ಆಫಜಲಪುರ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ 1.50 ಲಕ್ಷ ರೂಪಾಯಿಯನ್ನು ಬಡದಾಳ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಜೀರ್ಣದ್ದಾರಕ್ಕೆ ನೀಡಲಾಯಿತು.
ಬಡದಾಳ ಗ್ರಾಮದ ಹೃದಯ ಭಾಗದಲ್ಲಿರುವ ಮಹಾ ಮಾತೇ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನಾ ಟ್ರಸ್ಟ್ ನ ತಾಲೂಕಾ ಯೋಜನಾ ಅಧಿಕಾರಿ ಶಿವರಾಜ್ ಆಚಾರ್ಯ ಅವರು ದೇವಸ್ಥಾನ ಸಮಿತಿಗೆ 1.50 ಲಕ್ಷ ರೂಪಾಯಿ ಒಳಗೊಂಡಿರುವ ಚಕ್ ಅನ್ನು ನೀಡಿ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಟ್ರಸ್ಟ್ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಬಡದಾಳ ಗ್ರಾಮದಲ್ಲಿನ ಕೆರೆಗಳನ್ನು ಅಭಿವೃದ್ಧಿ ಪಡಿಸದ್ದು ಅಷ್ಟೇ ಅಲ್ಲದೆ ಮಹಿಳೆಯರು ತಮ್ಮ ಜೀವನ್ ನಿರ್ವಹಣೆಗೆ ಸಾಲ ಪಡೆದು ಸುಭದ್ರ ಜೀವನ ನಡೆಸಲು ನಮ್ಮ ಸ್ವಸಹಾಯ ಸಂಘದಿಂದ ಬಡದಾಳ ಗ್ರಾಮಕ್ಕೆ 8 ಕೋಟಿ ರೂಪಾಯಿ ವರೆಗೂ ಸಾಲ ಸೌಲಭ್ಯವನ್ನು ಇಲ್ಲಿಯವರೆಗೆ ನೀಡಿದ್ದೇವೆ ಎಂದು ಹೇಳಿದರು, ಮತ್ತು ಮುಂಬರುವ ದಿನಗಳಲ್ಲಿ ನಮ್ಮ ಧರ್ಮಸ್ಥಳ ಬಿ ಸಿ ಟ್ರಸ್ಟ್ ವತಿಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಪ್ರಯತ್ನಿಸಲಾಗುವದು ಎಂದು ಹೇಳಿದರು , ಮತ್ತು ಗ್ರಾಮದ ಸೇವಾ ಪ್ರತಿನಿಧಿ ರೇಖಾ ದೊಡ್ಮನಿ ಹಾಗೂ ವಲಯ ಮೇಲ್ವಿಚಾರಕರಾದ ಮಲ್ಲಿಕಾರ್ಜುನ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಡದಾಳ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಕಲಶೆಟ್ಟಿ, ಸಂಗಮನಾಥ್ ನಿಂಬಾಳ್, ಶ್ರೀಕಾಂತ್ ನಿಂಬಾಳ್, ಚನ್ನಮಲ್ಲಪ್ಪ ಅಡಕಿ, ಜಗದೀಶ್ ಕಲ್ಲೂರ್,ವಲಯ ಮೇಲ್ವಿಚಾರಕರಾಧ ಮಲ್ಲಿಕಾರ್ಜುನ, ಸೇವಾಪ್ರತಿನಿಧಿಯಾದ ರೇಖಾ ದೊಡ್ಮನಿ, ವಿದ್ಯಾವತಿ ಕಲಶೆಟ್ಟಿ, ಸುವರ್ಣ ಕಲಶೆಟ್ಟಿ, ಗುಂಡಮ್ಮ ಸಂತೋಷ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.