ತುಮಕೂರು: ಪ್ರೌಢಶಾಲಾ ಹಂತದಲ್ಲಿಯೇ ತಂತ್ರಜ್ಞಾನ ಬಳಕೆಯಿಂದ ಹೆಚ್ಚಿನ ಸಾಧನೆ ಮಾಡಬಹುದು ಎಂದು ತುಮಕೂರು ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನಾಗಿರುವ ಎಂ ಗೋವಿಂದರಾಜು ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಐಎಸ್ಟಿಇ- ಎಸ್ಎಸ್ಐಟಿ ಚಾಪ್ಟರ್ ವತಿಯಿಂದ ಆಯೋಜಿಸಿದ್ದ ಎಂಜಿನಿರ್ಸ್ ಡೇ ಮತ್ತು ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಈ ತಂತ್ರಜ್ಞಾನ ಶೋಧನೆಯಲ್ಲಿ ಎಂಜಿನಿಯರ್ಗಳ ಪಾತ್ರ ಮಹತ್ವವಾದದ್ದು, ಹಾಗಾಗಿ ತಂತ್ರಜ್ಞಾನವನ್ನು ಶಿಕ್ಷಣ ವೃತ್ತಿಯಲ್ಲಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ತಾವೇ ತಯಾರಿಸಿದ್ದ ಸಿಮ್ (seಟಜಿ iಟಿsಣಡಿuಛಿಣioಟಿಚಿಟ moಜuಟe) ಅನ್ನು sವಿತರಿಸಿದ್ದು ಯಾವುದೇ ಬೋಧಕರ ನೆರವು ಇಲ್ಲದೆ ವಿದ್ಯಾರ್ಥಿಗಳು ತಾವೇ ಓದಿಕೊಳ್ಳುವ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಇಂಗ್ಲಿಷ್ ತರಗತಿಗಳನ್ನು (ಇಂಗ್ಲಿಷ್ ಇ- ತರಗತಿಗಳು) ರಾಜ್ಯಾದ್ಯಂತ ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ಸುಮಾರು ೭೦೦ಕ್ಕೂ ಹೆಚ್ಚು ಶಿಕ್ಷಕರಿಗೆ ‘ಬೋಧನೆಯಲ್ಲಿ ತಂತ್ರಜ್ಞಾನ ಬಳP’ೆ’ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ ಎಂಬುದನ್ನು ಸ್ವತಃ ಅವರೇ ಕಾರ್ಯಕ್ರಮದಲ್ಲಿ ತಮ್ಮ ವೃತ್ತಿ ಅನುಭವವನ್ನು ಎಳೆ ಎಳೆಯಾಗಿ ವಿವರಿಸಿದರು.
ಕೆ-ಬಾಂಡ್ ಪಾಲಿರ್ಸ್ ಪ್ರೆöÊವೇಟ್ ಲಿಮಿಟೆಡ್ನ ಸಿಇಒ ಡಾ.ಸಿ.ವಿ ಹರೀಶ್ ಮಾತನಾಡಿ, ಎಂಜಿನಿಯರಿAಗ್ನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮಾತ್ರವಲ್ಲ, ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳೂ ಕೂಡ ಮಾರುಕಟ್ಟೆ ನೈಪುಣ್ಯತೆ ಹೊಂದಿರುತ್ತಾರೆ. ಮಾರುಕಟ್ಟೆ ಕ್ಷೇತ್ರದಲ್ಲಿ ಬ್ಯಾಕ್ ಬೆಂರ್ಸ್ಗಳ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯ ಪಟ್ಟರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರತಿಭಾವಂತರಾಗಿರುತ್ತಾರೆ, ಸಿಕ್ಕ ಅವಕಾಶವನ್ನು ಬಳಸಿಕೊಳ್ಳಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ ಬಿ. ಲಿಂಗೇಗೌಡ, ಪ್ರತಿಯೊಬ್ಬರಿಗೂ ಕುಟುಂಬ ಒಂದು ಶಕ್ತಿ. ಗ್ರಾಮೀಣ ಭಾಗದಲ್ಲಿ ಇರುವ ಕುಟುಂಬ ವ್ಯವಸ್ಥೆ ನಗರ ಪ್ರದೇಶಕ್ಕೂ ಹಬ್ಬಲಿ. ಭಾರತೀಯ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಗೆ ವಿದೇಶಗಳಲ್ಲಿ ಗೌರವವಿದೆ. ಗ್ರಾಮೀಣ ಪ್ರದೇಶದ ಹಿನ್ನೆಲೆಯಿರುವ ವಿದ್ಯಾರ್ಥಿಗಳು ಇಂತಹ ಕುಟುಂಬಗಳಿAದ ಬಂದಿದ್ದು, ಸಾಧನೆಯ ಹಾದಿಯತ್ತ ಸಾಗಬೇಕು ಎಂದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರ್ಸ್ ಡೇ

Leave a comment
Leave a comment


