ನಿವೃತ್ತ ಸರ್ಕಾರಿ ನೌಕರರಿಗೆ ಗಳಿಕೆ ರಜೆ ನಗದೀಕರಣ, ಡಿ ಸಿ ಆರ ಜಿ ಸೌಲಭ್ಯಕ್ಕಾಗಿ ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಕೆ
ಸರಕಾರಿ ನಿವೃತ್ತಿ ನೌಕರರಿಗೆ ಗಳಿಕೆ ರಜೆ ನಗಧೀಕರಣ ಹಾಗೂ ಡಿ ಸಿ ಆರ್ ಜೀ ಸೌಲಭ್ಯಕ್ಕಾಗಿ ಮಾನ್ಯ ಮುಖ್ಯ ಮಂತ್ರಿಗಳಿಗೆ ತಹಸೀಲ್ದಾರ ಮುಖಾಂತರ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ನಿವೃತ್ತ ಶಿಕ್ಷಕ ದೇಸು ರಾಠೋಡ 1-7-2022 ರಿಂದ 31-7-2024 ರ ವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದಿದ ಸರಕಾರಿ ನೌಕರರ ಗಳಿಕೆ ರಜೆ ನಗಧೀಕರಣ ಹಾಗೂ ಕಮುಟೇಷನ್ ಸೌಲಭ್ಯ ಕಲ್ಪಿಸದೆ ಇರುವದರಿಂದ ಆರ್ಥಿಕವಾಗಿ ವಂಚಿತರಾಗಿರುತ್ತಾರೇ ಆದ್ದರಿಂದ ಈ ಅಂಶಗಳ ಹಿನ್ನಲೆಯಲ್ಲಿ ರಾಜ್ಯ 7 ನೇ ವೇತನ ಆಯೋಗದ ಅನುಷ್ಟಾನದಲ್ಲಿ ದಿನಾಂಕ 01-07-2022 ರಿಂದ ಸೇವಾ ನಿವೃತ್ತಿ ಹೊಂದಿದ ಸರಕಾರಿ ನೌಕರರಿಗೆ ಈ ಸೌಲಭ್ಯಗಳು ಅನ್ವಯವಾಗುವಂತೆ ಅನುಷ್ಟಾನಗೊಳಿಸಲು ಮಾನ್ಯ ಮುಖ್ಯ ಮಂತ್ರಿಗಳಿಗೆ ಈ ಮೂಲಕ ವಿನಂತಿಸುತ್ತಿದ್ದೇವೆ ಎಂದರು. ಈ ಎಲ್ಲ ಸೌಲಭ್ಯಗಳ ಈಡೇರಿಸಲು ಅಗ್ರಹಿಸಿ ತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ದೇಸು ರಾಠೋಡ, ಬಸಣ್ಣ ಪಂಚಕಟ್ಟಿ, ಸಂಗಮನಾಥ ಸಾಳಾಪುರ, ರಾಜಕುಮಾರ ಗೌರ, ನಾಗನಾಥ ಭೂಶೆಟ್ಟಿ, ಹೊನ್ನಪ್ಪ ಜವಳಿ, ರೇವಣಸಿದ್ಧ ಜಮಾದಾರ, ಸೋಮಲು ರಾಠೋಡ, ಸೂರ್ಯಕಾಂತ ಬೇಲೂರ, ಅಂಬಣ್ಣ ಕುದರಿ, ಅಶೋಕ್ ದೇಸಾಯಿ, ಮಲ್ಲಿಕಾರ್ಜುನ ಭೂತಗುಣಕಿ, ಸಿದ್ದಣ್ಣ ದೈತಾನ, ನಿಂಗಪ್ಪ ಬಲ್ಲ, ಅಶೋಕ್ ಜಗದಿ,ಶ್ರೀಶೈಲ ಬಡದಾಳ, ಸದಾಶಿವ ದೊಡ್ಮನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ ಚನ್ನು ಹಿಂಚಗೇರಿ ಅಫಜಲಪುರ