ತುಮಕೂರು: ಯುವ ಕಲಾವಿದರು, ತಂತ್ರಜ್ಞರನ್ನು ಹೊಂದಿರುವ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ), ಪ್ರತಿವರ್ಷ ನಮ್ಮೂರಿನಲ್ಲಿ ಸಾಮಾಜಿಕ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಗ್ರಾಮದಲ್ಲಿ ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿದೆ ಎಂದು ಸ್ವಾಂದೇನಹಳ್ಳಿ ಗ್ರಾಮ ಪಂಚಾಯಿತಿಯ ಬೀರನಕಲ್ಲು ಕ್ಷೇತ್ರದ ಸದಸ್ಯ ಸತೀಶ್ ತಿಳಿಸಿದ್ದಾರೆ.
ಬೀರನಕಲ್ಲು ಗ್ರಾಮದ ಶ್ರೀವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ತುಮಕೂರು ಇವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಸುಗ್ಗಿ ರಂಗೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ರಂಗಭೂಮಿ ಎಂಬುದು ಒಂದು ಪ್ರಬಲ ಮಾಧ್ಯಮ. ವಿಜ್ಞಾನ, ತಂತ್ರಜ್ಞಾನ ಇಲ್ಲದ ಸ್ವಾತಂತ್ರ ಪೂರ್ವದ ಕಾಲದಲ್ಲಿಯೂ ಒಂದು ಸಂದೇಶವನ್ನು ಮತ್ತೊಬ್ಬರಿಗೆ ತಲುಪಿಸಲು ರಂಗಭೂಮಿ ನೆರವಾಗಿರುವುದನ್ನು ನಾವು ಇತಿಹಾಸದಿಂದ ತಿಳಿಯಬಹುದು. ಅದೇ ಪರಂಪರೆ ಇಂದಿಗೂ ಮುಂದುವರೆದಿದೆ ಎಂದರು.

ರAಗಭೂಮಿ ಕಲಾವಿದ ನಂಜಪ್ಪಶೆಟ್ಟರು ಮಾತನಾಡಿ, ಮಕ್ಕಳು ಶಾಲಾ, ಕಾಲೇಜು ಸಂದರ್ಭದಲ್ಲಿ ಮಾಡುವ ಏಕಪಾ ತ್ರಾಭಿನಯ, ನಾಟಕಗಳು, ನೃತ್ಯ, ಹಾಡುಗಾರಿಕೆ ಅವರು ಜೀವನದಲ್ಲಿ ಬಹಳಷ್ಟು ಉಪಯೋಗಕ್ಕೆ ಬರುತವೆ. ಹಾಗಾಗಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಹಿತ್ಯ, ನೃತ್ಯ, ಗಾಯನದ ಕಡೆಗೆ ಮಕ್ಕಳು ಗಮನಹರಿಸುವುದರಿಂದ ಅವರ ಸಮಗ್ರ ವಿಕಾಸದ ಜೊತೆಗೆ, ಬದುಕು ಕಟ್ಟಿಕೊಳ್ಳಲು ಸಹ ಸಹಕಾರಿಯಾಗಲಿದೆ. ಇಂತಹ ಹಲವಾರು ಉದಾಹರಣೆಗಳು ನಿಮ್ಮ ಮುಂದಿವೆ ಎಂದರು.
ಸುಗ್ಗಿ ಎಂಬುದು ಗ್ರಾಮೀಣ ಕೃಷಿಕರಲ್ಲಿ ಬಹಳ ಮಹತ್ವದ್ದು, ಮಳೆಗಾಲದಲ್ಲಿ ಕಷ್ಟಪಟ್ಟು ನೆಟ್ಟು, ನೀರೆರೆದು ಪೋಷಿಸಿ, ಬೆಳೆದ ಬೆಳೆಗಳನ್ನು ಕೊಯ್ದು, ಒಕ್ಕಲುತನ ಮಾಡಿ, ಕಣದಲ್ಲಿ ಬಡಿದು ರಾಶಿ ಮಾಡಿ, ತಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಬರಲಿ, ಬರದಿರಲಿ ಸಂತೋಷಿಸುವ ಕಾಲ.ಈ ಕಾಲದಲ್ಲಿ ನಾಟಕಗಳು ಹೆಚ್ಚು.ಅದೇ ರೀತಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡವೂ ಸಹ ಗ್ರಾಮೀಣ ಸುಗ್ಗಿ ರಂಗೋತ್ಸವದ ಹೆಸರಿನಲ್ಲಿ ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃ ಸಾಹಿತಿಗಳಾದ ಡಾ.ಚಂದ್ರಶೇಖರ ಕಂಬಾರ ಸಾಂಭಶಿವ ಪ್ರಹಸನ ಮತ್ತು ಶಿವರಾಮಕಾರಂತರ ಹೊಟ್ಟೆಯ ಹಾಡು ಎಂಬ ಎರಡು ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಿದೆ. ನಾಟಕವನ್ನು ನೋಡಿ ಅದನ್ನು ಅರ್ಥ ಮಾಡಿಕೊಂಡು, ಕಲಾವಿದರನ್ನು ಪ್ರೋತ್ಸಾಹಿಸೋಣ ಎಂದು ನಂಜಪ್ಪಶೆಟ್ಟರು ನುಡಿದರು.
ಕಾರ್ಯಕ್ರಮದಲ್ಲಿ ಸ್ವಾಂದೇನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮಹಾಲಕ್ಷಿö್ಮ, ಉಪಾಧ್ಯಕ್ಷರಾದ ಲೋಕೇಶ್, ಇ.ಎನ್.ಬಿ.ಐ, ಬೀರನಕಲ್ಲು ಕ್ಷೇತ್ರದ ಸ್ವಾಂದೇನಹಳ್ಳಿ ಗ್ರಾಮಪಂಚಾಯಿತಿ ಸದಸ್ಯರಾದ ಶ್ರೀಮತಿ ಮಂಗಳ ಪ್ರಕಾಶ್, ಸತೀಶ್, ಶ್ರೀಮತಿ ಸಾವಿತ್ರಮ್ಮ ಹನುಮಯ್ಯ,ಆರ್ಚಕರಾದ ಬಿ.ಜಿ.ರವಿಕುಮಾರ್, ಪಟೇಲ್ ಪ್ರಕಾಶ್, ಪಣಗಾರ್ ಹನುಮಂತ ರಾಯಪ್ಪ, ಸಿದ್ದಲಿಂಗಪ್ಪ, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಾಂತರಾಜು, ಸಿದ್ದರಾಜು ಅವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಲಾವಿದರಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರ ಸಾಂಭಶಿವ ಪ್ರಹಸನ ಮತ್ತು ಡಾ.ಶಿವರಾಮ ಕಾರಂತರ ಹೊಟ್ಟೆಯ ಹಾಡು ನಾಟಕಗಳು ಪ್ರದರ್ಶನಗೊಂಡವರು.