ತುಮಕೂರು:ವಿಧಾನಸಭೆಯಂತೆ, ವಿಧಾನಪರಿಷತ್ತಿನಲ್ಲಿಯೂ ಬಹುಮತ ಗಳಿಸುವ ನಿಟ್ಟಿನಲ್ಲಿ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದೆ.ಹಾಗಾಗಿ ಆರು ಕ್ಷೇತ್ರಗಳಲ್ಲಿ, ಆರರಲ್ಲಿಯೂ ಗೆಲುವು ಸಾಧಿಸಲು ಶಕ್ತಿ ಮೀರಿ ಪ್ರಯತ್ನಿಸಲಿದೆ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬAಧಿಸಿದAತೆ ಆಯೋಜಿಸಿದ್ದ ಪಕ್ಷದ ಮುಖಂಡರು,ವಿವಿಧ ಮಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು,ಸರಕಾರ ರೂಪಿಸುವ ಮಸೂದೆಗಳು ಯಾವುದೇ ಅಡೆ ತಡೆಯಿಲ್ಲದೆ ಮೇಲ್ಮನೆಯಲ್ಲಿ ಪಾಸಾಗಿ ಜಾರಿಗೆ ಬರಬೇಕೆಂದರೆ ವಿಧಾನಪರಿಷತ್ನಲ್ಲಿಯೂ ಪಕ್ಷ ಬಹುಮತ ಪಡೆದರೆ ಹೆಚ್ಚಿನ ಅನುಕೂಲವಾಗುತ್ತದೆ.ಹಾಗಾಗಿ ಸರಕಾರ ಆರು ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಲು ಪ್ರಯತ್ನ ನಡಸಲಿದೆ ಎಂದರು.
ತುಮಕೂರು, ಚಿತ್ರದುರ್ಗ, ದಾವಣಗೆರೆಯ ಕೆಲ ಭಾಗ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳನ್ನು ಒಳಗೊಂಡ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಸುಮಾರು 23815 ಮತದಾರರಿದ್ದು,ಸರಕಾರ ಎನ್.ಪಿ.ಎಸ್ನಿಂದ ಓಪಿಎಸ್ಗೆ ಬದಲಾವಣೆ,7ನೇ ವೇತನ ಆಯೋಗ ಸಮಿತಿ ರಚನೆ ಮಾಡಿದೆ.ಶಿಕ್ಷಕರ ಯೋಗಕ್ಷೇಮವನ್ನು ಸರಕಾರ ಬಯಸುತ್ತದೆ. ಹಾಗಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಶಿಕ್ಷಕರ ಮನವೊಲಿಸಿ,ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರಿಗೆ ಮತ ಹಾಕುವಂತೆ ಮಾಡುವ ಮೂಲಕ ಸರಕಾರ ಗಟ್ಟಿಯಾವುದರ ಜೊತೆಗೆ,ಶಿಕ್ಷಕರು ಸಹ ಬಲಗೊಳ್ಳಲು ಸಹಕರಿಸುವಂತೆ ಮನವಿ ಮಾಡಿದರು.
ರಾಜಕೀಯ ವಿಶ್ಲೇಷಕರ ಪ್ರಕಾರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸರಕಾರ ರಚಿಸಲಿದೆ ಎಂಬ ಮಾಹಿತಿ ಇದೆ.ಸಂವಿಧಾನ ಉಳಿದರೆ ಮಾತ್ರ,ನಾವು,ನೀವು ಎಲ್ಲರೂ ಸವಲತ್ತುಗಳನ್ನು ಕೇಳಲು ಸಾಧ್ಯ.ಇದುವರೆಗೂ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿಲ್ಲ.ಈ ಬಾರಿ ನಮ್ಮ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ ಶಿಕ್ಷಕರಾಗಿ ಕ್ಷೇತ್ರದ ಸಮಸ್ಯೆಯನ್ನು ಅರಿತರವಾಗಿದ್ದು, ತಮ್ಮದೇ ರೀತಿಯಲ್ಲಿ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಅವರಿಗೆ ಬೆಂಬಲವಾಗಿ ಪಕ್ಷ ನಿಂತಿದೆ.ಈ ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಖಾತೆ ತೆರೆಯಲಿದೆ.ಇದಕ್ಕೆ ನಿವೆಲ್ಲರೂ ಕೈಜೋಡಿಸಬೇಕೆಂದು ಡಾ.ಜಿ.ಪರಮೇಶ್ವರ್ ನುಡಿದರು
ವಿಧಾನಪರಿಷತ್ತಿನಲ್ಲಿಯೂ ಪಕ್ಷ ಬಹುಮತ Dr G . Parameshwar
Leave a comment
Leave a comment