತಹವರ ವಿರುದ್ದ ಕೂಡಲೇ ಸರಕಾರದ ಮುಖ್ಯ ಕಾರ್ಯದರ್ಶಿಗಳು ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ನಮ್ಮೆಲ್ಲಾ ಸರಕಾರಿ ನೌಕರರ ಒತ್ತಾಯವಾಗಿದೆ ಎಂದರು.ಹಳೆಯ ಪಿಂಚಣಿ ಯೋಜನೆಯ ಬಗ್ಗೆ ಸಂಘದ ತರಕಾರು ಎಂದಿಗೂ ಇಲ್ಲ.ಸರಕಾರಿ ನೌಕರರ ನೆಮ್ಮದಿಯ ನಿವೃತ್ತಿ ಜೀವನಕ್ಕೆ ಓಪಿಎಸ್ ಅಗತ್ಯವಿದೆ.ಹಾಗಾಗಿ ನಮಗೆ ಇದರ ಬಗ್ಗೆ ವಿರೋಧವಿಲ್ಲ.೨೦೦೬ರಲ್ಲಿ ಸರಕಾರಿ ನೌಕರಿಗೆ ಸೇರಿದವರು ನಿವೃತ್ತಿಯಾಗುವ ವಯಸ್ಸು ಮುಂದಿನ ೨೦ ವರ್ಷಗಳ ಮಾತು.ಹಾಗಾಗಿ ಸಂಘದ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಆರಂಭ ಮಾಡುವ ಇಚ್ಚೆ ಸಂಘದ್ದು,ಆದರೆ ಇದನ್ನೇ ತಪ್ಪು ತಿಳಿದುಕೊಂಡು ಕೆಲವರು ಸಂಘದ ಅಧ್ಯಕ್ಷರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಹಳೆಯ ಸಂಘ ಸರಕಾರಿ ನೌಕರರ ಸಂಘ,ಇದರ ಅಡಿಯಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ವಿವಿಧ ಸರಕಾರಿ ನೌಕರರ ಸಂಘಗಳು ಅಫಿಲಿಯೇಷನ್ ಪಡೆದಿವೆ.ಹಾಗಾಗಿ ಹೋರಾಟಕ್ಕೆ ಓಪಿಎಸ್ ನೌಕರರ ಸಂಘವೂ ನಮ್ಮ ಜೊತೆಗೆ ಬನ್ನಿ ಎಂಬುದು ನಮ್ಮ ಕೋರಿಕೆಯಾಗಿದೆ ಎಂದು ನರಸಿಂಹರಾಜು ತಿಳಿಸಿದರು.ಈಗಾಗಲೇ ಸಂಘದ ನಿರಂತರ ಪ್ರಯತ್ನದ ಫಲವಾಗಿ ೭ನೇ ವೇತನ ಆಯೋಗದ ಮದ್ಯಂತರ ಪರಿಹಾರವಾಗಿ ಶೇ೧೭ರಷ್ಟು ವೇತನವನ್ನು ಪಡೆಯುತ್ತಿದ್ದೇವೆ. ಇದು ಶೇ೩೦-೩೫ಕ್ಕೆ ಆಗಬೇಕೆಂಬುದು ನಮ್ಮ ಕೋರಿಕೆ. ಇದರ ಜೊತೆಗೆ ೭ನೇ ವೇತನ ಆಯೋಗದ ವರದಿಯನ್ನು ಪಡೆದು, ಜಾರಿಗೆ ತರಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.ಮುAದಿನ ಆಗಸ್ಟ್ನಲ್ಲಿ ಸರಕಾರಿ ನೌಕರರ ಸಂಘದವತಿಯಿAದ ತುಮಕೂರಿನಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ತುಮಕೂರಿನಲ್ಲಿ ಆಯೋಜಿಸಲಾಗಿದೆ. ಸರಕಾರದಿಂದ ಸುಮಾರು ೧.೫೦ ಕೋಟಿಯನ್ನು ಬಿಡುಗಡೆ ಮಾಡಿದೆ.ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ತಾವೆಲ್ಲರೂ ಭಾಗವಹಿಸಬೇಕೆಂದು ನರಸಿಂಹರಾಜು ಸರಕಾರಿ ನೌಕರರಲ್ಲಿ ಮನವಿ ಮಾಡಿದರು.ಈ ವೇಳೆ ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಜಗದೀಶ್.ಟಿ.ಎನ್.,ಉಪಾಧ್ಯಕ್ಷ ಜಗದೀಶ್.ಎಂ.ಕೆ., ಎ.ಓ.ಮೋಹನ್ಕುಮಾರ್,ಉಪಾಧ್ಯಕ್ಷ ರೇಣುಕಾರಾಧ್ಯ,ವಿವಿಧ ಇಲಾಖೆಗಳ ನೌಕರರ ಸಂಘದ ನಿರ್ದೇಶಕರಾದ ವಿಜಯನರ ಸಿಂಹ,ಷಡಕ್ಷರಿ,ಭೀಮಣ್ಣ,ಮAಜುನಾಥ್,ಜಯಪ್ರಕಾಶ್(ಜೆ.ಪಿ),ಗ್ರಾಮ ಅಭಿವೃದ್ದಿ ಅಧಿಕಾರಿಗಳ ಸಂಘದ ದೇವರಾಜು, ಪಾವರ್ತೀಶ್, ಗಂಗಾಧರಯ್ಯ, ನಿರ್ಮಲ್, ಒಕ್ಕೊಡಿ ನಾಗರಾಜು ಸೇರಿದಂತೆ ಹಲವರು ಜೊತೆಗಿದ್ದರು