ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಗೆ ಇಂದುಮತಿ ಲಮಾಣಿ ಆಯ್ಕೆ : ಬಂಜಾರ ಸಮುದಾಯದಲ್ಲಿ ಹರ್ಷತುಮಕೂರು: ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಗೆ ಆಯ್ಕೆಯಾದ ಇಂದುಮತಿ ಲಮಾಣಿ ಇದು ದಲಿತ ಸಮುದಾಯ ಹಾಗೂ ಲಂಬಾಣಿ ಸಮಾಜಕ್ಕೆ ಸಂದ ಗೌರವವಾಗಿದೆ ಎಂದು ಕರ್ನಾಟಕ ಬಂಜಾರ ಜಾಗೃತಿ ದಳದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ(ತಿಪ್ಪಸರ್ ನಾಯ್ಕ್) ಹರ್ಷ ವ್ಯಕ್ತಪಡಿಸಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತು ೨೦೧೮ ರಿಂದ ೨೦೨೩ವರೆಗಿನ ಆರು ವರ್ಷಗಳ ಅವಧಿಯಲ್ಲಿ ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರಕಟಿಸಿದ್ದು ಆರು ಮಂದಿಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದಲಿತ ಸಾಹಿತ್ಯದಲ್ಲಿ ಗಣನೆಯ ಸಾಧನೆ ಮಾಡಿರುವ ಸಾಹಿತ್ಯ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಶ್ರಾವಣಬೆಳಗೊಳದಲ್ಲಿ ನಡೆದ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಆ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ ಸ್ಥಾಪಿಸಿದೆ. ದಲಿತ ಸಾಹಿತ್ಯಗಳ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ನೀಡಬೇಕೆಂಬುದು ದತ್ತಿಯ ಮೂಲ ಆಶಯವಾಗಿದೆ. ಕಳೆದ ಆರು ವರ್ಷಗಳಿಂದ ಈ ಪ್ರಶಸ್ತಿಯನ್ನು ಪ್ರಧಾನ ಮಾಡದೆ ಇರುವುದರಿಂದ ಈ ಬಾರಿ ಆರು ಜನ ಸಾಧಕರಿಗೆ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರಕಟಿಸಲಾಗಿದೆ. ವಿಶೇಷವಾಗಿ ದಲಿತ ಬಂಡಾಯ ಸಾಹಿತಿಗಳು ಪ್ರಕಾಶಕರು ಲೇಖಕರಾದ ಇಂದುಮತಿ ಲಮಾಣಿ ರವರಿಗೆ ಈ ಬಾರಿ ಪ್ರಶಸ್ತಿ ಸಿಕ್ಕಿರುವುದು ಸಮಸ್ತ ರಾಜ್ಯದ ದಲಿತ ಸಮುದಾಯಗಳು ಹಾಗೂ ವಿಶೇಷವಾಗಿ ಬಂಜಾರ ಸಮಾಜಕ್ಕೆ ಒಂದು ದೊಡ್ಡ ಅವಿಸ್ಮಾರಣಿಯ ದಿನವಾಗಿದೆ. ಈಗಾಗಲೇ ಕರ್ನಾಟಕ ರಾಜ್ಯದ್ಯಂತ ವಿವಿಧ ದಲಿತ ಬಂಡಾಯ ಲೇಖನವನ್ನು ಪ್ರಕಟಿಸಿ ದಲಿತ ಬಂಡಾಯ ಸಾಹಿತಿ ಪ್ರಕಾಶಕಿಯಾಗಿ ಶೋಷಿತ ಧಮನಿತ ದಲಿತ ಸಮುದಾಯಗಳ ಜಾಗೃತಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮ ಲೇಖನಗಳ ಮೂಲಕ ಸಮಾಜದ ಯುವಪೀಳಿಗೆಗೆ ಮಾರ್ಗದರ್ಶಕರು ಇಂದುಮತಿ ಲಮಾಣಿ ರವರಿಗೆ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ದೊರೆತಿರುವುದು ನಮ್ಮ ದಲಿತ ಸಮುದಾಯಗಳಿಗೆ ಸಿಕ್ಕ ಗೌರವ ಇದು ಅವಿಸ್ಮರಣೀಯ,ಇವರು ನಿರಂತರವಾಗಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.ಹಾಗೂ ಇಪ್ಪತೈದು ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ.ತಾವೂ ಬೆಳೆದು ಇತರರನ್ನೂ ಬೆಳೆಸುವ ಗುಣ ಇವರದ್ದಾಗಿದೆ.ದೇಶವಿದೇಶಗಳನ್ನೂ ಸುತ್ತಿದ ಇವರು ಸದ್ಯ ಒರಿಸ್ಸಾ ರಾಜ್ಯದಲ್ಲಿ ಜರಗುವ ಕೇಂದ್ರ ಸಾಹಿತ್ಯ ಅಕಾಡೆಮಿಯ ವತಿಯಿಂದ ಹಮ್ಮಿಕೊಂಡ “ಅಂತರಾಷ್ಟ್ರೀಯ ಬುಡಕಟ್ಟು ಸಾಹಿತ್ಯ ಸಮ್ಮೇಳನ” ದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಇದು ನಮ್ಮ ಹೆಮ್ಮೆ.. ಎಂದು ತಿಪ್ಪೇಸ್ವಾಮಿ(ತಿಪ್ಪಸರ್ ನಾಯ್ಕ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