ದೇಶದ ಭವಿಷ್ಯವನ್ನು ರೂಪಿಸಲು ಮಕ್ಕಳು ಸುಶಿಕ್ಷಣರಾಗಬೇಕು, ಆರೋಗ್ಯವಂತರಾಗಬೇಕು, ಸದೃಢಕಾರ್ಯ ರಾಗಿರಬೇಕು ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಒಟ್ಟಿನಿಂದ ದೇಶದ ಪ್ರಗತಿಗೆ ಶ್ರಮಿಸಬೇಕು, ಸಮಾನತೆಯನ್ನು ಕಾಪಾಡಬೇಕು ಅಲ್ಲದೆ ಶಾಂತಿ ಮತ್ತು ನೆಮ್ಮದಿಯನ್ನು ಜನರಲ್ಲಿ ಕಾಣಬೇಕು ನಮ್ಮ ಹಿರಿಯರು ತಂದುಕೊಟ್ಟ ಸ್ವಾತಂತ್ರö್ಯವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗೂ ದೇಶದ ಪ್ರಗತಿಗಾಗಿ ಶ್ರಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಈ ನಾಡ ಹಬ್ಬದಲ್ಲಿ ಜಾತಿ, ಮತ, ಬೇಧಭಾವವಿಲ್ಲದೇ ಎಲ್ಲರೂ ಒಂದೇ ಹಾಗೂ ಎಲ್ಲರೂ ಸಮಾನರು ಎಂಬುದನ್ನು ನಾವು ಅರಿಯಬೇಕು ದೇಶವನ್ನು ಪ್ರಗತಿಪಥಕ್ಕೆ ನಾವು ಒಗ್ಗೂಡಿ ಶ್ರಮಿಸಬೇಕು. ಸರ್ವತಂತ್ರ ಸ್ವಾತಂತ್ರö್ಯವೇ ಗಣರಾಜ್ಯವೆಂದು ಅರ್ಥಪೂರ್ಣವಾಗಿ ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಎಂ ಹುಲಿನಾಯ್ಕರ್ರವರು ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಗಳ ವತಿಯಿಂದ ಜ.೨೬ ರಂದು ಶುಕ್ರವಾರ ಬೆಳಗ್ಗೆ ೯ ಗಂಟೆಗೆ ಕಾಲೇಜಿನ ಆವರಣದಲ್ಲಿ ೭೫ನೇ ಗಣರಾಜ್ಯೋತ್ಸವದ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ರಾಷ್ಟçಗೀತೆಯ ಮೂಲಕ ೭೫ ನೇ ಗಣರಾಜ್ಯೋತ್ಸವಕ್ಕೆ ಚಾಲನೆ ನೀಡಲಾಯಿತ್ತು.
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಧೀಶರಾದ ಗೌ.ನ್ಯಾಯಮೂರ್ತಿ ಶ್ರೀಮತಿ ರತ್ನಕಲಾರವರು ಮಾತನಾಡುತ್ತಾ ಪ್ರತಿಯೊಬ್ಬ ವಿದ್ಯಾರ್ಥಿಯೂ ಎ.ಪಿ.ಅಬ್ದುಲ್ ಅಲಾಂರವರAತಹ ದೊಡ್ಡ ದೊಡ್ಡ ಕನಸ್ಸುನ್ನು ಕಾಣಬೇಕು, ಗುರಿಯನ್ನು ಇಟ್ಟುಕೊಂಡು ಮುಂದೆ ಬರಬೇಕು. ಸ್ನೇಹ, ಶಾಂತಿ, ಸೌಹಾರ್ದಯತೆಯಾಗಿ ಕೆಲಸ ದೇಶವನ್ನು ಮುಂದುವರಿಸಿ ದೇಶಕ್ಕೋಸ್ಕರ ನಮ್ಮ ಜೀವನ ಮಾರ್ಪಾಡು ಮಾಡಿಕೊಳ್ಳಬೇಕು. ಡಾ.ಬಾಬು ರಾಜೇಂದ್ರ ಪ್ರಸಾದ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಂವಿಧಾನವನ್ನು ರಚಿಸಲಾಗಿತ್ತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್. ಪಾಟೀಲ್ರವರು ಮಾತನಾಡುತ್ತಾ ಬಾಲಗಂಗಾಧರ್ ತಿಲಕ್, ಸುಭಾಷ್ ಚಂದ್ರಬೋಸ್ ಮುಂತಾದವರು ನಮ್ಮ ದೇಶಕ್ಕೆ ಸ್ವಾತಂತ್ರö್ಯ ಬೇಕು ಎಂದು. ಸುಮಾರು ವರ್ಷಗಳ ಕಾಲ ಬ್ರಿಟಿಷರ ನಡುವೆ ಹೋರಾಟ ಮಾಡಿದ್ದಾರೆ. ಸಂವಿಧಾನ ರಚನೆ ಹಾಗೂ ಭಾರತ ರಿಪಬ್ಲಿಕ್ ಒಂದು ವಿಶೇಷತೆ ಪಡೆದಿರುವುದು ಈ ದಿನ ನಮ್ಮ ಸಂವಿಧಾನದಲ್ಲಿ ನಮೂದಿಸಿರುವ ಹಕ್ಕುಗಳು ಕರ್ತವ್ಯಗಳು ನಾವು ದೇಶಕ್ಕೆ ಏನು ಕೊಡುಗೆ ಕೊಡಬೇಕು ಎಂಬುವುದನ್ನು ಸೂಚಿಸುವ ಮತ್ತು ನೆನಪಿಸುವ ಸುದಿನವಾಗಿದೆ. ಸ್ವಾತಂತ್ರö್ಯ ಸಿಕ್ಕ ಮೇಲೆ ದೇಶಕ್ಕೆ ಒಂದು ಸಂವಿಧಾನವನ್ನು ಸಿದ್ದಪಡಿಸಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ಸವಲತ್ತುಗಳು ದೊರೆಯುವ ಆಶಾಭಾವ
ದೇಶದ ಪ್ರಗತಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು
Leave a comment
Leave a comment