ತುಮಕೂರು:ಅಕ್ಟೋಬರ್ ೧೬ ರಿಂದ ೧೮ರ ವರೆಗೆ ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜಿನಲ್ಲಿ ನಡೆದ ದಸರಾ ಸಿಎಂ ಶೂಟಿಂಗ್ನಲ್ಲಿ ತುಮಕೂರಿನ ಸ್ಪರ್ಧಿಗಳು ಒಂದು ಚಿನ್ನ, ಎರಡು ಬೆಳ್ಳಿ, ೪ ಕಂಚಿನ ಪದಕ ಪಡೆಯುವ ಮೂಲಕ ಜಿಲ್ಲೆಗೆ ೭ ಪದಕಗಳು ಲಭಿಸಿವೆ.
ಪುರುಷರ ವಿಭಾಗದಲ್ಲಿ ಪೂರ್ಣಚಂದ್ರ ೧೦ ಮೀ.ಎರ್ ಲೈಫಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದರೆ,೧೦ ಮೀಟರ್ ರೈಫಲ್ ಮಹಿಳೆಯರ ವಿಭಾಗದಲ್ಲಿ ತುಮಕೂರಿನ ಸಾನಿಕ ಸುಲ್ತಾನ ಕಂಚಿನ ಪದಕ ಪಡೆದಿದ್ದಾರೆ. ಹಾಗೂ ಧ್ಯಾನ್ ಟಿ ಎಂ ,ವಿಜೇತ ಶೆಟ್ಟಿ ೧೦ ಮೀಟರ್ ಪಿಸ್ತೂಲ್ ತಂಡದ ವಿಭಾಗದಲ್ಲಿ ಕಂಚಿನ ಪದಕ ಗಳಿಸಿರುತ್ತಾರೆ, ಕಿರಣ್ ನಂದನ ಹಾಗೂ ಅತಿಥಿ.ಜಿ.೧೦ ಮೀಟರ್ ರೈಫಲ್ ಮಹಿಳೆಯರ ತಂಡದಲ್ಲಿ ರಜತಾ ಪದವನ್ನು ಗಳಿಸಿರುತ್ತಾರೆ.
ಪ್ರಥಮ ಬಾರಿಗೆ ದಸರಾ ಸಿ ಎಂ ಕಪ್ಪಿನಲ್ಲಿ ಪೂರ್ಣ ಚಂದ್ರ ಹಾಗೂ ಸಾನಿಕ ಸುಲ್ತಾನ ವ್ಯಕ್ತಿಕ ವಿಭಾಗದಲ್ಲಿ ಪದಕಗಳನ್ನು ಗಳಿಸಿ ತುಮಕೂರಿಗೆ ಕೀರ್ತಿ ತಂದಿರುತ್ತಾರೆ.ಇವರು ತುಮಕೂರಿನ ವಿವೇಕಾನಂದ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಸಂಸ್ಥೆಯಲ್ಲಿ ತರಬೇತಿ ಪಡೆದು ಇತ್ತೀಚೆಗೆ ಖೆಲೋ ಇಂಡಿಯಾ ಎಕ್ಸಲೆನ್ಸಿ ಸೆಂಟರ್ನಲ್ಲಿ ತರಬೇತಿ ಪಡೆಯಲು ಆಯ್ಕೆ ಆಗಿರುತ್ತಾರೆ.ಇವರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ತರಬೇತುದಾರರಾದ ಅನಿಲ್ ರವರು ಅಭಿನಂದಿಸಿದ್ದಾರೆ.