ಕನ್ನಡ ರಂಗಭೂಮಿಯ ಅದ್ವಿತೀಯರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿವೀರಣ್ಣನವರು ಅಂತರಾಷ್ಟ್ರೀಯವಾಗಿ ಖ್ಯಾತರಾಗಿದ್ದರು. ಅವರ ಕೊಡುಗೆ ರಂಭೂಮಿಗೆ ಗುರುತರವಾದದ್ದು. ಅವರ ಮುಂದರಿಕೆಯಾಗಿ ತುಮಕೂರು ಜಿಲ್ಲೆಯಲ್ಲಿ ಹತ್ತಾರು ರಂಗತoಡಗಳು ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಗಿವೆ. ಮೆಳೇಹಳ್ಳಿಯಂತಹ ಪುಟ್ಟ ಹಳ್ಳಿಯಲ್ಲಿ ಡಮರುಗ ತಂಡವೂ ರಾಷ್ಟ್ರೀಯವಾಗಿ ಅಂತರಾಷ್ಟ್ರೀಯವಾಗಿ ಗುರುತಿಸಿಕೊಳ್ಳುತ್ತಿದೆ. ಅವರ ಇಂತಹ ಕಲಾಸಂಸ್ಕೃತಿ ಕಾರ್ಯಕ್ಕೆ ಪ್ರಜ್ಞಾವಂತರು ಕೈಜೋಡಿಸಬೇಕಿದೆ. ಆಗ ಅವರಿಗೆ ಇನ್ನಷ್ಟು ಬಲ ಬರುತ್ತದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ಜಿ.ಸಿದ್ಧರಾಮಯ್ಯನವರು ಅಭಿಪ್ರಾಯಪಟ್ಟರು.

ಅವರು ಮೆಳೇಹಳ್ಳಿಯ ವಿ.ರಾಮಮೂರ್ತಿ ರಂಗಸ್ಥಳದಲ್ಲಿ 27-02-2024ರಂದು ಡಮರುಗ ರಂಗತoಡ ಆಯೋಜಿಸಿದ್ದ 5 ದಿನಗಳ ದೇಸೀ ರಂಗೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ವೇದಿಕೆಯಲ್ಲಿ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಬೆಳ್ಳಾವೆ ಶಿವಕುಮಾರ್, ಆರ್ಥಿಕ ಸಾಕ್ಷರತಾ ಸಲಹೆಗಾರ ಎಸ್.ದಯಾನಂದ್, ಬಿ.ಎಂ.ಎಸ್. ಕಾಲೇಜು ಉಪನ್ಯಾಸಕಿ ಹೇಮಲತ, ನಿವೃತ್ತ ಶಿಕ್ಷಕ ಹನುಮಂತಯ್ಯ ಉಪಸ್ಥಿತರಿದ್ದರು.