ಇಂಗ್ಲಿಷ್ ಭಾಷೆ ಕೇವಲ ಭಾಷೆಯಾಗಿರದೆ ಅದೊಂದು ಪ್ರಜ್ಞೆಯಾಗಿದೆ. ಇಂಗ್ಲಿಷ್ ಭಾಷಾ ಶಿಕ್ಷಕರು ಯಾವುದೇ ತಪ್ಪಿಲ್ಲದ ಇಂಗ್ಲಿಷ್ ಕಲಿಸುವುದರ ಬಗ್ಗೆ ಚಿಂತಿಸುವುದನ್ನು ಹೊರತುಪಡಿಸಿ ಇಂಗ್ಲಿಷ್ ಭಾಷಾ ಬಳಕೆಯ ಸರಿಯಾದ ವಿಧಾನದ ಬಗ್ಗೆ ಹೆಚ್ಚು ಒತ್ತು ಕೊಡಬೇಕು. ಈ ಭಾಷೆಯನ್ನು ನಾವು ಉಪಕರಣವಾಗಿ ಬಳಸಬೇಕೆ ಹೊರತು ಆಭರಣವಾಗಿ ಅಲ್ಲ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಎನ್ ಎಸ್ ಗುಂಡೂರರವರು ಅಭಿಪ್ರಾಯಪಟ್ಟರು. ತುಮಕೂರು ಜಿಲ್ಲಾ ಇಂಗ್ಲಿಷ್ ಉಪನ್ಯಾಸಕರ ವೇದಿಕೆಯ ಉದ್ಘಾಟನೆ, ಉಪನ್ಯಾಸಕರಿಗೆ ಕಾರ್ಯಗಾರ ಹಾಗೂ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಭಾಷೆ ಮಾನವನ ಅಸ್ಥಿತ್ವದ ಮೂಲಭೂತ ಅಂಶವೇ ಆಗಿದೆ. ಹಲವು ಭಾಷೆಯಗಳಲ್ಲಿ ಒಂದಾದ ಇಂಗ್ಲಿಷ್ ಭಾಷೆಯನ್ನು ನಮ್ಮ ದೇಶದಲ್ಲಿ ನಾವು ವಿದ್ಯಾರ್ಥಿಗಳಿಗೆ ಹೇಗೆ ಕಲಿಸಬೇಕೆಂದು ಯೋಚಿಸುತ್ತೇವೆಯೇ ಹೊರತು ಏಕೆ ಕಲಿಸಬೇಕು ಎಂಬ ಮೂಲಭೂತ ಪ್ರಶ್ನೆಯ ಬಗ್ಗೆ ಚಿಂತನೆ ಮಾಡುವುದಿಲ್ಲ. ಮೊದಲು ನಾವು ಇಂಗ್ಲಿಷ್ ಭಾಷೆಯನ್ನು ಏಕೆ ಕಲಿಯಬೇಕೆಂದು ಮೊದಲು ಅರ್ಥ ಮಾಡಿಕೊಳ್ಳಬೇಕು. ಇಂಗ್ಲಿಷ್ ಇಲ್ಲದೆ ನೆಹರು, ಗಾಂಧಿ, ಅಂಬೇಡ್ಕರ್ರವರನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆಧುನಿಕ ಭಾರತ ಇಂಗ್ಲಿಷ್ ಭಾಷೆಯಿಂದಲೇ ನಿರ್ಮಾಣವಾಗಿದೆ. ಅದರಲ್ಲಿಯೂ ಇಂಗ್ಲಿಷ್ ಭಾಷೆ ನಮ್ಮ ದೇಶದ ಕೆಲವು ಪದ್ದತಿ, ರೂಢ ಸಂಪ್ರದಾಯಗಳಿAದ ಬಿಡುಗಡೆಗೊಳಿಸಿಕೊಳ್ಳಲು ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಜಂಟಿ ನಿರ್ದೇಶಕರಾದ ಕೆ ದೊರೈರಾಜುರವರು ಮಾತನಾಡಿ ಮಕ್ಕಳು ಯಾರು ದಡ್ಡರಿರುವುದಿಲ್ಲ ಶಿಕ್ಷಕರು ಯಾರೂ ಮೈಗಳ್ಳರಿರುವುದಿಲ್ಲ ಆದರೆ ಸರಿಯಾದ ಭಾಷಾ ಕಲಿಕೆ ವಿಧಾನದಲ್ಲಿ ಪಾಠ ಪ್ರವಚನಗಳನ್ನು ಮಾಡಿದರೆ ಪರೀಕ್ಷೆಗಳಲ್ಲಿ ಉತ್ತಮ ರೀತಿಯಲ್ಲಿ ಪಲಿತಾಂಶ ಪಡೆಯಬಹುದಾಗಿದೆ. ಈ ಹಿಂದೆ ೨೦೦೧ ರ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ವಿಶೇಷ ಇಂಗ್ಲಿಷ್ ತರಗತಿಗಳನ್ನು ಆಯೋಜನೆ ಮಾಡಿದ್ದರ ಪರಿಣಾಮ ಉತ್ತಮ ಫಲಿತಾಂಶ ಪಡೆಯಲಾಗಿತ್ತು. ಇದು ಇಡೀ ರಾಜ್ಯಕ್ಕೆ ಮಾದರಿಯಾಗಿತ್ತು. ಇದಕ್ಕೆಲ್ಲಾ ಭಾಷಾ ಉಪನ್ಯಾಸಕರ ಸಹಕಾರವೇ ಮುಖ್ಯವಾಗಿತ್ತು ಎಂದು ಮೆಲುಕು ಹಾಕಿದರು. ಕಾರ್ಯಕ್ರಮದ ಉದ್ಘಾಟನೆ ಮಾಡಿದ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಾಧರರವರು ಮಾತನಾಡಿ, ಜಿಲ್ಲೆಯಲ್ಲಿ ಉಪನ್ಯಾಸಕರಿಗೆ ಇಂತಹ ಕಾರ್ಯಗಾರಗಳು, ತರಬೇತಿ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಅವರವರ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಕಲಿಕೆಗೆ ಪ್ರೇರೇಪಿಸಬೇಕೆಂದು ಕರೆ ಕೊಟ್ಟರು.ಕಾರ್ಯಕ್ರಮದಲ್ಲಿ ಸಂಪನ್ಲೂಲ ವ್ಯಕ್ತಿಗಳಾಗಿ, ನಿವೃತ್ತ ಉಪನ್ಯಾಸಕರುಗಳಾದ ಎನ್ ಪಿ ನಾಗರಾಜು, ಶ್ರೀನಾಥ್ ಎ ಭಾಗವಹಿಸಿ ಮಾತನಾಡಿದರು. ಪ್ರಸಕ್ತ ವರ್ಷ ಪರಿಚಯಿಸಿರುವ ಪ್ರಶ್ನೆ ಪತ್ರಿಕೆ ಬಗ್ಗೆ ವಿವರಣೆ ಮತ್ತು ಸಂವಾದ ನಡೆಸಲು ಬಿರೂರು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭಾಗ್ಯಮ್ಮ ಜಿ ವಿ. ರವರು ಸಂಫನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.