ನೂತನ ಜಿಲ್ಲಾಧಿಕಾರಿಗಳಿಗೆ ಸ್ಲಂ ಸಮಿತಿಯಿಂದ ಸ್ವಾಗತ
ಸ್ಲಂ ಜನರ ಕುಂದು ಕೊರತೆ ಸಭೆ ಕರೆಯಲು ಮನವಿ
ನೂತನ ಜಿಲ್ಲಾಧಿಕಾರಿಗಳಾಗಿ ತುಮಕೂರಿಗೆ ಆಗಮಿಸಿರುವ ಕೆ.ಶ್ರೀನಿವಾಸ್ರವರನ್ನು ಇಂದು ಜಿಲ್ಲಾ ಕೊಳಗೇರಿ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಭೇಟಿ ಮಾಡಿ ಸ್ವಾಗತಿಸಿದರು. ಸ್ಲಂ ಸಮಿತಿಯ ಅಧ್ಯಕ್ಷರಾದ ಎ.ನರಸಿಂಹಮೂರ್ತಿ ಜಿಲ್ಲಾಧಿಕಾರಿಗಳ ಗಮನ ಸೆಳೆದು ಕೊಳಗೇರಿ ಸಮಿತಿಯು ಜಿಲ್ಲೆಯಲ್ಲಿ ನಡೆಸಿರುವಂತಹ ಸಂವಿಧಾನಬದ್ದ ಹೋರಾಟಗಳ ಬಗ್ಗೆ ಕೈಪಿಡಿಯನ್ನು ಕೊಟ್ಟು ಸ್ಲಂ ಪರಿಸ್ಥಿತಿಗಳನ್ನು ವಿವರಿಸಿದರು. ಇದೇ ಜೂನ್ ೨೮ ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿಗಧಿಯಾಗಿರುವ ಸ್ಲಂ ಜನರ ಕುಂದುಕೊರತೆ ಸಭೆಯಲ್ಲಿ ನಿಗಧಿತ ಅಜೆಂಡಾಗಳAತೆ ಜಿಲ್ಲಾಧಿಕಾರಿಗಳು ಸಭೆ ಕರೆದು ಸಮಸ್ಯೆಗಳನ್ನು ಪರಿಹರಿಸಿಕೊಡಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ತುಮಕೂರು ಸ್ಲಂ ಸಮಿತಿಯ ಉಪಾಧ್ಯಕ್ಷರಾದ ಶಂಕ್ರಯ್ಯ, ಕಾರ್ಯದರ್ಶಿ ಅರುಣ್, ತಿರುಮಲಯ್ಯ, ಕೃಷ್ಣಮೂರ್ತಿ ಮುಂತಾದವರು ಪಾಲ್ಗೊಂಡಿದ್ದರು.