ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ ೩೧ರಲ್ಲಿರುವ ಇತಿಹಾಸ ಪ್ರಸಿದ್ದ ಶೆಟ್ಟಿಹಳ್ಳಿ ಆಂಜಿನೇಯ್ಯ ಸ್ವಾಮಿ ದೇವಸ್ಥಾನದ ಮುಂಬಾಗದ ಬಲಭಾಗದಲ್ಲಿ ಪರಿಶಿಷ್ಟ ಜಾತಿಯ ಹಟ್ಟಿ ಇದ್ದು ಇಲ್ಲಿ ೮೦ ಕ್ಕೂ ಹೆಚ್ಚು ಕುಟುಂಬಗಳು ಶತಮಾನಗಳಿಗೂ ಮೇಲ್ಪಟ್ಟು ವಾಸ ಮಾಡುತ್ತಿವೆ. ಇಲ್ಲಿ ಹಟ್ಟಿ ಮಾರಮ್ಮ ದೇವಸ್ಥಾನವಿದೆ, ಕಳೆದ ನೂರಾರು ವರ್ಷಗಳಿಂದ ಅಂದರೆ ತಾತ ಮುತ್ತಾತನ ಕಾಲದಿಂದಲೂ ಪರಿಶಿಷ್ಟ ಜಾತಿಯ ಜನರು ಓಡಾಡಲು ರಸ್ತೆಯನ್ನು ಸಹ್ಯಾದ್ರಿ ಸ್ಟೋರ್ ಪಕ್ಕದ ಮತ್ತು ಹಟ್ಟಿ ಮಾರಮ್ಮ ದೇವಸ್ಥಾನಕ್ಕೆ ಹೊಂದಿಕ್ಕೊAಡAತೆ ರಸ್ತೆಯನ್ನು ಬಿಡಲಾಗಿದೆ, ಇತ್ತೀಚಿಗೆ ಅಂದರೆ ೧೦ ವರ್ಷಗಳ ಹಿಂದೆ ಮಡಿವಾಳ ಜನಾಂಗಕ್ಕೆ ಸೇರಿದ ನಾಗರಾಜು ಬಿನ್ ಲೇಟ್ ಹನುಮಂತರಾಯಪ್ಪ ಎಂಬುವವರು ಓಡಾಡುವ ರಸ್ತೆ ನನಗೆ ಸೇರಿದ್ದು ನಾನು ಬೇರೆಯವರಿಂದ ಕ್ರಯಕ್ಕೆ ಪಡೆದಿರುತ್ತೇನೆ ಎಂದು ತುಮಕೂರು ಮಹಾನಗರ ಪಾಲಿಕೆಯಿಂದ ಪಿಐಡಿ ಪಡೆದು ಸುಳ್ಳು ಅಳತೆಯನ್ನು ನಮೂದಿಸಿ ಪ್ರಶ್ನೆ ಮಾಡಿದ ಪರಿಶಿಷ್ಟ ಜಾತಿಯ ಮುಖಂಡರು ಮತ್ತು ಯುವಕರ ಮೇಲೆ ಪೋಲಿಸ್ ಇಲಾಖೆಗೆ ದೂರು ನೀಡಿ ಕಿರುಕುಳ ನೀಡುತ್ತಿದ್ದಾರೆ. ೧೦ ವರ್ಷಗಳಿಂದ ಹಟ್ಟಿ ಮಾರಮ್ಮನ ಜಾತ್ರೆಗೆ ಅಡಚಣೆ ಮಾಡುವುದು, ಸತ್ತ ದೇಹಗಳನ್ನು ಸಾಗಿಸಲು ತೊಂದರೆ ಕೊಡುತ್ತಿದ್ದು, ವಾಹನ ಓಡಾಡಲು ತೊಂದರೆ ಕೊಟ್ಟು ಅವಾಚ್ಯ ಶಬ್ದಗಳಿಂದ ನಿಂಧಿಸುತ್ತಿದ್ದಾರೆ ಎಂದು ಶೆಟ್ಟಿಹಳ್ಳಿ ಎ.ಕೆ ಕಾಲೋನಿಯ ಮುಖಂಡರಾದ ಗೋಪಾಲಯ್ಯ, ದೀಪಿಕಾ, ಪುಟ್ಟರಾಜು, ಮಾರುತಿ ಆರ್, ರಘುಕುಮಾರ್, ವೆಂಕಟೇಶ್, ಆಂಜಿನಪ್ಪ, ರಾಜಣ್ಣ, ಮುನೇಶ್, ಶಶಿಕುಮಾರ್, ಮಾರುತಿ ಜಿ, ಗಂಗರಾಮ,
ಸಂಜೀವಯ್ಯ, ರಾಮಣ್ಣ, ನರಸಿಂಹಣ್ಣ, ಮಲ್ಲೇಶ್, ರಾಮಚಂದ್ರಯ್ಯ, ಹನುಮಂತರಾಯಿ ಮುಂತಾದವರು ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ತುಮಕೂರು ಮಹಾನಗರ ಪಾಲಿಕೆ ಮದ್ಯ ಪ್ರವೇಶ ಮಾಡಿ ಪರಿಶಿಷ್ಟ ಜಾತಿಯ ಜನರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ನಗರ ಪಾಲಿಕೆಯಿಂದ ಅಕ್ರಮ ಖಾತೆ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ರಕ್ಷಣೆ ನೀಡಬೇಕು- ಎ.ನರಸಿಂಹಮೂರ್ತಿನಿವಾಸಿಗಳ ಒತ್ತಾಯದ ಮೇರೆ ಎ.ಕೆ ಕಾಲೋನಿಗೆ ಭೇಟಿ ಮಾಡಿ ರಸ್ತೆ ಪರಿಶೀಲಿಸಿ ಮಾತನಾಡಿದ ಕೊಳಗೇರಿ ಸಮಿತಿಯ ಅಧ್ಯಕ್ಷ ಮತ್ತು ಜಿಲ್ಲಾ ಪರಿಶಿಷ್ಟ ಜಾತಿ ಜಾಗೃತಿ ಸಮಿತಿಯ ಸದಸ್ಯರಾದ ಎ.ನರಸಿಂಹಮೂರ್ತಿ ಶೆಟ್ಟಿಹಳ್ಳಿ ಎ.ಕೆ ಕಾಲೋನಿಯ ೮೦ ಕುಟುಂಬಗಳು ನೂರಾರು ವರ್ಷಗಳಿಂದ ರಸ್ತೆಯಲ್ಲಿ ಒಡಾಡುತ್ತಿದ್ದು. ನಗರ ಪಾಲಿಕೆಯ ಅಕ್ರಮ ಖಾತೆಯಿಂದ ಮೇಲ್ ಜಾತಿಯ ವ್ಯಕ್ತಿ ತನ್ನ ಪ್ರಭಾವ ಬೀರಿ ಪರಿಶಿಷ್ಟ ಜಾತಿಯ ಜನರನ್ನು ಎದುರಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಹಾಗಾಗಿ ನಗರ ಪಾಲಿಕೆಯ ಆಯುಕ್ತರು ಸುಳ್ಳು ದಾಖಲೆ ನೀಡಿ ಅಳತೆಯಲ್ಲಿ ಮೋಸ ಮಾಡಿರುವ ಪಿಐಟಿ ನಂಬರ್ ೪೮೯೨೭ ಹನುಮಂತರಾಯಪ್ಪ ಮತ್ತು ನಾಗರಾಜುಗೆ ಸೇರಿದ ೪೮೯೨೮ಪರಿಶೀಲಿಸಿ ರದ್ದುಗೊಳಿಸಬೇಕು ಒಂದುವೇಳೆ ಮೇಲ್ಜಾತಿಗೆ ಸೇರಿದ ವ್ಯಕ್ತಿಯ ಸ್ವತ್ತಾಗಿದ್ದರು ಸಾರ್ವಜನಿಕರು ಓಡಾಡಲು ರಸ್ತೆಯನ್ನು ಸ್ವಾಧೀನಗೊಳಿಸಿಕೊಳ್ಳಬೇಕು. ಈಗಾಗಲೇ ನಗರ ಪಾಲಿಕೆಯಿಂದ ಚರಂಡಿ ಮತ್ತು ಯುಜಿಡಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆದ್ದರಿಂದ ಸಂಬAಧಪಟ್ಟ ಇಲಾಖೆಗಳು ಮಧ್ಯ ಪ್ರವೇಶ ಮಾಡಿ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ರಸ್ತೆ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಮತಿಯ ಪದಾಧಿಕಾರಿಗಳಾದ ಶಂಕ್ರಯ್ಯ, ಅರುಣ್, ತಿರುಮಲಯ್ಯ, ರಂಗನಾತ್ ಪಾಲ್ಗೊಂಡಿದ್ದರು.