ಕೊರಟಗೆರೆ ಮೇ. 14: ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಉತ್ತಮ ರೀತಿಯಲ್ಲಿ ರಾಜ್ಯದ ಜನರಿಗೆ ಉತ್ತಮ ಆಢಳಿತ ನೀಡಲಿ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥಸ್ವಾಮೀಜಿ ಭಾನುವಾರ ಶುಭ ಹಾರೈಸಿದ್ದಾರೆ.
ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬರಲು ರಾಜ್ಯಾಧ್ಯಂತ 30 ಲಕ್ಷಕ್ಕೂ ಹೆಚ್ಚಿರುವಂತಹ ಕುಂಚಿಟಿಗ ಸಮುದಾಯ ಕಾಂಗ್ರೇಸ್ ಪಕ್ಷಕ್ಕೆ ಬಂಬಲಿಸಿದ್ದು ಈ ಬಾರಿ ಸಮುದಾಯದ ಹಿರಿಯರಾದ ಶಿರಾ ಕ್ಷೇತ್ರದಿಂದ ಸ್ಪರ್ಧೆಮಾಡಿ ಏಕೈಕ ಶಾಸಕ ಟಿ.ಬಿ ಜಯಚಂದ್ರ ಆಯ್ಕೆಯಾಗಿದ್ದು ಸಮುದಾಯಕ್ಕೆ ಸಮಾಜಿಕ ನ್ಯಾಯದ ಅಡಿಯಲ್ಲಿ ಇವರಿಗೆ ಸಂಪುಟದಲ್ಲಿ ಅತ್ಯುತ್ತಮ ಮಂತ್ರಿ ಸ್ಥಾನವನ್ನು ನೀಡುವುದರ ಮೂಲಕ ಸಮುದಾಯಕ್ಕೆ ನ್ಯಾಯ ನೀಡಬೇಕು ಎಂದು ಸ್ವಾಮೀಜಿ ಒತ್ತಾಯ ಮಾಡಿದ್ದಾರೆ.
ಅದೇ ರೀತಿ ಸಮುದಾಯ 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದು ಈಗ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಕೇಂದ್ರ ಮೀಸಲಾತಿಯಲ್ಲೂ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು ಇದಕ್ಕೆ ಬೆಂಬಲ ಸೂಚಿಸುವುದರೊಂದಿಗೆ ಸಮುದಾಯ ಪಕ್ಷದ ನಿಷ್ಠಾವಂತ ಹಿರಿಯ ಶಾಸಕರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನವನ್ನುನೀಡಬೇಕು ಎಂದು ಮನವಿ ಮಾಡಿದ್ದು ಸಮುದಾಯವು ನಿರಂತರವಾಗಿ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥಸ್ವಾಮೀಜಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ
Leave a comment
Leave a comment