ಅರ್ಹ ಕಾರ್ಮಿಕರು ಇಲಾಖೆ ಸೌಲಭ್ಯ ಪಡೆಯಿರಿ: ಸಿದ್ದೇಶ್
ತುಮಕೂರು: ಜಿಲ್ಲೆಯ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಬಹಳಷ್ಟು ಸೌಲಭ್ಯಗಳಿದ್ದು ಆ ಸೌಲಭ್ಯಗಳನ್ನು ಪಡೆಯಲು ಅರ್ಹ ಫಲಾನುಭವಿಗಳು ಮುಂದಾಗಬೇಕೆAದು ತಹಸಿಲ್ದಾರ್ ಸಿದ್ದೇಶ್ ಕಾರ್ಮಿಕರಿಗೆ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಹಯೋಗದೊಂದಿಗೆ ನಗರಕ್ಕೆ ಸಮೀಪವಿರುವ ಬೆಳಗುಂಬದಲ್ಲಿ ಏರ್ಪಡಿಸಿದ್ದ “ಕಾರ್ಮಿಕ ಇಲಾಖೆ ನಡೆ-ಕಾರ್ಮಿಕರ ಕಡೆ”ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಲಾಖೆಯಿಂದ ಸಿಗುವ ಯಾವುದೇ ಸೌಲಭ್ಯಗಳಾಗಲಿ, ಅರ್ಹ ಫಲಾನುಭವಿಗಳು ಪಡೆಯಬೇಕು, ಕಾರ್ಮಿಕರು ಸೂಕ್ತ ದಾಖಲಾತಿಗಳನ್ನು ನೀಡಿ ಹೆಸರು ನೋಂದಾಯಿಸಿಕೊAಡರೆ ನಕಲಿ ಫಲಾನುಭವಿಗಳು ಪಟ್ಟಿಯಿಂದ ಡಿಲೀಟ್ ಆಗುತ್ತಾರೆ, ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ದಾಖಲಾತಿ ನೀಡಿ ಹೆಸರು ನೋಂದಾಯಿಸಿಕೊAಡು ಸೌಲಭ್ಯ ಪಡೆಯ ಬೇಕೆಂದರು. ಕಾರ್ಮಿಕ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಗ್ರಾಮೀಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕೆಂದರು.
ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ತೇಜಾವತಿ ಮಾತನಾಡಿ ಪ್ರತಿ ತಿಂಗಳು ಮೂರನೇ ಶುಕ್ರವಾರ ಪ್ರತಿ ತಾಲ್ಲೂಕಿನ ಒಂದು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಕಾರ್ಮಿಕ ಇಲಾಖೆ ನಡೆ-ಕಾರ್ಮಿಕರ ಕಡೆ ಕಾರ್ಯಕ್ರಮವನ್ನು ನಡೆಸಲಿದ್ದು ಈ ಹಿನ್ನೆಲೆಯಲ್ಲಿ ಇಲಾಖೆ ನಿರೀಕ್ಷಕರುಗಳು ಸರ್ವೇ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲಿದ್ದಾರೆ.
ಕಟ್ಟಡ ಕಾರ್ಮಿಕರು ಗೊಂದಲಕ್ಕೀಡಾಗಬೇಡಿ, ಗ್ರಾಪಂ ಪಿ ಡಿ ಓ, ಕಾರ್ಯದರ್ಶಿ, ಗ್ರಾಮ ಲೆಕ್ಕಿಗರ ಬಳಿ ದೃಢೀಕರಣ ಪತ್ರ, ಆಧಾರ್ ಕಾರ್ಡ್ ದಾಖಲೆ ತಂದ್ರೆ ಸಾಕು. ಗುತ್ತಿಗೆದಾರ ರ ಪತ್ರ, ಹಾಜರಾತಿ ದಾಖಲೆ ಅಗತ್ಯವಿಲ್ಲ ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ. ಇಲಾಖೆಯ ಸೌಲಭ್ಯಗಳಿಂದ ವಂಚಿತರಾಗಬೇಡಿ ಎಂದು ಕಿವಿ ಮಾತು ಹೇಳಿದರು.
ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಫಲಾನುಭವಿಗಳಾಗಿ ಹೆಸರು ನೋಂದಾಯಿಸಿ ಸೌಲಭ್ಯ ಪಡೆಯಲು ಮುಂದೆ ಬರಬೇಕೆಂದು ಮನವಿ ಮಾಡಿರುವ ಕಾರ್ಮಿಕ ಅಧಿಕಾರಿ ಈಗಾಗಲೇ ಹೆಸರು ನೋಂದಾಯಿಸಿ ಕೊಂಡಿರುವವರಲ್ಲಿ ಅರ್ಹರಲ್ಲದಿದ್ದವರು ಹೆಸರು ನೋಂದಾಯಿಸಿದ್ದಾರೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಕೂಡಲೇ ಅವರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗುವುದು, ಯೋಜನೆಗಳಿಗೆ ಅರ್ಹರಾದ ಫಲಾನುಭವಿಗಳು ಮಾತ್ರ ಈ ಸೌಲಭ್ಯ ಪಡೆಯಬೇಕೆಂಬ ಉದ್ದೇಶ ಎಲ್ಲರದ್ದು. ನಕಲಿ ಫಲಾನುಭವಿಗಳ ಹೆಸರು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಾರ್ಮಿಕ ನಿರೀಕ್ಷಕ ವೆಂಕಟೇಶ್ ಬಾಬು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಬೆಳಗುಂಬ ಗ್ರಾ ಪಂ. ಪಿಡಿಒ ಜ್ಯೋತಿ ಮಾತನಾಡಿ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗಾಗಿ ಹಲವಾರು ಸೌಲಭ್ಯಗಳಿವೆ ಎಷ್ಟೋ ಮಂದಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲ. ಸೌಲಭ್ಯ ಪಡೆಯುತ್ತಿರುವ ಕಾರ್ಮಿಕರು ಇತರ ಕಾರ್ಮಿಕರಿಗೂ ಮಾಹಿತಿ ನೀಡಿ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊAಡು ಸಿಗುವಂತಹ ಸೌಲಭ್ಯ ಪಡೆಯಲು ತಿಳಿಸಿ, ಗ್ರಾಪಂ ಮಟ್ಟದಲ್ಲಿ ಇಲಾಕ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಒಳ್ಳೆಯ ಕಾರ್ಯ ಎಂದರು.
೦೯ ಮಂದಿಗೆ ವೈದ್ಯಕೀಯ ಧನಸಹಾಯ ಮಂಜೂರಾತಿ ಪತ್ರ, ೧೪ ಮಂದಿಗೆ ವಿವಾಹ ಧನಸಹಾಯ ಪತ್ರ, ೧೫ ಮಂದಿಗೆ ಕಟ್ಟಡ ಕಾರ್ಮಿಕರ ನೋಂದಣಿ ಕಾರ್ಡ್, ೩೫ ಮಂದಿಗೆ ಇ-ಶ್ರಮ್ ಕಾರ್ಡ್ ವಿತರಿಸಲಾಯಿತು.
ಅರ್ಹ ಕಾರ್ಮಿಕರು ಇಲಾಖೆ ಸೌಲಭ್ಯ ಪಡೆಯಿರಿ, “ಕಾರ್ಮಿಕ ಇಲಾಖೆ ನಡೆ-ಕಾರ್ಮಿಕರ ಕಡೆ”

Leave a comment
Leave a comment