ನವ್ಯದಿಶ ಸಂಸ್ಥೆಯು ಕೃಷಿ ವಿಜ್ಞಾನ ಕೇಂದ್ರ ಹಿರೇಹಳ್ಳಿ ಸಹಯೋಗದಲ್ಲಿ ಯುವ ಉದ್ಯಮಶೀಲ ಅಭಿವೃದ್ಧಿ ಕಾರ್ಯಕ್ರಮದ ತರಬೇತಿಯ ಮೊದಲ ಹೆಜ್ಜೆಯಾಗಿ ಉದ್ಯಮಶೀಲತೆ ಅರಿವು ಕಾರ್ಯಕ್ರಮಗಳಿಂದ ಆಯ್ಕೆಯಾದ ಯುವಜನರಿಗೆ “ಕೃಷಿ ಮತ್ತು ಕೃಷಿ ಸಂಬಂಧಿತ ವಲಯಗಳಲ್ಲಿ ಉದ್ಯಮಶೀಲತೆಯ ಸಾಧ್ಯತೆಗಳು”ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾದ ಐಐಹೆಚ್ಆರ್ ನ ಪ್ರಿನ್ಸಿಪಾಲ್ ಸೈಂಟಿಸ್ಟ್ ಡಾ.ಮಂಜುನಾಥ್ ರವರು ತೋಟಗಾರಿಕೆ ಬೆಳೆಗಳ ಪರಿಚಯ, ಬೀಜ ಮತ್ತು ಸಸಿಗಳು, ಕೊಯ್ಲೋತ್ತರ ಸಂಸ್ಕರಣೆ ಹಾಗೂ ಕೃಷಿಯಲ್ಲಿ ವಿವಿಧ ಟೆಕ್ನಾಲಜಿಗಳನ್ನು ಬಳಸಿಕೊಂಡು ಕೈಗೊಳ್ಳಬಹುದಾದ ಉದ್ಯಮಿಗಳು ಮತ್ತು ಇಲಾಖೆಯಿಂದ ನೀಡಲಾಗುವ ತರಬೇತಿಗಳ ಕುರಿತು ಯುವಜನರೊಟ್ಟಿಗೆ ಸಂವಾದ ನಡೆಸಿ, ಪ್ರಸ್ತುತ.ಸಂದರ್ಭದಲ್ಲಿ ಯುವಜನರನ್ನು ಉದ್ಯಮಶೀಲ ರನ್ನಾಗಿಸುವುದು ಬಹಳ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಲೋಗಾನಂದನ್ ರವರು ಕೃಷಿಯಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಾದ ಬೀಜಗಳ ಕೊರತೆ, ಮಣ್ಣು, ನೀರಿನಲ್ಲಿ ರಾಸಾಯನಿಕ ಮಾಲಿನ್ಯಗಳ ಉತ್ಪಾದನೆ, ಪೌಷ್ಠಿಕಾಂಶ ಆಹಾರದ ಕೊರತೆ ಇತ್ಯಾದಿಗಳ ಬಗ್ಗೆ ತಿಳಿಸಿದರು ಹಾಗೂ ಕೃಷಿ ಸಂಬಂಧಿತ ವಲಯಗಳಲ್ಲಿ ಉದ್ಯಮಶೀಲತೆಯ ಸಾಧ್ಯತೆಗಳಾದ ಬೀಜಗಳ ಉತ್ಪಾದನೆ ಮತ್ತು ಮಾರಾಟ, ಅಣಬೆ ಬೇಸಾಯ, ಜೈವಿಕ ಗೊಬ್ಬರಗಳು,ಜೆಂಡು ಆಪಿನ ಹುಲ್ಲಿನ ಉತ್ಪನ್ನಗಳು,ಅರೆಕಾ ಪ್ಲೇಟ್ ತಯಾರಿಕೆ ಘಟಕ,ಟೆರ್ರಾಕೋಟ ಆಭರಣಗಳ ತಯಾರಿಕೆ ಇತ್ಯಾದಿ ಉದ್ಯಮಗಳ ಬಗ್ಗೆ ಕೃಷಿ ಸಂಬಂಧಿತ ಉದ್ಯಮಗಳ ಕುರಿತಾದ ತರಬೇತಿಗಳ ಕುರಿತು ಯುವಜನರಿಗೆ ಅರಿವು ಮೂಡಿಸಿ, ಕೃಷಿ ಕ್ಷೇತ್ರದಲ್ಲಿ ಉದ್ಯಮಗಳನ್ನು ಪ್ರಾರಂಭಿಸುವುದು ರಿಂದ ಪರಿಸರ ಮತ್ತು ಆರೋಗ್ಯಕ್ಕೆ ಗಣನೀಯ ಕೊಡುಗೆ ನೀಡುವುದರೊಂದಿಗೆ ಆರ್ಥಿಕ ಅಭಿವೃದ್ಧಿ ಕೂಡ ಸಾಧ್ಯವಿದೆ ಎಂದು ತಿಳಿಸಿದರು.
ನಂತರ ಕೆವಿಕೆಯಲ್ಲಿ ನಡೆಸುತ್ತಿರುವ ಕೃಷಿ ಸಂಬಂಧಿತ ವಲಯಗಳ ಉದ್ಯಮಗಳ ಪ್ರಾತ್ಯಕ್ಷಿಕೆಗಳನ್ನು ತೋರಿಸಿ ಕೆವಿಕೆಯ ಶಶಿಧರ್ ರವರು ಯುವಜನರಿಗೆ ವಿವರಣೆ ನೀಡಿದರು.
ಈ ಕಾರ್ಯಾಗಾರದಲ್ಲಿ ನವ್ಯದಿಶ ಸಂಸ್ಥೆಯ ಅರ್ಚನಾ ನಂಬಿಯರ್, ಭಾಗ್ಯಲಕ್ಷ್ಮಿ,ಸಿಎಂಎಸ್ ಗೌಡ, ಅಶ್ವಿನಿ ಎಂ,ಜನಾರ್ದನ ಹಾಗೂ ತುಮಕೂರು ಜಿಲ್ಲೆಯ ಉದ್ಯಮಶೀಲತೆ ಯಲ್ಲಿ ಆಸಕ್ತಿಯುಳ್ಳ ವಿವಿಧ ಯುವಜನರು ಭಾಗವಹಿಸಿದ್ದರು.