ಇಂದು ವಿದ್ಯುತ್ ವ್ಯತ್ಯಯ
ತುಮಕೂರು(ಕ.ವಾ.)ಜೂ.೩: ಬೆವಿಕಂ ನಗರ ಉಪವಿಭಾಗ-೧ರ ಅಂತರಸನಹಳ್ಳಿ ೨೨೦/೬೬/ಕೆವಿಎ ಸ್ವೀಕರಣಾ ಕೇಂದ್ರದಿAದ ಹೊರಡುವ ೧೧ಕೆವಿ ಮಾರ್ಗದಲ್ಲಿ ಫೀಡರ್ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿAದ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಪಿ. ನಾಗರಾಜು ತಿಳಿಸಿದ್ದಾರೆ.
ಫೀಡರ್ ಎಎಫ್-೨ತಪ್ಪನಹಳ್ಳಿ ವ್ಯಾಪ್ತಿಯಲ್ಲಿ ಬರುವ ಮಲ್ಲೇನಹಳ್ಳಿ, ಅರಕೆರೆ, ಅಜ್ಜಪ್ಪನಹಳ್ಳಿ, ಸ್ವಾಂದೇನಹಳ್ಳಿ. ಎಎಫ್-೩ ಯಲ್ಲಾಪುರ ವ್ಯಾಪ್ತಿಯ ಅಂತರಸನಹಳ್ಳಿ, ಸತ್ಯಸಾಯಿ ಲೇಔಟ್, ಸತ್ಯಮಂಗಲ, ಎಎಫ್-೪ ಹ್ಯಾಂಡ್ ಟೋಲ್ನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಎಎಫ್-೧೬ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಜೂನ್ ೪ರಂದು ಬೆಳಿಗ್ಗೆ ೯ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ವಿದ್ಯುತ್ ವ್ಯತ್ಯಯ,ತುಮಕೂರು
Leave a comment
Leave a comment