ಲೋಧ ಕಮಿಟಿ ವಜಾಗೊಳಿಸಿ. ಕೇಂದ್ರ ಸರ್ಕಾರವೇ ನೇರ ಭಾಗಿಯಾಗಿ ಖಾತೆ ಮತ್ತು ಠೇವಣಿ ಹಣ ಕೊಡಿಸಿ ಎಂದು ವಂಚನೆ ಸಂತ್ರಸ್ತ ಠೇವಣಿದಾರರ ಸಂಘ ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಇಂದು ಪ್ರತಿಭಟನೆ ನಡೆಸಿತು
ಭಾರತದಲ್ಲಿ ಪಿ.ಎ.ಸಿ.ಎಲ್. ಬ್ಯಾಂಕ್ ಮತ್ತು ಕಛೇರಿ ತೆರೆದು ಕರ್ನಾಟಕದಲ್ಲೇ ೩೭ ಬ್ರಾಂಚ್ ಹೊಂದಿ ತುಮಕೂರಿನಲ್ಲಿಯೂ ಪಿ.ಎ.ಸಿ.ಎಲ್. ಬ್ರಾಂಚ್ ಕಛೇರಿ ತೆರೆಯಲಾಗಿತ್ತು. ಇದರ ಖಾತೆದಾರರು ಹಾಗೂ ಠೇವಣಿದಾರರು ಭದ್ರತೆಗಾಗಿ ಇಲ್ಲಿ ಹಣ ತೊಡಗಿಸಿದ್ದರು. ಈಗ ಹಣ ಕೊಡದೆ ೨೦೧೫-೧೬ ಸಾಲಿನಿಂದ ಕಛೇರಿಗಳನ್ನು ಮುಚ್ಚಿ ಪಲಾಯನ ಮಾಡಲಾಗಿತ್ತು. ಈ ಪಿಎಸಿಎಲ್ ಬ್ಯಾಂಕ್ ಗ್ರಾಹಕರಿಗೆ ಹಣ ಕೊಡದೆ ವಂಚಿಸಿದರು. ವಂಚಿಸಿದ ಪಿಎಸಿಎಲ್ ವಿರುದ್ದ ಗ್ರಾಹಕರೆಲ್ಲ ಸೇರಿ “ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ (ರಿ) ” ಎಂಬ ಚಾರಿಟಬಲ್ ಟ್ರಸ್ಟ್ ಅನ್ನು ಸಾರ್ವಜನಿಕ ಸೇವೆಗೆಂದು ತೆರೆಯಿತು.
ದೇಶದಲ್ಲಿ ವಂಚನೆಗೊಳಗಾದ ಗ್ರಾಹಕರೆಲ್ಲ ಈ ಸಂಘದ ಸದಸ್ಯತ್ವ ಪಡೆದು ವಂಚನೆ ವಿರುದ್ದ ಹೋರಾಟ ಮಾಡಿ ತನಿಖೆ ನಡೆಸಿ ಹಣ ಕೊಡಿಸಿ ಎಂದು ಕೇಂದ್ರ ಸರ್ಕಾರದ ಮೊರೆ ಹೋದರು. ಪ್ರಕರಣವನ್ನು ಕೈಗೆತ್ತಿಕೊಂಡ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಲೋಧ ರವರ ಕಮಿಟಿ ರಚನೆ ಮಾಡಿತು. ಕಮಿಟಿಯ ತೀರ್ಮಾನದಂತೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತು. ಎಲ್ಲ ಸಿಬಿಐನ ವರದಿ ಪ್ರಕಾರ ಗ್ರಾಹಕರಿಗೆ ಪಿಎಸಿಎಲ್ ಹಣ ನೀಡದೆ. ಪಿಎಸಿಎಲ್ ಗ್ರೂಪ್ ಆಫ್ ಕಂಪನಿ. ಗ್ರಾಹಕರ ಹಣದಿಂದ ೩ ಲಕ್ಷ ಎಕರೆ ಭೂಮಿ ಕರೀದಿ ಮಾಡಿರುವುದನ್ನು ಸಿಬಿಐ ತನಿಖೆಯಿಂದ ಬಯಲು ಮಾಡಲಾಗಿದೆ.
ಕಂಪನಿ ಕರೀದಿಸಿರುವ ಜಮೀನು ಮಾರಿ ವಂಚನೆಗೊಳಗಾದವರ ಹಣ ನೀಡುವಂತೆ ಸುಪ್ರೀಮ್ ಕೋರ್ಟ್ ಆದೇಶ ಮಾಡಿತ್ತು. ಆದರೆ ಎಲ್ಲಾ ತನಿಖೆ ಮುಗಿದು ಅದರ ವರದಿ ಪಡೆದು ಸುಪ್ರೀಮ್ ಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಲೋಧ ರವರು ಮುಂದಿನ ಕ್ರಮ ಕೈಗೊಳ್ಳದೆ ಇರುವುದು ಗ್ರಾಹಕರ ವೇದಿಕೆಗೆ ಬೇಸರ ತಂದಿದೆ. ಆದ್ದರಿಂದ ಕಮಿಟಿಯಿಂದ ಅವರನ್ನು ವಜಾಗೊಳಿಸಿ ಕೇಂದ್ರವೇ ನೇರ ಜವಾಬ್ದಾರಿ ಪಡೆದು ಸಮಸ್ಯೆ ಬಗೆಹರಿಸಬೇಕು ಎಂದು ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ (ರಿ) ದ ಗ್ರಾಹಕರ ವೇದಿಕೆ ತುಮಕೂರಿನ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟಿಸಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಗೌರವಾನ್ವಿತ ಪ್ರಧಾನಿಯವರಿಗೆ ತಲುಪಿಸಲು ಕೋರಿದೆ. ಪ್ರತಿಭಟನೆ ವೇಳೆ ನಾರಾಯಣಪ್ಪ. ಶಿವಕುಮಾರ್. ಕೆ ಬಿ. ಮಹದೇವಯ್ಯ. ಶಿವಲಿಂಗಯ್ಯ. ಲಕ್ಷ್ಮಿನಾರಾಯಣ್. ಮತ್ತಿತರರು ಭಾಗವಹಿಸಿದ್ದರು.
ಲೋಧ ಕಮಿಟಿ ವಜಾಗೊಳಿಸಿ.
Leave a comment
Leave a comment