ಜೈ ಕನ್ನಡಿಗರ ರಕ್ಷಣಾ ವೇದಿಕೆ ರಾಜಘಟಕ ಕಲ್ಬುರ್ಗಿ ಸಂಸ್ಥಾಪಕ ಅಧ್ಯಕ್ಷರಾದ ಸಚಿನ್ ಎಸ್ ಪರ್ತಾಬಾದ ಅವರ ನೇತೃತ್ವದಲ್ಲಿ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿ ಕಲಬುರ್ಗಿ ಇವರಿಗೆ ಕಲ್ಬುರ್ಗಿ ನಗರದ ನೂತನವಾಗಿ ಕಟ್ಟಿರುವ ಜಯದೇವ್ ಆಸ್ಪತ್ರೆ ಕಾಂಪೌಂಡ್ ಗೆ ಬಸ್ ನಿಲ್ದಾಣ ನಿರ್ಮಾಣ ಹಾಗೂ ಬೇಸಿಗೆ ಬಿಸಿಲು ಪ್ರಾರಂಭವಾಗುತ್ತಿರುವುದರಿಂದ ನಗರದಲ್ಲಿರುವಂತ ಎಲ್ಲಾ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಹಾಗೂ ಫ್ಯಾನ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೈ ಕನ್ನಡಿಗ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಸಚಿನ್ ಎಸ್ ಪರ್ತಾಬಾದ,ಅಕ್ಷಯ್ ನವೀನ್, ಸುರೇಶ್ ಅನಗುಡಿ, ಅಣವೀರ್ ಪಾಟೀಲ್, ಪ್ರವೀಣ್ ಶಿಂದೆ ,ಅಂಬು ಮಸ್ಕಿ, ಸಾಯಿ ಕುಮಾರ್ ಶಿಂಧೆ ಉಪಸ್ಥಿತರಿದ್ದರು.
ಕಲಬುರ್ಗಿ ಜಿಲ್ಲೆಯ ಎಲ್ಲಾ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು ಮತ್ತು ಫ್ಯಾನ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಮನವಿ

Leave a comment
Leave a comment