ನಂದಿನಿ ಸಿಹಿ ಉತ್ಸವಕ್ಕೆ ಚಾಲನೆತುಮಕೂರು- ರಾಜ್ಯದಲ್ಲಿ ಕೆಎಂಎಫ್ ವತಿಯಿಂದ ಸ್ವಾತಂತ್ರೊ÷್ಯÃತ್ಸವದ ಅಂಗವಾಗಿ ಹಮ್ಮಿಕೊಂಡಿರುವ ನಂದಿನಿ ಸಿಹಿ ಉತ್ಸವಕ್ಕೆ ನಗರದ ಬಿ.ಹೆಚ್. ರಸ್ತೆಯಲ್ಲಿರುವ ಗ್ರಾಹಕರ ಸೇವಾ ಕೇಂದ್ರದಲ್ಲಿ ಚಾಲನೆ ನೀಡಲಾಯಿತು. ಸ್ಪಾತಂತ್ರೊ÷್ಯÃತ್ಸವದ ಪ್ರಯುಕ್ತ ಆ. ೧೫ ರಿಂದ ಸೆ. ೨೦ರ ವರೆಗೆ ಹಮ್ಮಿಕೊಂಡಿರುವ ನಂದಿನಿ ಸಿಹಿ ಉತ್ಪನ್ನ ಉತ್ಸವವನ್ನು ತುಮುಲ್ ಅಧ್ಯಕ್ಷ ಮಹಾಲಿಂಗಯ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಂದಿನಿ ಸಿಹಿ ಉತ್ಪನ್ನಗಳ ಮಾರಾಟ ದರಗಳ ಮೇಲೆ ಶೇ. ೨೦ ರಷ್ಟು ರಿಯಾಯ್ತಿ ನೀಡಲಾಗಿದ್ದು, ಗ್ರಾಹಕರು ಈ ವಿಶೇಷ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಕೆಎಂಎಫ್ ವತಿಯಿಂದ ಸ್ವಾತಂತ್ರೊ÷್ಯÃತ್ಸವ, ವರಮಹಾಲಕ್ಷಿ÷್ಮ ಸೇರಿದಂತೆ ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ. ೨೦ ರಷ್ಟು ರಿಯಾಯ್ತಿ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಹಾಗಾಗಿ ರಾಜ್ಯಾದ್ಯಂತ ಸಿಹಿ ಉತ್ಸವ ನಡೆಸಲಾಗುತ್ತಿದ್ದು, ತುಮಕೂರಿನಲ್ಲಿ ಈ ಉತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದರು. ಈ ಉತ್ಸವದಲ್ಲಿ ನಂದಿನಿಯ ಐದು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಶೇ. ೨೦ ರಷ್ಟು ರಿಯಾಯ್ತಿ ಸೆ. ೨೦ರ ವರೆಗೂ ಜಾರಿಯಲ್ಲಿರುತ್ತದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ತುಮುಲ್ ವ್ಯವಸ್ಥಾಪಕ ನಿರ್ದೇಶಕ ಜಿ. ಶ್ರೀನಿವಾಸನ್, ಮಾರುಕಟ್ಟೆ ವ್ಯವಸ್ಥಾಪಕ ಹೆಚ್.ಎಂ. ವಿದ್ಯಾನಂದ್, ಉಪವ್ಯವಸ್ಥಾಪಕ ರವಿಕಿರಣ್ ಟಿ.ಕೆ., ಸಹಾಯಕ ವ್ಯವಸ್ಥಾಪಕರಾದ ಶಿಲ್ಪ ಎಂ., ನರಸಿಂಹೇಗೌಡ ಡಿ., ಸಿಬ್ಬಂದಿಗಳಾದ ದೇವರಾಜು ಕೆ.ಎಲ್., ಶ್ರೀನಿವಾಸ್, ಗಿರೀಶ್, ವಿಶ್ವನಾಥ್ ಬಿ.ಎಸ್. ಪವನಕುಮಾರ್ ಸಿ.ಎಸ್., ನಿತಿನ್ ಮತ್ತಿತರರು ಉಪಸ್ಥಿತರಿದ್ದರು.