ಉದ್ಯೋಗ ಮೇಳದ ಸದೋಪಯೋಗಕ್ಕೆ ಜಿಲ್ಲಾಧಿಕಾರಿ ಶ್ರೀನಿವಾಸ ಕೆ. ಕರೆ
ತುಮಕೂರು(ಕ.ವಾ.)ಜು.೩೧: ಜಿಲ್ಲೆಯಲ್ಲಿ ಆಗಸ್ಟ್ ಮಾಹೆಯಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ ಕೆ. ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದÀ ವೀಡಿಯೋ ಕಾನ್ಪೆರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉದ್ಯೋಗ ಮೇಳದಲ್ಲಿ ಅರ್ಹ ಯುವಕ/ಯುವತಿಯರಿಗೆ ಸ್ಥಳದಲ್ಲೇ ಉದ್ಯೋಗಾವಕಾಶ ನೀಡಲಾಗುವುದು, ಎಸ್.ಎಸ್.ಎಲ್.ಸಿ ಉತ್ತೀರ್ಣ ಆಥವಾ ಅನುತ್ತೀರ್ಣರಾದವರು ಸೇರಿದಂತೆ ಉನ್ನತ ಶಿಕ್ಷಣ ಪಡೆದ ಪ್ರತಿಯೊಬ್ಬರು ಸದೋಪಯೋಗ ಪಡಿಸಿಕೊಳ್ಳಬೇಕು, ಜಿಲ್ಲೆಯಲ್ಲಿರುವ ಬೃಹತ್, ಮಧ್ಯಮ, ಸಣ್ಣ ಪ್ರಮಾಣದ ಕ್ಯೆಗಾರಿಕೆಗಳ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಸೆಪ್ಟಂಬರ್-೨೦೨೩ರ ಮಾಹೆಯಲ್ಲಿ ಜಿಲ್ಲೆಯ ಕ್ಯೆಗಾರಿಕೋದ್ಯಮಿಗಳ ಸಮಾವೇಶ ನಡೆಸಲು ಅಗತ್ಯ ಸಿದ್ದತೆ ಮಾಡಿಕೊಳುವಂತೆ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ಬಾಪೂಜಿ ಕೇಂದ್ರಗಳು ಸೇರಿದಂತೆ ಜಿಲ್ಲೆಯ ಜಿಲ್ಲೆಯ ಎಲ್ಲಾ ಸೇವಾ ಕೇಂದ್ರಗಳು ಸಾರ್ವಜನಿಕರಿಗೆ ಅನುಕೂಲವಾಗುವಂತೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು, ಸೇವಾ ಕೇಂದ್ರಗಳ ಅವಶ್ಯಕತೆ ಇದ್ದಲ್ಲಿ ಸ್ಥಳೀಯ ಹಾಗೂ ನಗರ ಸಂಸ್ಥೆಗಳ ವರಧಿ ಸಲ್ಲಿಸಬೇಕು, ಗೃಹಲಕ್ಷಿö್ಮÃ ನೋಂದಣಿಯಲ್ಲಿ ಶೇ.೭೦ರಷ್ಟು ಪ್ರಗತಿ ಸಾಧಿಸಲಾಗಿದ್ದು, ಮುಂದಿನ ವಾರದೊಳಗೆ ಗೃಹಲಕ್ಷಿö್ಮÃ ನೋಂದಣಿಯಲ್ಲಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಮೊದಲನೇ ಸ್ಥಾನಕ್ಕೇರುವಂತೆ ಶ್ರಮಿಸುವಂತೆ ಸೂಚಿಸಿದರು.
ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯ ಅನುಷ್ಠಾನಕ್ಕಾಗಿ ೫ ಎಕರೆ ಜಾಗವನ್ನು ಗುರ್ತಿಸಿ ವರದಿ ಸಲ್ಲಿಸುವಂತೆ ಎಲ್ಲಾ ತಹಸೀಲ್ದಾರ್ ಗಳಿಗೆ ಸೂಚಿಸಲಾಗಿತ್ತು, ಇನ್ನೂ ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಾಗ ಗುರ್ತಿಸುವುದು ಬಾಕಿ ಇದ್ದು, ಮುಂದಿನ ಸಭೆಯಷ್ಟರಲ್ಲಿ ಜಾಗ ಗುರ್ತಿಸಿ ಕಡತದಲ್ಲಿ ಸಲ್ಲಿಸುವಂತೆ ಸೂಚಿಸಿದರು.
ತಿಪಟೂರು, ಗುಬ್ಬಿ, ಚಿ.ನಾ.ಹಳ್ಳಿ ತಾಲೂಕುಗಳ ವ್ಯಾಪ್ತಿಯ ಮೈನಿಂಗ್ ಫಂಡ್ನ್ನು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಸದ್ಬಳಕೆ ಮಾಡಬೇಕು, ಈ ತಾಲೂಕುಗಳಲ್ಲಿ ಗೃಹ ನಿರ್ಮಾಣ ಮಾಡಲು ಜಾಗ ಗುರ್ತಿಸಿದರೆ, ರಾಜೀವ್ ಗಾಂಧಿ ವಸತಿ ನಿಗಮದಿಂದ ಎಲ್ಲರಿಗೂ ಶೇ ೧೦೦ರಷ್ಟು ವಸತಿ ಸೌಲಭ್ಯ ದೊರಕುತ್ತದೆ ಎಂದರು.
ಜಿಲ್ಲೆಯ ಕೆಲವು ಸರ್ಕಾರಿ ಶಾಲೆ, ಕಾಲೇಜು ಸೇರಿದಂತೆ ಸರ್ಕಾರಿ ಸಂಸ್ಥೆಗಳ ಆಸ್ತಿಗಳಿಗೆ ಖಾತೆ ಮಾಡಿಸದೆ ಇರುವುದು ಕಂಡು ಬಂದಿದ್ದು, ಶೀಘ್ರವಾಗಿ ತಹಸೀಲ್ದಾರ್ಗಳು, ಕಾರ್ಯನಿರ್ವಹಣಾಧಿಕಾರಿಗಳು ಸರ್ಕಾರಿ ಜಾಗಗಳ ೧೧ಬಿ ಖಾತೆ ಮಾಡಿಸಿ ವರದಿ ಸಲ್ಲಿಸಬೇಕು, ಒತ್ತುವರಿಯಾಗಿರುವು ಕೆರೆಗಳ ಜಾಗವನ್ನು ತೆರವುಗೊಳಿಸುವಂತೆ ತಿಳಿಸಿದರು.
ಉದ್ಯೋಗ ಮೇಳದ ಸದೋಪಯೋಗಕ್ಕೆ ಜಿಲ್ಲಾಧಿಕಾರಿ ಶ್ರೀನಿವಾಸ ಕೆ. ಕರೆ
Leave a comment
Leave a comment