ಹರಪನಹಳ್ಳಿಯಲ್ಲಿ ಪತ್ತೆಯಾದ ಅಪ್ರಕಟಿತ ಶಿಲಾಶಾಸನ
ಐತಿಹಾಸಿಕ ಮಹತ್ವವುಳ್ಳ ಕುಣಿಗಲ್ ಕುರಿತ ಶಿಲಾಶಾಸನ ಪತ್ತೆ
ತುಮಕೂರು: ಕುಣಿಗಲ್ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪ್ರಮುಖ ಶಿಲಾಶಾಸನವೊಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಪತ್ತೆಯಾಗಿದೆ. ಹರಪನಹಳ್ಳಿಯ ಅರಸಿಕೆರೆ ಏರಿ ಸಮೀಪದ ಈಶ್ವರದೇವಾಲಯದಲ್ಲಿ ಈ ಶಾಸನ ದೊರೆತಿದೆ.
ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಎಂ. ಕೊಟ್ರೇಶ್ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಸುಧಾ ಜೆ. ಅವರ ಸಂಶೋಧನೆಯಿAದ ಈ ಶಾಸನದ ವಿವರಗಳು ಬೆಳಕಿಗೆ ಬಂದಿವೆ.
“ಇದು ಹನ್ನೊಂದನೆಯ ಶತಮಾನಕ್ಕೆ ಸಂಬAಧಿಸಿದ ಅಪ್ರಕಟಿತ ಶಿಲಾಶಾಸನವಾಗಿದ್ದು ೬ನೇ ವಿಕ್ರಮಾದಿತ್ಯನ ಕಾಲದ್ದಾಗಿದೆ,” ಎಂದು ಪ್ರೊ. ಕೊಟ್ರೇಶ್ ತಿಳಿಸಿದ್ದಾರೆ.
ಹರಪನಹಳ್ಳಿ ವ್ಯಾಪ್ತಿಯ ಅರಸಿಕೆರೆಯಲ್ಲಿ ಈ ಶಾಸನವು ಹಲವಾರು ವರ್ಷಗಳಿಂದ ಹೂತು ಹೋಗಿತ್ತು. ಹೂಳೆತ್ತುವ ಸಂದರ್ಭದಲ್ಲಿ ಪತ್ತೆಯಾದ ಈ ಶಾಸನವನ್ನು ಸ್ಥಳೀಯರು ಸ್ವಚ್ಛಗೊಳಿಸಿ ಸಮೀಪದ ಈಶ್ವರ ದೇವಾಲಯದಲ್ಲಿ ಸ್ಥಾಪಿಸಿದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಶಾಸನ ಪತ್ತೆಯಾಗುವುದರೊಂದಿಗೆ ಕಲ್ಯಾಣ ಚಾಳುಕ್ಯರ ವಿಕ್ರಮಾದಿತ್ಯನ ಕಾಲದ ಶಾಸನಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. ಶಾಸನವು ಕಪ್ಪುಮಿಶ್ರಿತ ನೀಲಿ ಛಾಯೆಯ ಲಿಪಿಯಲ್ಲಿ ಒಟ್ಟು ೨೮ ಸಾಲುಗಳನ್ನು ಒಳಗೊಂಡಿದೆ. ಇದು ೧೦೯೯ರಲ್ಲಿ ರಚನೆಯಾಗಿರಬಹುದೆಂದು ಊಹಿಸಲಾಗಿದೆ.
ಕ್ರಿ.ಶ. ೧೧ನೇ ಶತಮಾನದಲ್ಲಿಯೇ ತುಮಕೂರು ಜಿಲ್ಲೆಯ ಕುಣಿಗಲ್ ಕುಣಿಂಗಿಲು ನಾಡೆಂದು ಪ್ರಸಿದ್ಧಿ ಹೊಂದಿರುವುದು, ಚಾಳುಕ್ಯ ೬ನೇ ವಿಕ್ರಮಾದಿತ್ಯನ ಆಳ್ವಿಕೆ ಕುಣಿಂಗಿಲು ನಾಡವರೆಗೂ ಹಬ್ಬಿರುವುದು ಸದರಿ ಶಾಸನದಿಂದ ತಿಳಿದುಬರುತ್ತದೆ. ಶಾಸನದಲ್ಲಿರುವ ಮಾಹಿತಿಯಂತೆ ಆಗ ಕುಣಿಂಗಿಲು ನಾಡನ್ನು ಜಕ್ಕಿಸೆಟ್ಟಿ ಎಂಬಾತನು ಆಳುತ್ತಿದ್ದನು.
ಶಾಸನದ ಕಲ್ಲು ಸುಮಾರು ೫ ಅಡಿ ಎತ್ತರ ಹಾಗೂ ೩ ಅಡಿ ಅಗಲವಿದ್ದು, ಶಾಸನದ ಮೇಲ್ಬಾಗದ ಪಟ್ಟಿಕೆಯಲ್ಲಿ ೫೨ ವರ್ಷಕ್ಕಿಂತಲು ಹೆಚ್ಚು ಕಾಲ ಗುರುಸ್ಥಾನವನ್ನು ಅಲಂಕರಿಸಿದ ವರೇಶ್ವರ ಪಂಡಿತರು ಶಿವಲಿಂಗಕ್ಕೆ ಕೈಮುಗಿದು ನಿಂತಿರುವAತಹ ಚಿತ್ರವಿದೆ.
ಐತಿಹಾಸಿಕ ಮಹತ್ವವುಳ್ಳ ಕುಣಿಗಲ್ ಕುರಿತ ಶಿಲಾಶಾಸನ ಪತ್ತೆ
Leave a comment
Leave a comment