ಸ್ಲಂಗಳಲ್ಲಿ ಬೀದಿ ಸಭೆಗಳ ಮೂಲಕ ಮತದಾನದ ಜಾಗೃತಿ ಕೈಗೊಳ್ಳಲು ಜಿಲ್ಲಾ ಸಮಿತಿ ನಿರ್ಣಯಸ್ಲಂ ಜನರ ಓಟು ವಸತಿ ಮತ್ತು ಉದ್ಯೋಗ ಖಾತ್ರಿ ಹಾಗೂ ಬಡತನ ಮುಕ್ತಕ್ಕಾಗಿಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಕಾರ್ಯಕಾರಿ ಸಮಿತಿ ಸಭೆಯನ್ನು ಇಂದು ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಅಧ್ಯಕ್ಷರಾದ ಎ.ನರಸಿಂಹಮೂರ್ತಿ ಅಧ್ಯಕ್ಷತೆಯಲ್ಲಿ ಸೇರಿ ಸ್ಲಂ ಜನರ ಪ್ರಣಾಳಿಕೆ ೨೦೨೩ ಮತ್ತು ಎದುರಾಗುವ ವಿಧಾನ ಸಭೆ ಚುನಾವಣೆಯಲ್ಲಿ ಕೊಳಗೇರಿಗಳಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲು ಸಮಾಲೋಚನೆ ನಡೆಸಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸ್ಲಂ ಜನರ ಪ್ರಣಾಳಿಕೆಯ ಸಂವಿಧಾನ ಉಳಿಸಿ ಬಹುತ್ವ ಕರ್ನಾಟಕ ರಕ್ಷಿಸಿ ನಮ್ಮ ಮತ ವಸತಿ ನಗರ ಉದ್ಯೋಗ ಖಾತ್ರಿ ಮತ್ತು ಬಡತನ ಮುಕ್ತಕ್ಕಾಗಿ ಕಾರ್ಯಕರ್ತರ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಚುನಾವಣೆಯಲ್ಲಿ ಕಾರ್ಯಕರ್ತರು ಪಕ್ಷಗಳ ಬಾಲಂಗೋಚಿ ಯಾಗದೇ ಸ್ಲಂ ಜನರ ಸ್ವಾಧಿಕಾರ ಮತ್ತು ಸಂವಿಧಾನ ರಕ್ಷಿಸುವ ಉದ್ದೇಶದ ಮೇಲೆ ಮತ ಚಲಾಯಿಸಲು ಬೀದಿ ಜಾಗೃತಿ ಸಭೆಗಳನ್ನು ಕೈಗೊಳ್ಳಲು ಒಮ್ಮತದಿಂದ ತೀರ್ಮಾನಿಸಲಾಯಿತು. ಮಾಧರಿ ನೀತಿ ಸಂಹಿತೆ ಅನ್ವಯ ಅಭ್ಯರ್ಥಿಗಳು ನಡೆದುಕೊಳ್ಳಬೇಕು ಈ ಬಗ್ಗೆ ಚುನಾವಣಾ ಆಯೋಗ ಮತ್ತು ಅಧಿಕಾರಿಗಳು ನಿಗಾ ವಹಿಸಬೇಕಾಗಿದೆ, ಅದಕ್ಕಾಗಿ ಸಂವಿಧಾನ ನೀಡಿರುವ ಮತದ ಹಕ್ಕನ್ನು ನಮ್ಮ ವಿಮೋಚನೆಯ ಅಸ್ತçವಾಗಿಸಿಕೊಳ್ಳಲು ಕಾರ್ಯಕರ್ತರಿಗೆ, ಕರೆ ನೀಡಲಾಯಿತು. ಪ್ರಸ್ತುತ ಸಂದರ್ಭದಲ್ಲಿ ಚುನಾವಣೆಗೆ ಕೊಳಗೇರಿ ಜನರನ್ನು ಸರಕಾಗಿಸಿಕೊಂಡು ಯುವಜನರನ್ನು ಕಾಲಾಳಾಗಿಸಿಕೊಳ್ಳುವ ಕುತಂತ್ರದ ಬಗ್ಗೆ ಎಚ್ಚರವಹಿಸುವಂತೆ ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕರಾದ ಎ.