ಸಮರ್ಥ್ ಫೌಂಡೇಷನ್ನಿAದ ಅಭ್ಯಥಿಗಳಿಗೆ ಪ್ರಮಾಣ ಪತ್ರ ವಿತರಣೆ
ತುಮಕೂರು: ವೃತ್ತಿ ಕೌಶಲ್ಯತೆ ಹೊಂದಿದವರಿಗೆ ಇಂದು ಉದ್ಯೋಗಾವಕಾಶಗಳು ವಿಫುಲವಾಗಿವೆ. ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ಕೈಗಾರಿಕೆಗಳಿಗೆ ಕೌಶಲ್ಯತೆಯ ಮಾನವಸಂಪನ್ಮೂಲದ ಬೇಡಿಕೆಯಿದ್ದು ಉದ್ಯೋಗಾಕಾಂಕ್ಷಿಗಳಿಗೆ ವರದಾನವಾಗಲಿದೆ. ಕೌಶಲ್ಯ ಪರಿಣತಿ ಹೊಂದಿ ಉದ್ಯೋಗ ಪಡೆದು ಬದುಕು ರೂಪಿಸಿಕೊಳ್ಳಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಗುರುವಾರ ನಗರದ ಸಮರ್ಥ್ ಫೌಂಡೇಷನ್ ಕಚೇರಿಯಲ್ಲಿ ಸಂಸ್ಥೆಯಿAದ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಶಾಸಕರು, ಕೈಗಾರಿಕೆಗಳಲ್ಲಿ ವೃತ್ತಿಪರತೆಯ ಕೌಶಲ್ಯತೆಯ ಪಡೆದವರಿಗೆ ಉದ್ಯೋಗಾವಕಾಶ ಹೆಚ್ಚಾಗಿವೆ. ಈ ಕಾರಣದಿಂದ ಕೌಶಲ್ಯ ತರಬೇತಿಗೆ ಸರ್ಕಾರವೂ ಆದ್ಯತೆ ನಿಡುತ್ತಿದೆ. ಜೊತೆಗೆ ಸಮರ್ಥ್ ಫೌಂಡೇಷನ್ನAತಹ ಸಂಸ್ಥೆಗಳು ಟೈಲರಿಂಗ್, ಕಂಪ್ಯೂಟರ್, ಬ್ಯೂಟಿಷಿಯನ್ನಂತಹ ವೃತ್ತಿ ಕೌಶಲ್ಯ ತರಬೇತಿ ನೀಡಿ ನೆರವಾಗುತ್ತಿವೆ. ಇವುಗಳ ಕಲಿಕೆಗೆ ಉನ್ನತ ಶಿಕ್ಷಣ ಬೇಕಾಗಿಲ್ಲ, ಸಾಮಾನ್ಯ ಶಿಕ್ಷಣ ಪಡೆದವರೂ ಕೌಶಲ್ಯ ತರಬೇತಿ ಪಡೆಯಬಹುದು ಎಂದು ಹೇಳಿದರು.
ವಿಶೇಷವಾಗಿ ಮಹಿಳೆಯರು ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಕೌಶಲ್ಯ ತರಬೇತಿ ಪಡೆದರೆ ಉದ್ಯೋಗ ಪಡೆಯಬಹುದು. ಇಲ್ಲವೇ ಸ್ವಂತ ಉದ್ದಿಮೆ ಸ್ಥಾಪಿಸಿ ಸ್ವಾಮಲಂಬಿಯಾಗಿ ಬೆಳೆಯಬಹುದು, ಮತ್ತಷ್ಟು ಜನರಿಗೆ ಉದ್ಯೋಗ ನೀಡಲೂ ಅವಕಾಶವಿದೆ. ವೃತ್ತಿ ಕೌಶಲ್ಯತೆ ಹೊಂದಿರುವವರಿಗೆ ಸಾಲ ಸೌಲಭ್ಯ ನೀಡಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗುವAತೆ ಸಲಹೆ ಮಾಡಿದರು.
ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ಕೌಶಲ್ಯ ಎಂಬುದು ವಿಶಿಷ್ಟ ವಿದ್ಯೆ. ಕಲಿತ ವಿದ್ಯೆಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಅಂತಹ ಕೌಶಲ್ಯತೆಯಿಂದ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ತಿಳಿಸಿದರು.
ಸಮರ್ಥ್ ಫೌಂಡೇಷನ್ನಿAದ ಅಭ್ಯಥಿಗಳಿಗೆ ಪ್ರಮಾಣ ಪತ್ರ ವಿತರಣೆ
Leave a comment
Leave a comment