ತುಮಕೂರು: ಮುಂದಿನ ದಿನಗಳಲ್ಲಿ ಇ-ಆಟಗಳು ದೊಡ್ಡ ಮಟ್ಟದಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಲಿಂಗೇಗೌಡರು ಅವರು ಹೇಳಿದರು.
ನಗರದ ಶ್ರೀ ಸಿದ್ದಾರ್ಥ ಇಂಜಿನಿಯರಿAಗ್ ಕ್ಯಾಂಪಸ್ನಲ್ಲಿರುವ ಎಸ್ಎಸ್ಐಬಿಎಮ್ ಕಾಲೇಜು ಮತ್ತು ವಶಿಷ್ಠ -ಇ ಸ್ಪೋರ್ಟ್ ಸಹಯೋಗದಲ್ಲಿ ಆಯೋಜಿಸಲಾದ ಎರಡು ದಿನಗಳ ‘ಗೇಮ್ ಆನ್ ಕ್ಯಾಂಪಸ್’ ಇ -ಸ್ಪರ್ಧೆಗಳನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಆನ್ಲೈನ್ ಗೇಮಿಂಗ್ ಅನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿ ಸೇರಿಸಿಕೊಳ್ಳುವುದರ ಜೊತೆಗೆ ಜಾಗತಿಕ ವೇದಿಕೆಯಲ್ಲಿ ಗೇಮಿಂಗ್ ಮತ್ತು ಎಸ್ಪೋರ್ಟ್ಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ. ಭಾರತದಲ್ಲಿ, ಆನ್ಲೈನ್ ಗೇಮಿಂಗ್ ವಿಭಾಗವು ಭಾರತೀಯ ಮಾಧ್ಯಮ ಮತ್ತು ಮನರಂಜನಾ ವಲಯದ ನಾಲ್ಕನೇ ದೊಡ್ಡ ವಿಭಾಗವಾಗಿ ಇತ್ತೀಚಿಗೆ ಹೊರಹೊಮ್ಮುತ್ತಿದೆ ಎಂದು ಡಾ. ಲಿಂಗೇಗೌಡರು ಅವರು ಹೇಳಿದರು.
ಆಟಗಳು ಪ್ರತಿಯೊಬ್ಬರ ಬಾಲ್ಯ ಮತ್ತು ಯೌವ್ಯನದ ಅವಿಭಾಜ್ಯ ಅಂಗವಾಗಿದೆ. ರಂಜನೆಗೆ ಆಟಗಳು ಒಂದು ಮಾರ್ಗವಾಗಿದೆ. ತಮ್ಮನ್ನು ಮತ್ತು ಇತರರನ್ನು ಪರಿಗಣಿಸುವಾಗ ಹೊಸದನ್ನು ಕಲಿಯಲು ಸಂವಾದಾತ್ಮಕ ಮತ್ತು ಪರಸ್ಪರ ತೊಡಗಿಸಿಕೊಳ್ಳುವ ಮಾರ್ಗವನ್ನು ಇ-ಆಟಗಳಲ್ಲಿ ಕಾಣಬಹುದು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್ಎಸ್ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರವಿಪ್ರಕಾಶ್ ಎಂ ಎಸ್ ಅವರು, ಮಾತನಾಡಿ, ‘ಇ ಆಟಗಳನ್ನು’ ಬಿಹಾರದಲ್ಲಿನ ಶಿಕ್ಷಣದಲ್ಲಿ ಸೇರ್ಪಡಿಸಲಾಗಿದೆ. ಏಷ್ಯಾ ಗೇಮ್ಸ್ ಮತ್ತು ಒಲಂಪಿಕ್ಸ್ ಆಟಗಳಲ್ಲಿ ಇ -ಸ್ಪೋರ್ಟ್ಸ್ ಸದ್ದಯದಲ್ಲಿಯೇ ಸೇರ್ಪಡೆಯಾಗಲಿದ್ದು, ದೇಶಕ್ಕಾಗಿ ಇ-ಆಟಗಳನ್ನು ಆಡುವ ಅವಕಾಶಗಳು ಮುಂದೆ ಬರಲಿವೆ” ಎಂದರು.
ಸಮಾರಂಭದಲ್ಲಿ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳ ಆಪ್ತ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ ಅವರು ವಸಿಷ್ಠ ಇ ಸ್ಪೋರ್ಟ್ ಕಾರ್ಯನಿರ್ವಾಹಕ ಅಧಿಕಾರಿ ಮನೋಜ್ ಅವರನ್ನು ಸನ್ಮಾನ ಮಾಡುತ್ತಾ, ತುಮಕೂರಿನ ಇತಿಹಾಸದಲ್ಲಿ ಈ ಸ್ಪೋರ್ಟ್ಸ್ನ್ನು ಆಯೋಜಿಸಿದ ಮೊಟ್ಟ ಮೊದಲ ಖ್ಯಾತಿ ಶ್ರೀ ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜಿಗೆ ಸಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ ಮಮತ, ಎಸ್ಎಸ್ಐಬಿಎಂ ಕಾಲೇಜಿನ ವಿದ್ಯಾರ್ಥಿಯಾದ ಹಾಗೂ ಇ-ಸ್ಪೋರ್ಟ್ಸ್ ಸಂಯೋಜಕ ಸಂದೀಪ್ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಎರಡು ದಿನಗಳಕಾಲ ನಡೆಯುತ್ತಿರುವ ಇ-ಸ್ಪೋರ್ಟ್ಸ್ನಲ್ಲಿ ಸಾವಿರಾರು ಸ್ಪರ್ಧಿಗಳು ಭಾಗವಹಿಸಿದ್ದು ಆಕರ್ಷಕ ಸಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಾಳೆ ಎರಡು ದಿನಗಳ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