ನರಸಿಂಹಮೂರ್ತಿ ಹೇಳಿದರು ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾದ ಶಂಕ್ರಪ್ಪ, ಅರುಣ್, ಮಂಗಳಮ್ಮ ಮಾತನಾಡಿ ಮೂರು ಪಕ್ಷಗಳ ಅಭ್ಯರ್ಥಿಗಳೊಂದಿಗೆ ನಮ್ಮ ಪ್ರಣಾಳಿಕೆ ಮೇಲೆ ಚರ್ಚೆ ನಡೆಸಿ ಸ್ಲಂ ಜನರ ಜಲ್ವಂತ ಸಮಸ್ಯೆಗಳನ್ನು ಪರಿಹರಿಸುವಂತವರಿಗೆ ನಾವು ಬೆಂಬಲಿಸಬೇಕಾಗಿದೆ ಎಂದರು ಏಪ್ರಿಲ್ ೨ ರಿಂದ ೧೪ ರವರೆಗೆ ವಿವಿಧ ಕೊಳಚೆ ಪ್ರದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಂಡು ಏಪ್ರಿಲ್ ೧೬ ರಂದು ಬಾಬು ಜಗಜೀವನ್ರಾಂ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ ಅಂಗವಾಗಿ ಸಾಂಸ್ಕೃತಿಕ ಪ್ರತಿರೋಧ ಸಮಾವೇಶವನ್ನು ಮಾಡಿ ಏಪ್ರಿಲ್ ೧೮ ರಿಂದ ೨೮ ರವರೆಗೆ ೪೦ ಕೊಳಚೆ ಪ್ರದೇಶಗಳಲ್ಲಿ ಸ್ಲಂ ಜನರ ಪ್ರಣಾಳಿಕೆ ಸ್ಟಿಕ್ಕರ್ ಕ್ಯಾಂಪೇನ್ ಅನ್ನು ಮತ್ತು ಬೀದಿ ಜಾಗೃತಿ ಸಭೆಗಳನ್ನು ಕೈಗೊಳ್ಳುವುದು ಏಪ್ರಿಲ್ ೩೦ ರಂದು ಯುವಜನರೊಂದಿಗೆ ಚುನಾವಣೆ ಕುರಿತು ಸಂವಾದ ನಡೆಸಲಾಗುವುದು. ಮೇ ೫ ಬುದ್ಧ ಪೂರ್ಣಿಮೆಯೆಂದು ರಾಜಕೀಯ ಪಕ್ಷಗಳ ಅಭ್ಯರ್ಥಿಗಳೊಂದಿಗೆ ತುಮಕೂರು ನಗರದ ಸ್ಲಂ ನಿವಾಸಿಗಳ ಪ್ರಣಾಳಿಕೆ ಕುರಿತು. ಸಮಾಲೋಚನೆ ನಡೆಸಿ ತಮ್ಮ ೫ ವರ್ಷದ ರೋಡ್ ಮ್ಯಾಪ್ ಬಗ್ಗೆ ತಿಳಿದುಕೊಂಡು ಅಂತಿಮವಾಗಿ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಸ್ಲಂ ಸಮಿತಿ ಗೌರವಧ್ಯಕ್ಷರಾದ ದೀಪಿಕಾ, ಪದಾಧಿಕಾರಿಗಳಾದ ಕಣ್ಣನ್, ಜಾಬೀರ್ಖಾನ್, ಚಕ್ರಪಾಣಿ, ಶಾರದಮ್ಮ, ಗುಲ್ನಾಜ್, ಗಂಗಾ, ಕೃಷ್ಣಮೂರ್ತಿ, ಪುಟ್ಟರಾಜು, ಅಶ್ವತ್, ಗೊಂವಿAದ್ರಾಜು ನಿವೇಶನ ರಹಿತ ಹೋರಾಟ ಸಮಿತಿಯ ಮಂಗಳಮ್ಮ, ಸುಧಾ,ದೇವರಾಜು,ಪೂರ್ಣಿಮಾ, ಯುವಸಮಿತಿಯ ಮುಖಂಡರಾದ ಧನಂಜಯ್, ಚಕ್ರಪಾಣಿ, ಗಣೇಶ್, ಶಿರಾ ಸಂಚಾಲಕರಾದ ತಿರುಮಲಯ್ಯ, ಭಾರತಿ ನಗರದ ಮಾಣಿಕ್ಯಮ್ಮ, ತುಮಕೂರು ವಿ,ವಿ ಸಮಾಜಕಾರ್ಯ ವಿಭಾಗದ ಅರವಿಂದ್, ಮನೋಹರ್ ಮುಂತಾದವರು ಪಾಲ್ಗೊಂಡಿದ್ದರು