ರಾಷ್ಟ್ರಿಯ ಬಾಲಸ್ವಾಸ್ತ್ಯ ಕಾರ್ಯಕ್ರಮಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ ಜಿಲ್ಲಾಧಿಕಾರಿ ಫೌಜೀಯಾ ತರನುಮ. ಮಕ್ಕಳ ಮುಖದಲ್ಲಿನ ಮಂದಹಾಸ ಕಂಡು ಜಿಲ್ಲಾಧಿಕಾರಿ ಫುಲ್ ಖುಷ್.
ಎಸ್ ವೀಕ್ಷಕರೇ ರಾಷ್ಟ್ರಿಯ ಬಾಲ ಸ್ವಾಸ್ತ್ಯ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಲ್ಲಿನ ವಿವಿಧ ತಾಲೂಕುಗಳಿಂದ ಚಿಕೆತ್ಸೆ ಪಡೆದು ಆಗಮಿಸಿದ ಮಕ್ಕಳನ್ನು ಕಂಡು ಜಿಲ್ಲಾಧಿಕಾರಿ ಅತಿವ ಸಂತಸಗೊಂಡ ಕ್ಷಣ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಿತು, RBSK NHM DHO,
RCHO, DEIC ನೇತೃತ್ವದಲ್ಲಿ ನಡೆದ ಈ ಅಭಿಯಾನ ಕಾರ್ಯಕ್ರಮದ ಕುರಿತು ಚಿಕಿತ್ಸೆ ಪಡೆದ ಮಕ್ಕಳಿಗೆ ಅಭಿನಂದಿಸಲು ಜೀಲ್ಲಾಧಿಕಾರಿ ಕಾರ್ಯಾಲಯದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಸಭೆ ಏರ್ಪಡಿಸಿದರೂ, RBSK ತಂಡದ ಕಾರ್ಯ ಶ್ಲಾಘಸಿದರು, ಸಭೆಯಲ್ಲಿ ಮುದ್ದು ಮಕ್ಕಳ ಯೋಗಕ್ಷೇಮ ವಿಚಾರಿಸಿ ಚಿಕೆತ್ಸೆ ಪಡೆದ ಮುದ್ದು ಮಕ್ಕಳ ಮುಖದಲ್ಲಿನ ಮಂದಹಾಸ ಕಂಡು ಮಕ್ಕಳಲ್ಲಿ ಮಕ್ಕಳಂತಾದರು, ನಂತರ ಮಾತನಾಡಿದ ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ 300 ಮಕ್ಕಳು RBSK ಯೋಜನೆಯಡಿಯಲ್ಲಿ ಚಿಕೆತ್ಸೆ ಪಡೆದಿದ್ದು ಇದರಲ್ಲಿ ಇಂದು 15 ಮಕ್ಕಳನ್ನು ನಮ್ಮ ಕಚೇರಿಯಲ್ಲಿ ಅಭಿನಂದಿಸಲಾಗಿದೆ ಎಂದರು, ಅಷ್ಟೇ ಅಲ್ಲದೆ ಇದೆ ರೀತಿಯಲ್ಲಿ ಇನ್ನು ಹೆಚ್ಚಿನ ಮಕ್ಕಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು, ನಂತರ ಮಾತನಾಡಿದ RBSK ನೋಡಲ್ ಅಧಿಕಾರಿ R C H O ಶರಣಬಸಪ್ಪ ಕ್ಯಾತ್ನಾಳ್ ಸಾರ್ವಜನಿಕರು ತಮ್ಮ ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಇದ್ದರು ಕೂಡ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ನಾವು ತಕ್ಷಣವೇ ತಮ್ಮ ಕೋರಿಕೆಗೆ ಸ್ಪಂದಿಸುವಂತ ಕಾರ್ಯ ಮಾಡುತ್ತೇವೆ, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಲ್ಲಾ ಪಂಚಾಯತ್ ಸೇರಿದಂತೆ ಹಲವು ಇಲಾಖೆಗಳು ಯಾವತ್ತೂ ತಮ್ಮ ಬೆಂಬಲಕ್ಕೆ ಸದಾ ಸಿದ್ದವಿದ್ದು , ಇದೊಂದು ಉಚಿತ ಚಿಕಿತ್ಸೆಯ ಯೋಜನೆಯಗಿದ್ದು ಬಡವರಿಗೆ ಬಹಳ ಅನುಕೂಲಕರವಾಗಿದೆ ಎಂದರು. ನಂತರ ಮಾತನಾಡಿದ ಚಿಕೆತ್ಸೆ ಪಡೆದ ಮಕ್ಕಳ ಪಾಲಕರು DEIC ವ್ಯವಸ್ಥಾಪಕರಾದ್ ಕೃಷ್ಣ ಅವರನ್ನು ದೇವರ ಸ್ವರೂಪಿ ಎಂದು ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಆರ್ ಬಿ ಎಸ್ ಕೆ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ RCHO ಡಾ. ಶರಣಬಸಪ್ಪ ಕ್ಯಾತ್ನಲ್, ಜಿಲ್ಲಾ ಸಂಯೋಜಕರು ಡಾ. ಪ್ರವೀಣ್ ಜೋಶಿ, ಜಿಲ್ಲಾ ಡಿಇಐಸಿ ವ್ಯವಸ್ಥಾಪಕರು ಕೃಷ್ಣಾವಗ್ಗೆ ಡಾ. ವಿನಾಯಕ್ ತಾಟಿ, ಡಾ. ಅಭಿಷೇಕ್, ಡಾ. ಕಾವೇರಿ, ಡಾ. ಬಾಶ್ಗೀರ್, ಡಾ. ವಿ ರ್ ಗೋಗಿ, ಡಾ. ನಾಗರತ್ನ, ಡಾ ಶಿಲ್ಪ, ಡಾ. ರಾಕೇಶ್, ಡಾ. ಗುರುರಾಜ್, ಡಾ. ಮಾಂತೇಶ್,ರಾಜೇಶ್ವರಿ,ಆರ್ ಬಿ ಎಸ್ ಕೆ ತಂಡದ ಎಲ್ಲಾ ವೈದ್ಯಾಧಿಕಾರಿಗಳಿಗೂ ಮತ್ತು ಆರೋಗ್ಯ್ ಇಲಾಖೆಯ ಸರ್ವ ಸಿಬಂದ್ದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.