ತುಮಕೂರು:ಸಂವಿಧಾನದ ಮೂಲಕ ಸ್ವಾತಂತ್ರ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್ ಎಂದು ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ತಿಳಿಸಿದ್ದಾರೆ.
ನಗರಪಾಲಿಕೆ ಮುಂಭಾಗದಲ್ಲಿ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಆಯೋಜಿಸಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಎಲ್ಲರನ್ನು ಸಮಾನತೆಯಿಂದ ಕಾಣಬೇಕೆಂಬ ಬಾಬಾ ಸಾಹೇಬರ ಸಮಾನತೆಯ ಸಿದ್ಧಾಂತವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂಬುದು ಅಂಬೇಡ್ಕರ್ ಅವರ ಕನಸಾಗಿತ್ತು ಎಂದರು.
ಭಾರತದ ಶೇ50ರಷ್ಟು ಜನಸಂಖ್ಯೆಯನ್ನು ಹೊಂದಿರುವ ಮಹಿಳೆಯರಿಗೆ ಪಿತ್ರಾಜಿತ ಆಸ್ತಿಯ ಜೊತೆಗೆ, ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಾನ ಅವಕಾಶಗಳು ದೊರೆಯಬೇಕೆಂಬ ಕನಸು ಕಂಡವರು ಅಂಬೇಡ್ಕರ್, ಅದಕ್ಕಾಗಿ ತಾವು ಕಾನೂನು ಸಚಿವರಾಗಿದ್ದಾಗ ಹಿಂದೂ ಕೋಡ್ಬಿಲ್ ಮಂಡಿಸಿದರು.ರಾಜಕೀಯವಾಗಿ ಇಂದಿಗೂ ಮಹಿಳೆಯರಿಗೆ ರಾಜಕೀಯ ಕ್ಷೇತ್ರದ ಉನ್ನತ ಸ್ತರಗಳಲ್ಲಿ ಸಮಾನತೆ ದೊರೆತ್ತಿಲ್ಲ ಎಂಬುದು ವಿಷಾದದ ಸಂಗತಿ ಎಂದು ನಿಧಿಕುಮಾರ್ ತಿಳಿಸಿದರು.
ಬಡತನದಲ್ಲಿ ಹುಟ್ಟಿ ಪ್ರಪಂಚವೇ ತಿರುಗಿ ನೋಡುವಂತೆ, ದೇಶವೇ ಹೆಮ್ಮೆ ಪಡುವಂತೆ ಎತ್ತರಕ್ಕೆ ಬೆಳೆದವರು ಅಂಬೇಡ್ಕರ್. ಇವರು ನೀಡಿರುವ ಸಂವಿಧಾನದಿAದಲೇ ದೇಶವು ಇಂದಿಗೂ ಸುಭೀಕ್ಷವಾಗಿ, ನ್ಯಾಯಯುತವಾಗಿ ಸಾಗುತ್ತಿದೆ.ಭಾರತ ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಾತ್ರ ಬಹಳ ಮುಖ್ಯವಾಗಿದ್ದು, ಸಂವಿಧಾನದಲ್ಲಿರುವ ತತ್ವಗಳನ್ನು ನಮ್ಮ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ವೇಳೆ ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷರು ನಾರಾಯಣ್. ಎಸ್, ಓಬಿಸಿ ಘಟಕದ ಜಿಲ್ಲಾಧ್ಯಕ್ಷರು ರಾಮಚಂದ್ರರಾವ್ ಎಸ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷರು ಶಬ್ಬೀರ್ ಅಹ್ಮದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗರಾಜ್ ದಿಬ್ಬುರ್, ಯುವ ಘಟಕದ ಜಿಲ್ಲಾ ಅಧ್ಯಕ್ಷರು ಗೋವಿಂದರಾಜ ಕೆ ಯುವ ಘಟಕದ ಜಿಲ್ಲಾ ಉಪಾಧ್ಯಕ್ಷರು ಶ್ರೀನಿವಾಸ್.ಎನ್.ವಿ, ಜಿಲ್ಲಾ ಕಾರ್ಯಾಧ್ಯಕ್ಷರು ಗೋವಿಂದರಾಜ್, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರು ಕಿರಣ್ಕುಮಾರ್ ವೈಎಸ್, ರಂಗಸ್ವಾಮ ಯ ಕೆಎಸ್, ಶಿವಣ್ಣ ಕೊತ್ತಿಹಳ್ಳಿ, ಮಹೇಶ್ ವಕ್ಕೋಡಿ, ಗಂಗಾಧರ್.ಜಿ.ಆರ್, ಸಿದ್ದಲಿಂಗಯ್ಯ ಕೆಎನ್ ನರಸಾಪುರ, ಇಮ್ರಾನ್, ಸಯುಬ್, ಜಯಣ್ಣ ಸಿ, ರಂಜನ್ ಎ, ಚಲವಾದಿ ಶೇಖರ್, ಮೋಹನ್ ಕುಮಾರ್, ಸಿದ್ದೇಶ್ ಗಿರೀಶ್ ಶಿವರಾಜ್ ಗೂಳೂರು ರಾಜಣ್ಣ, ತ್ಯಾಗರಾಜ್, ಜೆಕೆ ಶಮಿ, ಸಿದ್ದರಾಜು ಕೋಡಿ ಮುದ್ನಳ್ಳಿ ಹನುಮಂತರಾಜು ಇನ್ನು ಮುಂತಾದವರು ಉಪಸಿತರಿದ್ದರು
ಸ್ವಾತಂತ್ರ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್
Leave a comment
Leave a comment