ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಾಡೋಜ ಡಾ.ವೂಡೆ ಪಿ. ಕೃಷ್ಣ ಅವರಿಗೆ ಪೀಠಾಧ್ಯಕ್ಷ ಡಾ.ಹನುಮಂತನಾಥಸ್ವಾಮೀಜಿ ನೇತೃತ್ವದಲ್ಲಿ ಅಭಿನಂಧಿಸಲಾಯಿತು.
ಸಂಸ್ಕಾರ ಶಿಭಿರದಲ್ಲಿ ಡಾ. ಹನುಂತನಾತಸ್ವಾಮೀಜಿ ಅವರಿಗೆ ಭಕ್ತರಿಂದ ಬೆಳ್ಳಿ ಕಿರೀಟ ದಾರಣೆ ಮಾಡುವ ಮೂಲಕ ಕುಂಚಿಟಿಗರ ಜಗದ್ಗುರು ಎಂದು ಘೋಷಣೆ ಮಾಡುವುದರ ಮೂಲಕ ಪುಷ್ಪನಮನ ಸಲ್ಲಿಸಲಾಯಿತು.
ಕೇವಲ ಹಣ ಸಂಪಾದನೆಯನ್ನೇ ಮುಖ್ಯ ವೃತ್ತಿಯನ್ನಾಗಿಟ್ಟುಕೊಂಡು ಎಲ್ಲರು ಒತ್ತಡದ ಬದುಕಿನಲ್ಲಿ ಓಡುತ್ತಿದ್ದೀರಿ ನಿಮ್ಮ ಮಕ್ಕಳನ್ನು ಸಮಾಜಕ್ಕೆ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಲು ಯಾರೂ ಚಿಂತಿಸುತ್ತಿಲ್ಲ, ಮಕ್ಕಳಿಗೆ ಕೇವಲ ಹಣ ನೀಡಿದರೆ ಎಲ್ಲವೂ ನೀಡಿದಂತೆ ಎನ್ನುವ ತಪ್ಪು ಕಲ್ಪನೆಯಲ್ಲಿ ಪೋಷಕರಿದ್ದು ಇದರಿಂದ ಹೊರ ಬರಬೇಕು ಮಕ್ಕಳಿಗೆ ಸಂಸ್ಕಾರ, ಪ್ರೀತಿ, ಪ್ರೇಮ ಸಂಬಂದಗಳ ಮೌಲ್ಯಗಳನ್ನು ತಿಳಿಸದೇ ಹೋದಲ್ಲಿ ಎಲ್ಲವೂ ವ್ಯರ್ಥವಾಗಲಿದ್ದು ಎಲ್ಲರೂ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಎಂದರು