ತುಮಕೂರು: ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಅಂಗರಚನಾಶಾಸ್ತ್ರ ವಿಭಾಗ ಹಾಗೂ ಬೆಳಗಾವಿಯ ಕೆಎಲ್ವಿ ಶಿಕ್ಷಣ ಸಂಸ್ಥೆಯ ಬಿ.ಎಂ.ಕನಕನವಾಡಿಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಡಾ.ರಾಮಣ್ಣನವರ್ ಚಾರಿಟಾಬಲ್ ಟ್ರಸ್ಟ್ ವತಿಯಿಂದ ದೇಹದಾನ ಜಾಗೃತಿ ಶಿಬಿರ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕರಾದ ಡಾ.ಪ್ರಭಾಕರ್.ಜಿ.ಎನ್, ದೃಷ್ಠಿದಾನ ಎಲ್ಲಕ್ಕಿಂತ ಶ್ರೇಷ್ಠದಾನ, ಮನುಷ್ಯ ಮರಣಿಸಿದ ೨೪ ಗಂಟೆಗಳ ಒಳಗಾಗಿ ದೇಹದಾನ ಮಾಡಬೇಕು. ಒಂದು ದೇಹದಿಂದ ಕನಿಷ್ಟ ಏಳು ಮಂದಿಗೆ ವಿವಿಧ ಅಂಗಾAಗಗಳನ್ನು ಜೋಡಣೆ ಮಾಡುವ ಮೂಲಕ ಜೀವ ಉಳಿಸಲು ಸಾಧ್ಯವಿದೆ ಎಂದರು.
ಮನುಷ್ಯ ಬದುಕಿರುವಾಗಲೇ ಕಿಡ್ನಿ ಮತ್ತು ಲೀವರ್ ದಾನ ಮಾಡಲು ಅವಕಾಶವಿದೆ. ಒಂದು ಕಿಡ್ನಿ, ಅರ್ಥ ಲೀವರ್ ನಿಂದಲ್ಲೂ ಜೀವಿಸಲು ಸಾಧ್ಯವಿದೆ. ಆದರೆ ನೇತ್ರ ಮತ್ತು ಹೃದಯ ಹಾಗೂ ಇತರೆ ಅಂಗಾAಗಗಳನ್ನು ಮನುಷ್ಯ ಮರಣಿಸಿದ ನಂತರವೇ ದಾನ ಮಾಡಬೇಕು ಎಂದರು.
ಮನುಷ್ಯ ಆರೋಗ್ಯವಾಗಿರುವಾಗಲೇ ದೇಹ ದಾನಕ್ಕೆ ಸ್ವಯಂ ಪೂರ್ವಾನುಮತಿ ನೀಡಿ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ಅಥವಾ ಮರಣಾ ನಂತರ ಸಂಬAಧಿಕರು ದೇಹ ದಾನ ಮಾಡಬಹುದು ಎಂದರು.
ಬೆಳಗಾವಿಯ ಕೆಎಲ್ವಿ ಶಿಕ್ಷಣ ಸಂಸ್ಥೆಯ ಬಿ.ಎಂ.ಕನಕನವಾಡಿಯ ಆಯೂರ್ವೇದ ಮಹಾವಿದ್ಯಾಲಯದ ಡಾ.ಮಹಂತೇಶ್ ಅವರು ಡಾ.ರಾಮಣ್ಣನವರ್ ಚಾರಿಟಾಬಲ್ ಟ್ರಸ್ಟ್ ಹಾಗೂ ಬೈಲವಂಗಲದ ಎಸ್ಜಿವಿ ಆರ್ಯವೇದ ಕಾಲೇಜಿನ ಮೂಲಕ ರಾಜ್ಯದ ಹಲವು ವೈದ್ಯಕೀಯ ಸಂಸ್ಥೆಗಳಿಗೆ ದೇಹದಾನ ಮಾಡಿಸಲಾಗುತ್ತಿದೆ. ಬೈಲಹೊಂಗಲದಲ್ಲಿರುವ ತಮ್ಮ ಡಾ ರಾಮಣ್ಣನವರ ಚಾರಿಟೇಬಲ್ ಟ್ರಸ್ಟ್ನಿಂದ ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿಗೆ ೨ ದೇಹಗಳನ್ನು ದಾನ ಮಾಡಿದ್ದಾರೆ
ಈ ಸಂಸ್ಥೆಯೂ ರಾಜ್ಯದಲ್ಲಿ ದೇಹದಾನದ ಅರಿವು ಮೂಡಿಸುವುದರ ಜೊತೆಗೆ ಸ್ವತಂ ಕುಟುಂಬದ ಸದಸ್ಯರ ದೇಹವನ್ನು ಸಹ ದಾನ ಮಾಡಿದ್ದಾರೆ. ರಾಜ್ಯ ೩೫ಕ್ಕೂ ಹೆಚ್ಚು ವೈದ್ಯಕೀಯ ಶಿಕ್ಷಣ ಸಂಸ್ಥೆಗಳೊAದಿಗೆ ಸಹಯೋಗ ಪಡೆದುಕೊಂಡಿದ್ದು, ನಮ್ಮ ಸಂಸ್ಥೆಯೂ ಇಂತಹ ಕಾರ್ಯಕ್ಕೆ ಜೊತೆಯಾಗಿರುವುದು ಹೆಮ್ಮೆಯ ವಿಷಯ ಎಂದರು.
ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಕಾವ್ಯಶ್ರೀ ಮಾತನಾಡಿ ಮನುಷ್ಯನ ಮರಣಾನಂತರ ದೇಹ ದಾನ ಮಾಡುವುದರಿಂದ ೭ ಕ್ಕೂ ಹೆಚ್ಚು ಮಂದಿಯ ಜೀವ ಉಳಿಸಬಹುದು. ಮರಣಾನಂತರ ನೇತ್ರ ಹಾಗೂ ದೇಹ ದಾನ ಮಾಡುವುದರಿಂದ ವೈದ್ಯಕೀಯ ಪ್ರಯೋಗದ ದೃಷ್ಠಿಯಿಂದ ನೂರಾರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳ ಮೂಲಕ ಉನ್ನತ ಕಲಿಕೆಗೆ ಸಹಕಾರಿಯಾಗಲಿದೆ ಎಂದರು.
ಮನುಷ್ಯನ ದೇಹವನ್ನು ಮಣ್ಣಿನಲ್ಲಿ ಮುಚ್ಚುವುದರಿಂದ ಯಾವುದೇ ಪ್ರಯೋಜನವಿಲ್ಲ, ಇತ್ತೀಚಿಗೆ ದೇಹ ದಾನ ಮಾಡುವವರ ಪ್ರಮಾಣ ಕಡಿಮೆಯಾಗುತ್ತಿದೆ. ನಮ್ಮ ಸಂಸ್ಥೆಗೂ ಇತ್ತೀಚಿಗೆ ಎರಡು ದೇಹಗಳನ್ನು ದಾನವಾಗಿ ಪಡೆಯಲಾಗಿದ್ದು, ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ದೇಹದಾನದ ಈ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ್ ಬಿ ಸಾಣಿಕೊಪ್ಪ, ಡಾ.ರಾಮಣ್ಣನವರ್ ಸೇರಿದಂತೆ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.