ಅಫಜಲಪೂರ :ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಡಾ. ಭುವನೇಶ್ವರಿ ಹಾಗೂ ಸಂಗಮೇಶ ಟಕ್ಕಳಕಿಯನ್ನು ತನಿಖಾ ತಂಡ ತೀವ್ರ ವಿಚಾರಣೆ ನಡೆಸಿದೆ.ಸರ್ಕಾರಿ ವೈದ್ಯರಾದ ಈ ಇಬ್ಬರು ವೈದ್ಯರು ಖಾಸಗಿ ಆಸ್ಪತ್ರೆ ನಡೆಸುತ್ತಿದ್ದಾರೆ ಎಂದು ಈ ಹಿಂದೆ ಲೋಕಾಯುಕ್ತ ತಂಡ ತಾಲೂಕಿನ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಖಚಿತ ಮಾಹಿತಿ ಪಡೆದಿದ್ದರೂ ಹಾಗಾಗಿ ಈ ಇಬ್ಬರ ಜೊತೆಗೆ ಇನ್ನು ಅನೇಕ ಸಿಬ್ಬಂದಿಗಳ ವಿರುದ್ಧ ಸ್ವಯಂಕೃತ ದೂರು ಧಾಖಲು

ಮಾಡಿಕೊಂಡಿದ್ದರು, ಹಾಗಾಗಿ ಆಸ್ಪತ್ರೆಯ ನೂನ್ಯತೆ ಕುರಿತು ಡಾ.ರಾಜಶೇಖರ್ ಮಾಲಿ ( ಹಿಂದಿನ ಡಿ. ಎಚ್. ಓ ಕಲಬುರಗಿ ) ಅಫಜಲಪೂರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕಲಬುರಗಿ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳ ಮೇಲಿನ ದೂರಿಗೆ ಸಂಬಂಧ ಪಟ್ಟಂತೆ ತನಿಖಾ ತಂಡ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಕೈಗೊಂಡಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉತ್ತರ ಕರ್ನಾಟಕ ವಿಜಯಪುರದ ಅಪರ ನಿರ್ದೇಶಕ ಡಾ ವಸಂತ ಕುಮಾರ ಕೆ ನೇತೃತ್ವದ ತಂಡ ತನಿಖೆ ನಡೆಸಿ ವರದಿ ಸಲ್ಲಿಸಲು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಪೋಲಿಸ್ ನಿರೀಕ್ಷಕರು,ಕರ್ನಾಟಕ ಲೋಕಾಯುಕ್ತ ಕಲಬುರಗಿ ರವರು ದಿನಾಂಕ: 14/06/2023 ರಂದು ಸಾರ್ವಜನಿಕ ಆಸ್ಪತ್ರೆ ಅಫಜಲಪುರಕ್ಕೆ ಭೇಟಿ ನೀಡಿದಾಗ ಕಂಡು ಬಂದ ನ್ಯೂನ್ಯತೆಗಳ ಬಗ್ಗೆ ಮತ್ತು ಗೈರು ಹಾಜರಾದ ಅಧಿಕಾರಿ / ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಿರುತ್ತಾರೆ.ಈ ಕುರಿತು ಮಾನ್ಯ ಲೋಕಾಯುಕ್ತರು ರವರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ಸರಕಾರಕ್ಕೆ ಸೂಚಿಸಿರುತ್ತಾರೆ. ಸದರಿ ದೂರಿನ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡಲು ಮಾನ್ಯ ಆಯುಕ್ತರು, ಆಕುಕ ಸೇವೆಗಳು ಬೆಂಗಳೂರು ರವರು ಉಲ್ಲೇಖಿತ ಪತ್ರದನ್ವಯ ಸೂಚಿಸಿದ್ದು ಸದರಿ ಪ್ರಕರಣ ಸಂಬಂದ ಸರ್ಕಾರಕ್ಕೆ ಮಾನ್ಯ ಲೋಕಾಯುಕ್ತರಿಂದ ಮಾಹಿತಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಡಾ||ರಾಜಶೇಖರ ಮಾಲಿ. (ಹಿಂದಿನ ಡಿ.ಹೆಚ್.ಓ) ಕಲಬುರಗಿ ಹಾಗೂ ಅಫಜಲ್ಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕಲಬುರಗಿ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳ ಡಾ||ವಿನೋದ ರಾಥೋಡ, ಡಾ||ರವಿಕಿರಣ್, ಡಾ||ಮೊಹಮ್ಮದ್ ಸೋಹೆಬ್, ಡಾ||ಭುವನೇಶ್ವರಿ, ಡಾ||ನಾಗೇಶ್.ಬಿ.ಆರ್. ಡಾ||ಮೊಹಮ್ಮದ್ ಮುಸ್ತಾಪಾ, ಡಾ||ರಾಜೇಶ್ವರಿ, ಡಾ||ಸಂಗಮೇಶ ಟೆಕ್ಕಳಿಕೆ ಇವರುಗಳು ಖಾಸಗೀ ಆಸ್ಪತ್ರೆ ನಡೆಸುತ್ತಿರುವ ಬಗ್ಗೆ, ಹಾಗೂ, ವೈಜುನಾಥ ಮೇತ್ರೆ ಪ್ರಯೋಗಶಾಲಾ ತಂತ್ರಜ್ಞರು ಖಾಸಗೀ ಪ್ರಯೋಘ ಶಾಲೆಯನ್ನು ನಡೆಸುತ್ತಿರುವ ಬಗ್ಗೆ ಮಾನ್ಯ ಲೋಕಾಯುಕ್ತರು ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ದೂರಿಗೆ ಸಂಬಂದಿಸಿದಂತೆ, ಕೈಗೊಂಡ ಕ್ರಮದ ಬಗ್ಗೆ ವರದಿ ಹಾಗೂ ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸುವಂತೆ ಅದೇಶಿಸಲಾಗಿದ್ದು ಹಾಗಾಗಿ ಡಾ ವಸಂತ ಕುಮಾರ ನೇತೃತ್ವದ ತಂಡ ಅಫಜಲಪೂರದ ಆಸ್ಪತ್ರೆಯಲ್ಲಿದ್ದುಕೊಂಡು ಬೇರೆ ಕಡೆ ಖಾಸಗಿ ಆಸ್ಪತ್ರೆ ನಡೆಸುತ್ತಿರುವ ವೈದ್ಯರಾದ ಡಾ. ಭುವನೇಶ್ವರಿ ಹಾಗೂ ಡಾ ಸಂಗಮೇಶ ಟಕ್ಕಳಕಿಯವರನ್ನು ಒಳಗೊಂಡ ಆಸ್ಪತ್ರೆಯ ಎಲ್ಲ ಸಿಬ್ಬಂದಿಗಳಿಗೆ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ, ಸುದೀರ್ಘವಾಗಿ ಸತತ 4 ಗಂಟೆಗಳ ವಿಚಾರಣೆಯಲ್ಲಿ ದೂರಿನಲ್ಲಿ ದಾಖಲಾದ ಆಸ್ಪತ್ರೆಯ ವೈದ್ಯರಿಗೆ ವಿಚಾರಣೆಗೆ ಒಳಪಡಿಸಲಾಯಿತು.ತದನಂತರ ತನಿಖಾ ತಂಡ ತಾಲೂಕಿನಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.