ಕೊರಟಗೆರೆ ಮೇ. 1:- ಶಿಕ್ಷಣದಿಂದ ಭಲಿಷ್ಟ ದೇಶ ನಿರ್ಮಾಣವಾಗುವುದಿಲ್ಲ ದೇಶ ಭನಿಷ್ಟವಾಗಿ ನಿರ್ಮಾಣವಾಗಲು ಸಂಸ್ಕಾರದಿಂದ ಮಾತ್ರ ಸಾಧ್ಯ ಎಂದು ಶೇಷಾದ್ರಿ ಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯರ್ದಶಿ ನಾಡೋಜ ಡಾ.ವೂಡೆ ಪಿ. ಕೃಷ್ಣ ತಿಳಿಸಿದರು.
ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಂಸ್ಥಾನ ಮಠದಲ್ಲಿ 2 ನೇ ಸಂಸ್ಕಾರ ಶಿಭಿರದಲ್ಲಿ ಸೋಮವಾರ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣವನ್ನು ಮಾಡಿದರು.
ಮಕ್ಕಳನ್ನು ನಾವು ಚಾರಿತ್ರ್ಯವಂತರಾಗಿ,ಶೀಲವಂತರಾಗಿ ರೂಪಿಸುವುದರ ಮೂಲಕ ಸದೃಡ ಸಮಾಜಕ್ಕೆ ಆಸ್ತಿಯನ್ನಾಗಿ ಮಾಡಬೇಕು, ಇಂದು ಶಾಲಾ ಕಾಲೇಜಿನಲ್ಲಿ ಕೇವಲ ಅಕ್ಷರ ಜ್ಞಾನವನಷ್ಟೇ ನೀಡುತ್ತಿದ್ದು ನೈತಿಕ ಶಿಕ್ಷಣಕ್ಕೆ ಆಧ್ಯತೆಯನ್ನು ನೀಡದಿರುವುದರ ಕಾರಣವೇ ಆತಂಕವಾದ ಹೆಚ್ಚುತ್ತಿದೆ ಎಂದು ವಿಷಾದಿಸಿದರು.
ಮಕ್ಕಳು ಬೇಸಿಗೆ ರಜೆಯಲ್ಲಿ ಕೇವಲ ಟಿ.ವಿ ಮೊಬೈಲ್ ಗಳ ದಾಸರಾಗುತ್ತಿದ್ದ ಈ ಸಮಯವನ್ನು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಸಂಸ್ಕಾರಯುತ ನಮ್ಮ ಸಂಸ್ಕೃತಿಯನ್ನು ಸಾರುವಂತಹ ವಚನ, ದೇಸೀಯ ಕಲೆಗಳು, ನೃತ್ಯಗಳು, ನೀತಿ ಕತೆಗಳು ಶ್ಲೋಕ ಮತ್ತು ಹಾಡುಗಳನ್ನು ಕಲಿಸುವುದರ ಮೂಲಕ ಮಕ್ಕಳಲ್ಲಿ ನವಚೈತನ್ಯವನ್ನು ರೂಪಿಸಿದ್ದು ಹಿಂದೆ ಕೇವಲ ಆದಿಚುಂಚನಗಿರಿ ಮಠದಲ್ಲಿ ಮಾತ್ರ ನಡೆಯುತ್ತಿದ್ದ ಸಂಸ್ಕಾರ ಶಿಭಿರ ಈಗ ಕುಂಚಿಟಿ ಮಹಾಸಂಸ್ಥಾನ ಮಠದಲ್ಲಿಯೂ ಆರಂಭವಾಗಿರುವುದು ಅತ್ಯುತ್ತಮ ಬೆಳವಣಿಗೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಸು ಹಾನಗಲ್ಲ,ಆಯುರ್ವೇದ ತಜ್ಞೆ ಡಾ. ಕೆ. ಸ್ನೇಹ, ವಿಶ್ರಾಂತ ಸಂಸ್ಕೃತ ಪ್ರಾಂಶುಪಾಲ ಡಾ. ವೆಂಕಟೇಶಪ್ಪ, ಮಕ್ಕಳ ತಜ್ಞ ಡಾ. ನವೀನ್ ದೇವರಾಜಯ್ಯ, ನಿವೃತ್ತ ಪ್ರಾಚಾರ್ಯ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಸಿಂಡಿಕೇಟ್ ಸದಸ್ಯ ಡಾ. ಸಿ ನಂಜುಂಡಯ್ಯ, ಸರ್ಕಲ್ ಇನ್ಸ್ ಪೆಕ್ಟರ್ ಮುತ್ತುರಾಜ್, ಡಿ.ಸಿ ಶ್ರೀನಿವಾಸ್ ಮತ್ತು ಇತರರು ಭಾಗವಹಿಸಿದ್ದರು