ಇಂದು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ವತಿಯಿಂದ 2568ನೇ ಬುದ್ಧ ಪೂರ್ಣಿಮೆಯ ಅಂಗವಾಗಿ ಸಮಕಾಲಿನ ಸಂದರ್ಭದಲ್ಲಿ ಬುದ್ದನ ಪ್ರಸ್ತುತೆ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಸ್ಲಂ ಭವನದಲ್ಲಿ ಹಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಉಪನ್ಯಾಸ ನೀಡಿದ ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಪಕರಾದ ಡಾ.ನಾಗಭೂಷಣ್ ಬಗ್ಗುನಾಡು ಬುದ್ಧ ಮೊದಲನೇಯದಾಗಿ ದೇವರಲ್ಲ, 2562 ವರ್ಷಗಳ ಹಿಂದೆ ಭರತ ಭೂಮಿಯಲ್ಲಿ ಜೀವಂತ ಒಬ್ಬ ಮನುಷ್ಯನಾಗಿ ಬದುಕಿದ ಮಾನವ ಮಾನವ ಕ್ರ.ಪೂ,563ರಲ್ಲಿ ಲುಂಬಿಣಿಯ ಶಾಖ್ಯ ಕುಲದಲ್ಲಿ ಸಿದ್ದಾರ್ಥನಾಗಿ ಜನಿಸಿ ಬೌದ್ಧ ಗಯಾದಲ್ಲಿ ವೈಶಾಖ ಉಣ್ಣಿಮೆಯೊಂದು ಜ್ಞಾನ ಪ್ರಾಪ್ತಿ ಪಡೆದು ಇದೇ ವೈಶಾಖ ಹುಣ್ಣಿಮೆಯೊಂದು ಕ್ರಿ.ಪೂ 483 ರಲ್ಲಿ ಮಹಾಪರಿನಿರ್ವಾಹಣ ಖುಶಿ ನಗರದಲ್ಲಿ ಹೊಂದಿದನು.
ಮನುಷ್ಯನಿಗೆ ತನ್ನ ಬದುಕಿನಲ್ಲಿ ಸಹಜವಾಗಿ ಎದುರಾಗುವ ಸಂಕಷ್ಟಗಳನ್ನು ಪರಿಹರಿಸಿಕೊಳ್ಳುವ ಜ್ಞಾನ ಪ್ರಾಪ್ತಿಯನ್ನು ಪಡೆದು ಅಂದಿನ ಜನಸಾಮಾನ್ಯರಿಗೆ ತಿಳಿವಳಿಕೆ ನೀಡಿದ ಜಗತ್ತಿನ ಪ್ರಪ್ರಥಮ ತತ್ವಜ್ಞಾನಿ ಹಾಗಾಗಿ ಬುದ್ಧ ಒಬ್ಬ ಜ್ಞಾನಿಯೇ ಹೊರತು ದೇವರಲ್ಲಿ ಈ ದೃಷ್ಠಿಯಲ್ಲಿ ಭಾರತದ ಅಸ್ಮಿತೆಯಾಗಿದ್ದಾನೆ. 1952ರಲ್ಲಿ ಡಾ.ಬಿಆರ್ ಅಂಬೇಡ್ಕರ್ ಸಂಶೋಧಿಸಿ ಬರೆದ ಗ್ರಂಥ ಬುದ್ಧ ಮತ್ತು ಧಮ್ಮ ಈ ನೆಲದ ಮೂಲನಿವಾಸಿಗಳು ಬೌದ್ಧ ಧಮ್ಮವನ್ನು ಅನುಸರಿಸಿದ ಕ್ರಮ ಮತ್ತು ಧಮ್ಮದಲ್ಲಿರುವ ಮಹತ್ವವನ್ನು ಪ್ರತಿಪಾಧಿಸಿದರು, ಹಾಗಾಗಿಯೇ 1956ರಲ್ಲಿ ನಾಗಪುರದಲ್ಲಿ ಹಿಂಧೂ ಧರ್ಮವನ್ನು ತ್ಯೆಜಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದರು.
