ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ(ರಿ)ಯು ಇಂದು ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಕಾರ್ಯಕಾರಿ ಸಮಿತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಸ್ಲಂ ನಿವಾಸಿಗಳ ಸಂವಿಧಾನಿಕ ಹಕ್ಕಿಗಾಗಿ ಅಂದರೆ ಮಾನವ ಘನತೆಯ ಬದುಕಿಗಾಗಿ ಸ್ಲಂ ನಿವಾಸಿಗಳನ್ನು ಮನುಷ್ಯರಂತೆ ವ್ಯವಸ್ಥೆ ಪರಿಗಣಿಸಲು ಒತ್ತಾಯಿಸಿ ಸತತ ೨೦ ವರ್ಷಗಳಿಂದ ನಗರದಲ್ಲಿ ಸ್ಲಂ ನಿವಾಸಿಗಳನ್ನು ಸಂಘಟಿಸುತ್ತ ಹಲವು ಹೋರಾಟಗಳನ್ನು ಮಾಡುತ್ತ ಬರುತ್ತಿದ್ದು. ತುಮಕೂರು ನಗರ ದಿನೇ ದಿನೇ ಬೆಳೆಯುತ್ತಿದ್ದು ನಗರದಲ್ಲಿ ಶ್ರಮಿಕ ವರ್ಗವನ್ನು ಮೂಲೆಗುಂಪು ಮಾಡಲಾಗುತ್ತಿದೆ. ನಗರ ಸುಂದರ ಮತ್ತು ಸ್ವಚ್ಚವಾಗಿಡಲು ಸ್ಲಂ ನಿವಾಸಿಗಳ ಕೊಡುಗೆ ಅಪಾರ ಆದರೆ ನಗರದ ಆಡಳಿತ ವ್ಯವಸ್ಥೆ ಹಲವು ಕಾರಣಗಳಿಂದ ಸ್ಲಂ ನಿವಾಸಿಗಳ ಅಭಿವೃದ್ಧಿ ಕುಂಟಿತಕ್ಕೆ ನೇರ ಹೊಣೆಯಾಗಿರುತ್ತದೆ.
ಸ್ಲಂ ಜನರ ಸಾಂವಿಧಾನಿಕವಾದ ಭೂಮಿ ಹಕ್ಕು, ಸ್ಲಂ ಘೋಷಣೆ, ನಿವೇಶನ ವಂಚಿತ ೪೦೦ ಕುಟುಂಬಗಳ ಸಮಸ್ಯೆಗಳು, ಹಕ್ಕುಪತ್ರ ಹಾಗೂ ಮಳೆ ಬಂದ ಸಂದರ್ಭದಲ್ಲಿ ಅತಂತ್ರಕ್ಕೆ ಸಿಲುಕುವ ಸ್ಲಂಗಳ ಬಗ್ಗೆ ಸರ್ಕಾರ ಗಮನಹರಿಸಿ ಸ್ಲಂ ಜನರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ದಿನಾಂಕ:೨೯-೧೨-೨೦೨೩ ರ ಶುಕ್ರವಾರ ಬೆಳಗ್ಗೆ ೧೧ಗಂಟೆಗೆ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು, ಪ್ರತಿಭಟನೆಯಲ್ಲಿ ತುಮಕೂರು ನಗರದ ವಿವಿಧ ಸ್ಲಂಗಳ ನಿವಾಸಿಗಳು ಹಾಗೂ ನಿವೇಶನ ವಂಚಿತ ನಿವಾಸಿಗಳು ಪಾಲ್ಗೊಳ್ಳುತ್ತಿದ್ದಾರೆ,
ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಕಾರ್ಯಕಾರಿ ಸಮಿತಿ ಸಭೆ
Leave a comment
Leave a comment