ತುಮಕೂರು: ಮಾರುಕಟ್ಟೆಯ ನೂತನ ಪ್ರವೃತ್ತಿಗಳಿಗೆ ಅಗತ್ಯವಿರುವ ಕೌಶಲ್ಯ ಕಲಿಸುವ ಶಿಕ್ಷಣವು ವಿದ್ಯಾರ್ಥಿಗಳನ್ನು ದೀರ್ಘ ಕಾಲ ಮುನ್ನೆಡೆಸುತ್ತದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಕೋಶ ಶುಕ್ರವಾರ ಆಯೋಜಿಸಿದ್ದ ‘ಉದ್ಯೋಗ ನೇಮಕಾತಿ ಪತ್ರ’ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯೋಗಶೀಲರನ್ನಾಗಿ ತಯಾರಿಸುವ ಕರ್ತವ್ಯ ಶಿಕ್ಷಕರದ್ದಾಗಿರುತ್ತದೆ. ಕೃತಕ ಬುದ್ಧಿಮತ್ತೆಯ ಕಾಲದಲ್ಲಿ ಇರುವ ನಮಗೆ ಅಪಾರ ಜ್ಞಾನವಿರಬೇಕು. ಸಂವಹನ ಕೌಶಲ್ಯವಿರಬೇಕು. ವಿಭಿನ್ನ ರೀತಿಯ ಪ್ರಯೋಗಗಳನ್ನು ಮಾಡುವ ಸಾಮರ್ಥ್ಯವಿರಬೇಕು. ಉದ್ಯೋಗ ಮಾಡಬಯಸುವ ವ್ಯಕ್ತಿಗೆ ಜಗತ್ತು ಸದಾ ನೂತನವಾಗಿ ಕಾಣುತ್ತದೆ. ಸ್ವಯಂ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವಿರುವ ವಿದ್ಯಾರ್ಥಿಗಳನ್ನು ಹೊರತರುವ ಜವಾಬ್ದಾರಿಯನ್ನು ನಾವೆಲ್ಲರೂ ಅನುಸರಿಸಬೇಕು ಎಂದರು.


ತುಮಕೂರು ವಿಶ್ವವಿದ್ಯಾನಿಲಯದ ೨೦೨೨-೨೩ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ, ರಾಜ್ಯದ ಹಲವು ಖಾಸಗಿ ವಲಯದ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿರುವ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸಿದರು.
ತುಮಕೂರು ನ್ಯಾಚುರಲ್ ಬಯೋಜೆನೆಕ್ಸ್ ಪ್ರೆöÊವೇಟ್ ಲಿಮಿಟೆಡ್ನ ಎಚ್.ಆರ್. ಮುಖ್ಯಸ್ಥ ಆರ್. ಎನ್. ಪಾಂಡೆ, ತುಮಕೂರು ವಿಶ್ವವಿದ್ಯಾನಿಲಯದ ಉದ್ಯೋಗ ನಿಯೋಜನ ಅಧಿಕಾರಿಗಳಾದ ಡಾ. ಕೆ. ಜಿ. ಪರಶುರಾಮ, ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಭಾಗವಹಿಸಿದ್ದರು.