ಚರ್ಮ ರೋಗ ಲಕ್ಷಣ ಪತ್ತೆಗೆ ಡೆರ್ಮೊಟೋಸ್ಕೋಪಿ ಸಹಕಾರಿ
ತುಮಕೂರು: ಮಾನವದ ದೇಹದಲ್ಲಿ ಇತ್ತೀಚಿಗೆ ಕಂಡುಬರುತ್ತಿರುವ ವಿಭಿನ್ನ ರೀತಿಯ ಚರ್ಮ ರೋಗ ಹಾಗೂ ಅವುಗಳ ಲಕ್ಷಣ ಪತ್ತೆಗೆ ಡೆರ್ಮೊಟೋಸ್ಕೋಫಿ ಆಧುನಿಕ ಪರೀಕ್ಷಾ ವಿಧಾನ ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚು ಸಹಕಾರಿ ಎಂದು ಬಾಗಲಕೋಟೆಯ ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ಚರ್ಮರೋಗ ತಜ್ಞ ಡಾ.ಬಾಲಚಂದ್ರ ಎಸ್. ಅಂಕಾಡೆ ತಿಳಿಸಿದರು.
ನಗರದ ಸಾಹೇ ವಿವಿಯ ಶ್ರೀ ಸಿರ್ದ್ಧಾಥ ವೈದ್ಯಕೀಯ ಕಾಲೇಜು ಹಾಗೂ ತುಮಕೂರು ಡೇರ್ಮೋಟಲಾಜಿಸ್ಟ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಢೆರ್ಮಟೋಸ್ಕೋಫಿ ಚಿಕಿತ್ಸಾ ವಿಧಾನಗಳ ಅಳವಡಿಕೆ ಕುರಿತ ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಕಾಲಘಟ್ಟದಲ್ಲಿ ಉಂಟಾಗುತ್ತಿರುವ ಕಲುಷಿತ ವಾತಾವರಣದಿಂದಾಗಿ ಮನುಷ್ಯನ ಆರೋಗ್ಯದ ಮೇಲೆ ಮಾರಕ ಪರಿಣಾಮ ಉಂಟಾಗುತ್ತಿದ್ದು. ಅದರಲ್ಲೂ ಚರ್ಮ ರೋಗದಂತಹ ಸೂಕ್ಷö್ಮವಾದ ಕಾಯಿಲೆಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಚರ್ಮ ರೋಗದ ಸೂಕ್ಷö್ಮತೆಗಳನ್ನು ಶಸ್ತçಚಿಕಿತ್ಸೆಗಳಿಲ್ಲದೇ ಡೆರ್ಮೊಟೋಸ್ಕೋಫಿ ವಿಧಾನ ಮೂಲಕ ವಿವಿಧ ಬಗೆಯೆ ಕಾಯಿಲೆ ಹಾಗೂ ರೋಗ ಲಕ್ಷಣಗಳನ್ನು ತಕ್ಷಣ ಪತ್ತೆ ಹಚ್ಚಿ ಅಗತ್ಯ ಹಾಗೂ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಹೆಚ್ಚು ಸಹಕಾರಿಯಾಗಲಿದೆ.
ಇದೇ ಮೊದಲ ಬಾರಿಗೆ ತುಮಕೂರಿನಲ್ಲಿ ಚರ್ಮರೋಗ ಚಿಕಿತ್ಸಾ ವಿಧಾನ ಹಾಗೂ ಹೊಸ ತಂತ್ರಜ್ಞಾನ ಅಳವಡಿಕೆಗೆ ಪೂರಕವಾಗಿ ಕಾರ್ಯಗಾರ ಏರ್ಪಡಿಸಲಾಗಿದೆ. ಚರ್ಮ, ಕೂದಲು ಮತ್ತು ಉಗುರುಗಳ ಜಾಗದಲ್ಲಿ ಮೂರು ಸಾವಿರಕ್ಕೂ ಹೆಚ್ಚು ರೋಗಗಳು ಕಂಡುಬರುತ್ತವೆ. ಈ ಭಾಗದ ರೋಗಗಳನ್ನು ನಿಖರವಾಗಿ ಮತ್ತು ತುರ್ತಗಾಗಿ ಪತ್ತೆ ಹಚ್ಚಲು ಈ ಆಧುನಿಕ ಚಿಕಿತ್ಸಾ ವಿಧಾನ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ವಿಜಯಪುರದ ಬಿಎಂ ಪಾಟೀಲ್ ವೈದ್ಯಕೀಯ ಕಾಲೇಜಿನ ಚರ್ಮ ರೋಗ ತಜ್ಞ ಡಾ.ಕೇಶವಮೂರ್ತಿ ಆದ್ಯ ಮಾತನಾಡಿ ಚರ್ಮ ರೋಗದ ಸ್ಥಿತಿಗತಿಯು ಮನುಷ್ಯನ ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಚರ್ಮದ ಸ್ಥಿತಿಗತಿ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹಾಗಾಗಿ ಚರ್ಮದ ಮೇಲೆ ಕಾಣಿಸಿಕೊಳ್ಳುವ ಗುರುತುಗಳು, ಚಿನ್ನೆಗಳ ಬಗ್ಗೆ ಲಘುವಾಗಿ ಪರಿಗಣಿಸದೆ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದರು.
ಚರ್ಮ ರೋಗ ಲಕ್ಷಣ ಪತ್ತೆಗೆ ಡೆರ್ಮೊಟೋಸ್ಕೋಪಿ ಸಹಕಾರಿ

Leave a comment
Leave a comment