ಸಮಾಜದ ಋಣ ತೀರಿಸುವ ನಿಟ್ಟಿನಲ್ಲಿ ದಿಯಾ ಚಾರಿಟಬಲ್ ಟ್ರಸ್ಟ್, ಸಮಾನ ಮನಸ್ಕ ಸಮಾಜ ಸೇವಕರ ಜೊತೆಗೂಡಿ ಆರ್ಹರಿಗೆ ತ್ರಿಚಕ್ರ ವಾಹನ ಸೇರಿದಂತೆ ಹಲವರು ಸಾಮಾಜಿಕ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಶ್ಲಾಘನೀಯವಾದ ಕೆಲಸವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾ.ನೂರುನ್ನಿಸಾ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕೆ.ಆರ್.ಬಡಾವಣೆಯ ದಿಯಾ ಚಾರಿಟಬಲ್ ಟ್ರಸ್ಟ, ಇಂಡಿಯಾ ವತಿಯಿಂದ ಆಯೋಜಿಸಿದ್ದ ಅಂಗವಿಕಲರಿಗೆ ತ್ರಿಚಕ್ರವಾಹನ ವಿತರಣೆ ಹಾಗೂ ಇಕೋ ಪ್ರಂಡ್ಲಿ ತುತ್ತು ವಾಹನ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಇಂತಹ ಕಾರ್ಯಗಳನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಹಣ ಗಳಿಸಿ, ಶ್ರೀಮಂತರಾಗುವ ಭರದಲ್ಲಿ ನಾವೆಲ್ಲರೂ ಸಂವೇಧನಾ ಶೀಲತೆಯನ್ನು ಕಳೆದುಕೊಳ್ಳುತ್ತಿದ್ದೇವೆ.ಸಮಾಜದಿಂದ ಎಲ್ಲವನ್ನು ಪಡೆದ ನಾವು,ಸಮಾಜದ ಋಣ ತೀರಿಸುವ ಬಗ್ಗೆ ಯಾರು ಆಲೋಚಿಸುತ್ತಿಲ್ಲ. ಇಮ್ಯಾನ್ಯುಯಲ್ ಜಯಕುಮಾರ್ ಮತ್ತು ಅವರ ಕುಟುಂಬದವರು ಇಂದು ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜದಲ್ಲಿರುವ ಅಶಕ್ತರುಗಳನ್ನು ಗುರುತಿಸಿ, ಅವರಿಗೆ ಅಗತ್ಯವಿರುವ ವಸ್ತುಗಳನ್ನು ನೀಡಿ,ಅವರ ನಗುವಿನಲ್ಲಿ ತಮ್ಮ ಸಂತೋಷ ಕಾಣುತ್ತಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಲಿ ಎಂದು ನ್ಯಾ.ನೂರುನ್ನಿಸಾ ನುಡಿದರು.
ಸಮಾಜದಲ್ಲಿರುವ ಬಡವರು, ಅಶಕ್ತರು, ದುರ್ಬಲ ವರ್ಗದವರ ಸೇವೆ ಮಾಡುವುದು ಭಗವಂತನ ಸೇವೆ ಮಾಡಿದಂತೆ.ಅoಗವಿಕಲರಿಗೆ ಅನುಕಂಪ ತೋರಿಸುವುದಕ್ಕಿಂತ, ಆವರಲ್ಲಿ ಆತ್ಮ ಧೈರ್ಯ ಬೆಳೆಸುವ ಕೆಲಸವನ್ನು ದಿಯಾ ಚಾರಿಟಬಲ್ ಟಸ್ಟ್ ಅಫ್ ಇಂಡಿಯಾ ಮಾಡುತ್ತಿದೆ. ಇಂತಹವರ ಸಂಖ್ಯೆ ಸಾವಿರವಾಗಲಿ,ಮುನುಷ್ಯ ಪ್ರೀತಿ ಸೇರಿದಂತೆ ಎಲ್ಲವನ್ನು ತೆಗೆದುಕೊಳ್ಳುವುದಷ್ಟೇ ಕಲಿತಿದ್ದಾನೆ.ಕೊಡುವುದನ್ನು ಕಲಿತ್ತಿಲ್ಲ. ಒಮ್ಮೆ ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗಿ ನೋಡಿ, ಅದರಲ್ಲಿ ನಿಮಗೆ ಸಿಗುವ ಆನಂದ ಹೇಳತೀರದು.ಇಂತಹ ಸೇವೆಯಲ್ಲಿ ನಿರತರಾಗಿರುವ ಎಲ್ಲರಿಗೂ ಭಗವಂತ ಒಳ್ಳೆಯದನ್ನು ಕರುಣಿಸಲಿ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಎಂ.ನಿಲ್ಸನ್ ಸ್ಯಾಮ್ಯುವೆಲ್, ಶ್ರೀಮತಿ ಸುನಿತ ಇಮ್ಯಾನ್ಯೂಯಲ್ ಜಯಕುಮಾರ್, ದಿಯಾ ಚಾರಿಟಬಲ್ ಟ್ರಸ್ಟ್ನ ನಿರ್ದೇಶಕಕ ಸತೀಶ್ಕುಮಾರ್, ವೆಸ್ಲಿ ದೇವಾಲಯದ ಸಭಾಪಾಲಕ ಮಾರ್ಗನ್ ಸಂದೇಶ್, ಡಿ.ಹೆಚ್.ಓ ಕಚೇರಿಯ ಸಹಾಯಕ ಆಡಳಿತಾಧಿಕಾರಿ ವಿಲ್ಸನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮೂವತ್ತಕ್ಕೂ ಹೆಚ್ಚು ತ್ರಿಚಕ್ರವಾಹನಗಳನ್ನು ಅಂಗವಿಕಲರಿಗೆ ವಿತರಿಸಲಾಯಿತು.ಅಲ್ಲದೆ ಪರಿಸರ ಸ್ನೇಹಿ ಅಂಬ್ಯುಲೆನ್ಸ್ ಸಹ ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
ಸಮಾಜದ ಋಣ ತೀರಿಸುವ ನಿಟ್ಟಿನಲ್ಲಿ ದಿಯಾ ಚಾರಿಟಬಲ್ ಟ್ರಸ್ಟ್

Leave a comment
Leave a comment