ಅಫಜಲಪೂರ: ಬೈಕ್ ಸವಾರರಿಗೆ ತಮ್ಮ ಸ್ವಂತ್ ಖರ್ಚಿನಲ್ಲಿ ಹೆಲ್ಮೆಟ್ ವಿತರಿಸಿ ರಸ್ತೆ ಸುರಕ್ಷತಾ ಅಭಿಯಾನಕ್ಕೆ
ಎ ಎಸ್ ಐ ರಜಿಯಾ ಬೇಗಂ ಚಾಲನೆ ನೀಡಿದರು. ಅಫಜಲಪುರ ಪಟ್ಟಣದ ಹೃದಯ ಭಾಗವಾದ ಅಂಬೇಡ್ಕರ್ ವೃತ್ತದಲ್ಲಿ ಅಫಜಲಪೂರ ಠಾಣೆಯ ಪಿ ಎಸ್ ಐ ಮಹಿಬೂಬ್ ಅಲಿ ಅವರ ನಿದರ್ಶನದ ಮೇರೆಗೆ ಠಾಣೆಯ ಎ ಎಸ್ ಐ ರಜಿಯಾ ಬೇಗಂ ಅವರಿಂದ ವಾಹನ ಸವಾರರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಸುರಕ್ಷತೆಯ ಸಲುವಾಗಿ ಹೆಲ್ಮೆಟ್ ನೀಡಿ ರಸ್ತೆ ಸುರಕ್ಷತಾ ಅಭಿಯಾನದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಹೆಲ್ಮೆಟ್ ವಿತರಿಸಿ ಮಾತನಾಡಿದ ಎ ಎಸ್ ಐ ರಜಿಯಾ ಬೇಗಂ, ನಾವು ವಾಹನ ಚಲಾಯಿಸುವಾಗ ಸ್ವಲ್ಪ ಅಜಾಗೃಕತೆಯಿಂದ ಚಲಾಯಿಸಿದರೆ ಅಫಘಾತಗಳು ಸಂಭವಿಸುತ್ತವೆ, ಹಾಗಾಗಿ ಪ್ರಾಣಪಾಯದಿಂದ ಪಾರಾಗಲು ಸುರಕ್ಷಿತವಾಗಿ ಹೆಲ್ಮೆಟ್ ಧರಿಸಬೇಕು ಎಂದರು. ಮತ್ತು ಇಂದಿನ ಯುವ ಪೀಳಿಗೆಯಂತೂ ಬೈಕ್ ಚಲಾಯಿಸುವಾಗ ಸುಖಾ ಸುಮ್ಮನೆ ಸ್ಟೈಲ್ ಮಾಡುವದು ಸ್ಟಂಟ್ ಮಾಡುವದು, ಬೈಕ್ ವ್ಹಿಲಿಂಗ್, ಮಾಡುವದು ಸೇರಿದಂತೆ ಅನೇಕ ತರಹದ ಅಫಘಾತ ಸಂಭವಿಸುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವದು ಸರಿಯಲ್ಲ ಎಂದು ವಾಹನ ಸವಾರರಿಗೆ ಮತ್ತು ಯುವ ಪೀಳಿಗೆಗೆ ಕಿವಿಮಾತು ಹೇಳಿದರು.ಅಷ್ಟೇ ಅಲ್ಲದೆ

ಮುಂಬದಿ ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಬೇಕು ಮತ್ತು ಮಕ್ಕಳು ಸಹ ಹೆಲ್ಮೆಟ್ ಧರಿಸಬೇಕು ಎಂದರು. ತಮ್ಮ ಸ್ವಂತ ಖರ್ಚಿನಲ್ಲಿ ಹೆಲ್ಮೆಟ್ ನೀಡಿ ರಸ್ತೆ ಸುರಕ್ಷತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದ ಪೊಲೀಸರ ಈ ನಡೆಗೆ ಸಾರ್ವಜನಿಕರಿಂದ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಪೊಲೀಸ್ ಹೆಡ್ ಕಾನ್ಸಟೇಬಲ್ ಕಾಸಿನಾಥ್, ಪೇದೆ ಸಂತೋಷ್ ಮಾಷಾಳೆ ಸೇರಿದಂತೆ ಅನೇಕ ಗಣ್ಯರು ಈ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಭಾಗವಹಿಸಿದರು.

