ತುಮಕೂರು: ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ತುಮಕೂರು ಜಿಲ್ಲಾ ಕಚೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 127 ನೇ ಜನ್ಮ ದಿನೋತ್ಸವವನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನವನ್ನು ಸಲ್ಲಿಸುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಅವರು ಮಾತನಾಡಿ ಸುಭಾಷ್ ಚಂದ್ರ ಬೋಸ್ ಭಾರತದ ಸ್ವಾತಂತ್ರ÷್ಯ ಹೋರಾಟದ ದಿಕ್ಕನ್ನು ಬದಲಿಸಿ, ಸೂರ್ಯ ಮುಳುಗದ ಸಾಮ್ರಾಜ್ಯದ ಅಧಿಪತಿಯಾಗಿದ್ದ ಬ್ರಿಟಿಷರಿಗೆ ಭೀತಿಯನ್ನು ಮೂಡಿಸಿದ ಅಸಾಧಾರಣ ನಾಯಕ, ಸ್ವಾತಂತ್ರö್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಚರಿತ್ರೆಯನ್ನು ಸೃಷ್ಟಿಸಿದರು ಎಂದರು.
ಶಾoತಿಯುತವಾಗಿ ನಡೆಯುತ್ತಿದ್ದ ಭಾರತದ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಕ್ರಾಂತಿಯನ್ನು ಸೃಷ್ಟಿಸಿ, ಬ್ರಿಟಿಷ್ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ಧೀರ ಸುಭಾಷ್ ಚಂದ್ರ ಬೋಸ್, ಭಾರತದ ಪ್ರಜೆಗಳಿಗೆ ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ÷್ಯ ಕೊಡಿಸುತ್ತೇನೆ ಘೋಷಿಸುವ ಮೂಲಕ ಸ್ವಾತಂತ್ರö್ಯ ಹೋರಾಟದಲ್ಲಿಯೇ ಸಂಚಲನವನ್ನು ಸೃಷ್ಟಿಸಿದರು ಎಂದು ತಿಳಿಸಿದರು.
ಯುವ ಘಟಕದ ಜಿಲ್ಲಾ ಕಾರ್ಯ ಅಧ್ಯಕ್ಷರಾದ ನಾರಾಯಣ್ ಎಸ್ ಮಾತನಾಡಿ ಸುಭಾಷ್ ಚಂದ್ರ ಬೋಸ್ ಅವರಿಗೆ ಬ್ರಿಟಿಷರು ಹೆದರಿದಷ್ಟು ಇನ್ಯಾವ ಸ್ವಾತಂತ್ರö್ಯ ಹೋರಾಟಗಾರರಿಗೆ ಹೆದರಲಿಲ್ಲ, ಮಹಿಳೆಯರಿಗೂ ಶಸ್ತç ತರಬೇತಿ ನೀಡುವ ಮೂಲಕ ಪ್ರತ್ಯೇಕ ಭಾರತೀಯ ಸೇನೆಯನ್ನು ಪ್ರಾರಂಭಿಸಿದ ಸುಭಾಷ್ ಚಂದ್ರಬೋಸ್ ಅವರಿಗೆ ಭಾರತೀಯರ ಸಹಕಾರ ಇನ್ನಷ್ಟು ಸಿಕ್ಕಿದ್ದರೆ, ದೇಶಕ್ಕೆ ಸ್ವಾತಂತ್ರö್ಯ ಬೇಗ ಸಿಗುತ್ತಿತ್ತು ಎನ್ನುವಂತೆ ಘರ್ಜಿಸಿದ ಭಾರತದ ಹುಲಿ ಎಂದರು.
ಹಿoದುಳಿದ ವರ್ಗದ ಜಿಲ್ಲಾಧ್ಯಕ್ಷರಾದ ಎಸ್ ರಾಮಚಂದ್ರರಾವ್, ಸ್ವಾತಂತ್ರö್ಯ ಹೋರಾಟಕ್ಕಾಗಿ ದೇಶದ ಮೂಲೆ ಮೂಲೆಯಲ್ಲಿಯೂ ಪ್ರತ್ಯೇಕ ಸೇನೆ, ಸೈನಿಕರನ್ನು ಹುಟ್ಟುಹಾಕಿದ ಸುಭಾಷ್ ಚಂದ್ರ ಬೋಸ್ ಅವರು ಭಾರತೀಯರ ಸ್ವಾಭಿಮಾನದ ಪ್ರತೀಕವಾಗಿ ಇಂದಿಗೂ ಉಳಿದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರಾದ ಶಬ್ಬೀರ್ ಅಹ್ಮದ್, ಹಿಂದುಳಿದ ವರ್ಗಗಳ ಜಿಲ್ಲಾ ಗೌರವಾಧ್ಯಕ್ಷರಾದ ಎನ್ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷರಾದ ಇಂದ್ರ ಕುಮಾರ್ ಡಿ ಕೆ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ರಫೀಕ್ ಅಹಮದ್, ಜಿಲ್ಲಾ ಕಾರ್ಯದರ್ಧ್ಯಕ್ಷರಾದ ಗೋವಿಂದರಾಜು , ಯುವ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ್ ಎನ್. ವಿ, ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷರಾದ ಶಿವಣ್ಣ, ತಾಲೂಕು ಅಧ್ಯಕ್ಷರಾದ ರಂಗಸ್ವಾಮಯ್ಯ ಕೆ. ಎಸ್. ತಾಲೂಕು ಗೌರವಾಧ್ಯಕ್ಷರಾದ ಗಂಗಾಧರ್ ಜಿ ಆರ್, ಜಿಲ್ಲಾ ಪದಾಧಿಕಾರಿಗಳಾದ ಕೇಶವಮೂರ್ತಿ, ನಾಗರಾಜು, ಹನುಮಂತು, ಕಿರಣ್ ವೈ.ಎಸ್ ಇನ್ನು ಮುಂತಾದವರು ಉಪಸ್ಥಿತರಿದ್ದರು.