ಚರಿತ್ರೆಯನ್ನು ತಿಳಿಯದವನು ಚರಿತ್ರೆಯನ್ನು ನಿರ್ಮಿಸಲಾರ ಎನ್ನುವ ಅಂಬೇಡ್ಕರ್ರವರ ಪ್ರತಿಪಾಧನೆ ಭಾರತದಲ್ಲಿ ವೇದಗಳ ಕಾಲದಲ್ಲಿ ಜನಸಾಮಾನ್ಯರ ಬದುಕುತ್ತಿದ್ದಂತ ಸ್ಥಿತಿ ಘೋರವಾಗಿತ್ತು, ದೇವರು ಮತ್ತು ಧರ್ಮದಲ್ಲಿ ಭಯಂಕರವಾದ ಭಯವನ್ನು ವೇದ ಉಪನಿಶತ್ತುಗಳು ಹುಟ್ಟಿಸಿದವು. ಈ ನೆಲದ ಮೂಲನಿವಾಸಿಗಳನ್ನು ವೈಧಿಕರು ದೇವರ ಮತ್ತು ಮೋಕ್ಷ ಪ್ರಾಪ್ತಿ ನೆಪದಲ್ಲಿ ತಮ್ಮ ಮೂಲ ಆಚರಣೆಗಳನ್ನು ನಾಶ ಮಾಡಿ ಮಧ್ಯ ಪ್ರಾಚ್ಯದ ಸಂಸ್ಕೃತಿಯನ್ನು ಹೇರಿದರು. 2500 ವರ್ಷಗಳ ಹಿಂದೆ ಈ ಕತ್ತಲನ್ನು ಹೋಗಲಾಡಿಸಲು ಬುದ್ಧ ಮನಷ್ಯನ ದುಖಃ ಮತ್ತು ಈ ಘೋರ ಅನ್ಯಾಯಗಳನ್ನು ಪ್ರಶ್ನಿಸಿ ಮನುಷ್ಯನನ್ನು ಪ್ರೀತಿಸುವ ಧ್ವೇಷವನ್ನು ಅಳಿಸುವ ತಿಳುವಳಿಕೆ ನೀಡಿ ಜಗತ್ತಿನಾದ್ಯಂತ ಸಂಚರಿಸಿ ಪ್ರಕೃತಿಯ ವಾಸ್ತವ ವಾದವನ್ನು ಜನರಿಗೆ ತಿಳಿಸಿದನು ಆ ಸತ್ಯಗಳೇ 4 ಆರ್ಯ ಸತ್ಯಗಳಾಗಿ ಬದುಕು ದುಖಃದಿಂದ ಕೂಡಿದೇ, ಮನುಷ್ಯನ ಬಯಕೆಗಳೇ ದುಃಖಕ್ಕೆ ಕಾರಣ, ದುಖಗಳನ್ನು ಪರಿಶೋಧಿಸಿಕೊಳ್ಳುವ ಬಗೆ ಮತ್ತು ಮನುಷ್ಯನು ದುಃಖದಿಂದ ಹೊರಬರಲು ಅಷ್ಠಾಂಗ ಮಾರ್ಗಗಳನ್ನು ಅನುಸರಿಸುವ ವಿಧಾನವನ್ನು ಹೇಳಿ ಜನರಿಗೆ ಆ ಕಾಲದಲ್ಲಿ ಸತ್ಯವನ್ನು ಹೇಳಲು ಹೊರಟ ಈ ಸತ್ಯ ಜನಸಾಮಾನ್ಯರಿಗೆ ಸರಿಯನಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಜಗತ್ತು ಸದಾಕಾಲ ಜೀವಂತವಾಗಿರುತ್ತದೆ. ಮತ್ತು ಚಲಿಸುತ್ತದೆ ಜಗತ್ತಿಗೆ ಆರಂಭವು ಇಲ್ಲ, ಅಂತ್ಯವೂ ಇಲ್ಲ ಆದರೆ ಸೃಷ್ಠಿ ಮತ್ತು ನಾಶ ಪ್ರಕೃತಿಯ ಸಹಜವಾದ ನೈಸರ್ಗಿಕ ಕ್ರಿಯೆ ಹಾಗಾಗಿ ಹುಟ್ಟು ಮತ್ತು ಸಾವು ನೈಸರ್ಗಿಕವಾಗಿ ಬಂದoತಹವುಗಳಾಗಿವೆ ಇದನ್ನು ನಾವು ಸಮಾನಾಗಿ ಸ್ವೀಕರಿಸಬೇಕೆಂದು ಬುದ್ಧ ಪ್ರತಿಪಾಧಿಸಿದ ಎಂದರು.
ಬುದ್ಧ ಭಾರತದ ಆಸ್ಮಿತೆ – ಡಾ. ನಾಗಭೂಷಣ್ ಬಗ್ಗುನಾಡು
Leave a comment
Leave a comment