ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹತರಕ್ಷಣಾ ಸಮಿತಿಯಿಂದ ಇಂದು ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಡಾ|| ಬಾಬು ಜಗಜೀವನ್ ರಾಂ ರಂದು ೧೧೬ನೇ ಜಯಂತಿಯ ಅಂಗವಾಗಿ ಸ್ಲಂ ಜನರ ಓಟು ಮಾರಾಟಕ್ಕಿಲ್ಲ ನಮ್ಮ ಓಟ್ ನಮ್ಮ ವಿಮೋಚನೆಗಾಗಿ ಬೀದಿ ಜಾಗೃತಿ ಸಭೆಗಳಿಗೆ ಇಂದು ಚಾಲನೆ ನೀಡಲಾಯಿತು.

ಬಾಬು ಜಗಜೀವನ್ರಾಮ್ರವರಿಗೆ ಪುಷ್ಟ ನಮನ ಸಲ್ಲಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಸ್ವಾತಂತ್ರö್ಯ ನಂತರ ಭಾರತದಲ್ಲಿ ಅಸ್ಪೃಶ್ಯ ಜಾತಿಗೆ ಸೇರಿದ ಬಾಬು ಜಗಜೀವನ್ ರಾಮ್ ರಾಜಕೀಯ ಕ್ಷೇತ್ರದಲ್ಲಿ ಮುತ್ಸದಿಯಾಗಿ ದೇಶ ಅಭಿವೃದ್ಧಿಗೊಳ್ಳಲು ಕೃಷಿ ಮಂತ್ರಿಗಯಾಗಿ, ರಕ್ಷಣಾ ಮಂತ್ರಿಯಾಗಿ, ಉಪಪ್ರಧಾನಿಯಾಗಿ ಹಲವಾರು ದೂರದೃಷ್ಠಿಯೋಜನೆಗಳಿಂದ ಭಾರತ ದೇಶಕ್ಕೆ ಸ್ವಾವಲಂಭಿ ಅಭಿವೃದ್ಧಿ ಕಾಣಲು ಅಪಾರವಾದ ಕೊಡುಗೆ ನೀಡಿದ್ದಾರೆ. ಆ ಕಾಲಘಟ್ಟದಲ್ಲಿ ನಡೆದ ಎರಡು ಯುದ್ಧಗಳನ್ನು ಭಾರತ ದೇಶ ಗೆಲ್ಲಲು ಬೇಕಾದ ರಾಜಕೀಯ ನಡೆಯನ್ನು ಬಾಬು-ಜಿ ತೋರಿ ಕೃಷಿ ಕ್ಷೇತ್ರದಲ್ಲಿ ದಾಪುಗಾಲು ಇಡಲು ಕಾರಣರಾಗಿದ್ದಾರೆ, ಡಾ.ಅಂಬೇಡ್ಕರ್ ರವರು ನೀಡಿರುವ ಸಂವಿಧಾನ ಮತ್ತು ಬಾಬು ಜಗಜೀವನ್ರಾಂ ರವರ ಸರ್ಕಾರದಲ್ಲಿ ಅದನ್ನು ಅನುಷ್ಠಾನಗೊಳಿಸಲು ತೋರಿದ ಬದ್ಧತೆಯಿಂದ ನಮ್ಮ ವಿಮೋಚನೆ ಸಾಧ್ಯವಾಗಿದೆ ಎಂದರು.
ಸ್ಲಂ ಜನರ ಪ್ರಣಾಳಿಕೆಯ ಜಾಗೃತಿ ಭಾಗವಾಗಿ ಸ್ಲಂ ಜನರ ಓಟ್ ಮಾರಾಟಕ್ಕಿಲ್ಲ ನಮ್ಮ ಓಟ್ ವಿಮೋಚನೆಗಾಗಿ ಬೀದಿ ಸಭೆಗಳು ಕೊಳಗೇರಿ ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸಲಿದೆ, ನಮ್ಮ ನೈಜ ಸಮಸ್ಯೆಗಳನ್ನು ಸ್ಲಂ ಜನಾಂದೋಲನ ಪ್ರಣಾಳಿಕೆ ಮಾತನಾಡಿದ್ದು, ಕೊಳಗೇರಿ ಜನರ ಬಡತನ ನಿವಾರಣೆ ಅಭಿವೃದ್ಧಿಗೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು, ಮುಖಂಡರು ಮಾತನಾಡಿ ತಮ್ಮ ಬದ್ದತೆ ತೋರಬೇಕು ಕೋಗಳಗೇರಿಗಳಲ್ಲಿ ದ್ವೇಷ, ಅಸೂಯೆ ಬಿತ್ತುವವರ ಬಗ್ಗೆ ಜಾಗೃತರಾಗಿ ನಾವೆಲ್ಲರು ನಗರ ವಂಚಿತ ಸಮುದಾಯಗಳು ಒಗ್ಗೂಡಿ ಮುನ್ನಡೆಯ ಸಾಧಿಸಬೇಕೆಂದರು.
ಈ ಸಂದರ್ಭದಲ್ಲಿ ತುಮಕೂರು ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ತಿರುಮಲಯ್ಯ, ದೊಡ್ಡರಂಗಪ್ಪ, ಧನಂಜಯ್, ಅನುಪಮಾ, ಪುಟ್ಟರಾಜು, ಯುವಪದಾಧಿಕಾರಿಗಳಾದ ಮೋಹನ್ ಟಿಆರ್, ಕೃಷ್ಣ, ನಿವೇಶನ ರಹಿತ ಹೋರಾಟ ಸಮಿತಿಯ ಮಂಗಳಮ್ಮ, ಸುಧಾ, ರತ್ನಮ್ಮ, ಕೃಷ್ಣಮೂರ್ತಿ, ಮುಬಾರಕ್, ಆಯುಷಾ ಬೇಗಂ, ನರಸಿಂಹಮೂರ್ತಿ, ಮಂಜುನಾಥ್, ಸುರೇಶ್, ಗಣೇಶ್,ತಿರುಮಲ, ಹನುಮಕ್ಕ ಕೋಡಿಹಳ್ಳ ಮುಖಂಡರಾದ ಗಣೇಶ್, ಅಶ್ವತ್, ವೆಂಕಟೇಶ್, ಮುಂತಾದವರು ಪಾಲ್ಗೊಂಡಿದ್ದರು.