ತಲೆಗೆ ಬ್ಯಾಂಡಿಜ್ ಹಾಕಿಕೊಂಡು ಮತ್ತೆ ಪ್ರಚಾರಕ್ಕಿಳಿದ ಡಾ.ಜಿ.ಪರಮೇಶ್ವರ
ಕೊರಟಗೆರೆಯಲ್ಲಿ ನಾಳೆ ಸಿದ್ದರಾಮಯ್ಯ ಚುನಾವಣಾ ಪ್ರಚಾರ:

ತುಮಕೂರು: ಶುಕ್ರವಾರದಂದು ಪ್ರಚಾರದ ವೇಳೆ ತಲೆಗೆ ಕಲ್ಲೇಟು ಬಿದ್ದು ಗಾಯಗೊಂಡಿದ್ದ ಶಾಸಕರು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ್ ಅವರು ಚಿಕಿತ್ಸೆ ಬಳಿಕ ಮತ್ತೆ ಕೊರಟಗೆರೆ ಇಂದಿನಿAದ(ಭಾನುವಾರದಿAದ) ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದರು. ತಲೆಗೆ ಬ್ಯಾಂಡಿಜ್ ಹಾಕಿದ್ದು, ಟೋಪಿ ಧರಿಸಿಕೊಂಡು ಪ್ರಚಾರಕ್ಕೆ ಧುಮಕಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆ೧ರಂದು ಭಾಗವಹಿಸಲಿರುವ ಕೊರಟಗೆರೆ ರಾಜೀವ್ ಭವನದ ಸಮಾವೇಶದ ವೇದಿಕೆ ಪರಿಶೀಲನೆ ಮಾಡಿದರು. ಇಲ್ಲಿ ಸೋಮವಾರ ಮಧ್ಯಾಹ್ನ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರು ಆದ ಸಿದ್ಧರಾಮಯ್ಯ ನವರು ಪ್ರಚಾರ ಸಭೆಯಲ್ಲಿ ನಡೆಸಲಿದ್ದಾರೆ.
ಹಳ್ಳಿಗಳಲ್ಲಿ ಮತ ಪ್ರಚಾರ:

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಹೊಳವನಹಳ್ಳಿ ಹೋಬಳಿಯ ಬೈರನಹಳ್ಳಿ ಕ್ರಾಸ್ನಿಂದಲೇ ಇಂದು ಮತ್ತೆ ಮತ ಪ್ರಚಾರ ಆರಂಭಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ, ಕಲ್ಲೆಸತದ ಘಟನೆಯ ಬಗ್ಗೆ ಬೇಸರ ವ್ಯಕ್ಪಡಿಸಿ, ಜನತೆ ಆರ್ಶೀವಾದದ ರಕ್ಷಣೆ ಇರುವ ತನಕ ಯಾವುದಕ್ಕೂ ಅಂಜುವುದಿಲ್ಲ. ನನ್ನ ಬಗ್ಗೆ ಕ್ಷೇತ್ರದ ಜನರಲ್ಲಿ ನಂಬಿಕೆ ಇದೆ. ಯಾರೂ ಸಹ ಆತಂಕಕ್ಕೆ ಒಳಗಾಗಬಾರದು. ಇದು ಚುನಾವಣಾ ಸಮಯ. ಶಾಂತಿಯಿAದ ವರ್ತಿಸಿ. ಯಾವುದೇ ಅಹಿತಕರ ಘಟನೆಗಲಿಗೆ ಅವಕಾಶ ನೀಡಬೇಡಿ. ಹೆಚ್ಚಿನ ಮತ ನೀಡುವ ಮೂಲಕ ವಿರೋಧಿಗಳಿಗೆ ಉತ್ತರ ನೀಡಿ ಎಂದು ಕರೆ ನೀಡಿದರು.
ನನಗೆ ಡ್ರಾಮಾ ಮಾಡಿ ಅಭ್ಯಾಸ ಇಲ್ಲಾ. ಅದರ ಅವಶ್ಯಕತೆ ನನಗೆ ಇಲ್ಲಾ. ೩೫ ವರ್ಷದ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆಯಿಲ್ಲದೆ ರಾಜಕಾರಣ ಮಾಡಿದ್ದೇನೆ. ನಾನು ತೆರೆದ ಪುಸ್ತಕ. ಬೇಕಾದರೆ ಓದಿಕೊಳ್ಳಿ ಎಂದು ವಿರೋಧ ಪಕ್ಷಗಳ ಕೆಲವು ನಾಯಕರ ಹೇಳಿಕೆಗೆ ಪರಮೇಶ್ವರ್ ತಿರುಗೆಟು ನೀಡಿದರು.