ನಗರ ಸ್ಥಳೀಯ ಸಂಸ್ಥಗಳಾದ ಮುನಿಸಿಪಾಲಿಟಿ, ಮಹಾ ನಗರಪಾಲಿಕೆಗಳಲ್ಲಿ ದುಡಿಯುವ ಪೌರ ಕಾರ್ಮಿಕರಲ್ಲಿ ಖಾಯಂ . ಗುತ್ತಿಗೆ, / ನೇರಪಾವತಿ / ಸಮಾನ ವೇತನ/ ದಿನಗೂಲಿ ಹೀಗೆ ಹಲುವು ಹೆಸರುಗಳ ಅಡಿಯಲ್ಲಿ ಒಂದೆ ಕೆಲಸ ಮಾಡುವ ಪೌರ ಕಾರ್ಮಿರನ್ನು ವಿಭಜಿಸಿ ವೇತನ ಮತ್ತು ಇತರೆ ಸೌಲಭ್ಯಗಳಲ್ಲಿ ತಾರತಮ್ಯ ಮಾಡುತ್ತಾಬಂದಿರುವ ಸರ್ಕಾರಗಳ ನಡೆಯನ್ನು ಬದಲಿಸುವಂತೆ ಮುನಿಸಿಪಲ್ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯಧರ್ಶಿ ಸೈಯದ್ ಮುಜೀಬ್ ಅವರು ಒತ್ತಾಯಿಸಿದರು .ಅವರು ದಿನಾಂಕ;೧೦-೧೦-೨೦೨೩ ರ ಮಂಗಳವಾರ ಮಧ್ಯಾನ್ಹಾ ೪ ಗಂಟೆಗೆ ತುಮಕೂರು ನಗರದ ಡಾ; ಬಿ.ಆರ್ , ಅಂಬೇಡ್ಕರ್ ಭವನದಲ್ಲಿ ನಡೆದ ತುಮಕೂರು ಪೌರ ಕಾರ್ಮಿಕರ ಸಂಘ. ರಿ ೨೩ನೇ ಸಾಲಿನ ಸರ್ವಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಒಂದೆ ಕೆಲಸಕ್ಕೆ – ಒಂದೆ ಸ್ವರೂಪದ ವೇತನ ನೀಡಬೇಕಾದ್ದು ಕಾನೂನು , ಅದರೆ ಇದನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಉಲ್ಲಂಘಿಸಲಾಗುತ್ತಿದೆ. ಹಲವು ವರ್ಷಗಳ ನಿರಂತ ಚಳುವಳಿಗಳ ನಂತರವು ಎಲ್ಲಾ ಪೌರ ಕಾರ್ಮಿಕರಿಗೆ ನ್ಯಾಯ ಸಿಕ್ಕಿಲ್ಲ. ಬದಲಿಗೆ ಶೌಚಾಲಯ, ಉದ್ಯಾನವನ, ಕಸದ ಅಟೋ ಸಹಾಯಕ, ಲೋಡರ್ ಹೀಗೆ ವಿವಿಧ ಹೆಸರುಗಳನ್ನು ನೀಡಿ ಪೌರ ಕಾರ್ಮಿಕರ ದುಡಿಸಲಾಗುತ್ತಿದೆ ಮತ್ತು ಶೋಷಿಸಲಾಗುತ್ತಿದೆ ಎಂದು ಅವರು ಕಿಡಿಕಾರಿದರು.ಪ್ರಾಸ್ತಾವಿಕ ಮಾತನಾಡಿ ಸಂಘದ ಪ್ರಧಾನ ಕಾರ್ಯಧರ್ಶಿ ಎನ್. ಕೆ. ಸುಬ್ರಮಣ್ಯ ಅವರು ಗುತ್ತಿಗೆಯಿಂದ ನೇರ ಪಾವತಿಗೆ ತರಲಾಗಿದೆ ಅದರು ಸಮಾನ ವೇತನ ನೀಡದ ಕನಿಷ್ಟ ವೇತನವನ್ನು ಮಾತ್ರವೆ ನೀಡಿ ದುಡಿಸುವುದು ನ್ಯಾಯ ಸಮ್ಮತ ಅಲ್ಲ, ಸೂಕ್ತ ರಕ್ಷಣ ಸಲಕರಣೆ, ಇತರೆ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿದರುಸಭೆಯ ಅರಂಭದಲ್ಲಿ ಮಂಜುನಾಥ್ ಸ್ವಾಗತಿಸಿದರು ಕೋನೆಯಲ್ಲಿ ಕೃಷ್ಣಮೂರ್ತಿ ವಂದಿಸಿದರುಸಭೆಯಲ್ಲಿ ಈ ನೀರ್ಣಯಗಳನ್ನು ಸರ್ವಾನುಮತದಿಂದ ಕೈಗೋಳ್ಳಲಾಯಿತುಎಲ್ಲಾ ಪೌರ ಕಾರ್ಮಿಕರನ್ನು ತಾರತಮ್ಯ ಇಲ್ಲದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಇತರೆ ಸೌಲಭ್ಯಗಳನ್ನು ನೀಡಲು ಸರ್ಕಾರ ಕ್ರಮ ವಹಿಸಬೇಕು.ಖಾಯಂ ನೌಕರಿಗೆ ಮಾತ್ರ ನೀಡಿರುವ ೭೦೦೦ ರೂಗಳನ್ನು ಇತರೆ ಎಲ್ಲಾ ಪೌರ ಕಾರ್ಮಿಕರಿಗ ನೀಡಬೇಕುಸುರಕ್ಷತಾ ಸಲಕರಣೆಗಳಾದ ನೋಸ್ ಪೀಸ್ ಕೈ ಕವಚ, ಗುಣ ಮಟ್ಟದ ಗಮ್ ಬೂಟ್, ಸಮವಸ್ತ, ಕೆಲಸಕ್ಕೆ ಅಗತ್ಯವಾದ ಸಲಕರಣೆಗಳನ್ನು ನೀಡಬೇಕುಲಕ್ಷಂತಾರ ರೂಪಾಯಿಗಳು ವೆಚ್ಚವಾದರು ಬೆಳಗಿದ ಉಪಹಾರ ತಿನ್ನಲು ಯೋಗ್ಯವಾಗಿಲ್ಲ, ಉತ್ತಮ ಗುಣ ಮಟ್ಟ- ಶುಚಿಯಾದ ಆಹಾರವನ್ನು ನೀಡಲು ಕ್ರಮವಹಿಸಿ ಒಂದು ಕ್ಯಾಂಟಿನ್ ಸಮಿತಿಯನ್ನು ರಚಿಸಬೇಕು ಹಲವು ಬಾರಿ ಕೇಳಿದರು ಎಲ್ಲಾ ಪೌರ ಕಾರ್ಮಿಕರಿಗೆ ಸಫಾಯಿ ಕರ್ಮಚಾರಿ ಪತ್ರ ನೀಡಲಾಗಿಲ್ಲ ಈ ತಕ್ಷಣವೆ ಇದನ್ನು ನೀಡಿ ಸಫಾಯಿ ಕರ್ಮಚಾರಿಗಳ ನಿಗಮದಿಂದ ಸೌಲಭ್ಯವನ್ನುಯ ಪಡೆಯಲು ಸಹಕಾರಿಸಬೇಕುಮನೆ ಇಲ್ಲದ ಎಲ್ಲಾ ಪೌರ ಕಾರ್ಮಿಕರಿಗೆ ಮನೇ- ನಿವೇಶನ ನೀಡಬೇಕು.ಹತ್ತಾರು ವರ್ಷಗಳ ಕಾಲ ಕೆಲಸ ಮಾಡಿ ಕೆಲಸದ ಅವಧಿಯಲ್ಲೆ ನಿಧನರಾಗಿರುವವವ ನೇರ ಪಾವತಿ ಪೌರ ಕಾರ್ಮಿಕರ ಕುಟುಂಬಗಳು ಬಿದಿ ಪಾಲು ಅಗದಂತೆ ತಡೆಯಲು ಅವಲಂಬಿತರಿಗೆ ಕೆಲಸ ಮತ್ತು ಕಾಯಿದೆಯಂತೆ ಉಪಧನ ನೀಡಬೇಕು.ನೂತನ ಪದಾಧಿಕಾರಿಗಳ ಅಯ್ಕೆಯು ಸರ್ವಾನು ಮತದಿಂದ ನಡೆದಿದ್ದುಅಧ್ಯಕ್ಷರು ; ಸೈಯದ್ ಮುಜೀಬ್.ಉಪಾಧ್ಯಕ್ಷರು; ರಾಮಣ್ಣ, ನಟರಾಜು, ಕೃಷ್ಣ ಮೂರ್ತಿಪ್ರಧಾನ ಕಾರ್ಯಧರ್ಶಿ; ಎನ್.ಕೆ.ಸುಬ್ರಮಣ್ಯಕಾರ್ಯದರ್ಶಿಗಳಾಗಿ ಕುಮಾರ್,ಗಂಗರಾಜು,ಕೆAಪಣ್ಣ,ಶಿವಕುಮಾರ್,ರಾಜೇಶ್ಸAಘಟನಾ ಕಾರ್ಯಧರ್ಶಿ; ಮಂಜುನಾಥಖಜಾAಚಿ; ಮಂಜಣ್ಣ.ಎಮ್.ಸಿಕಾರ್ಯಕಾರಿಸದಸ್ಯರುಗಳಾಗಿ,ನರಸಿAಹಮೂರ್ತಿ,ಮಹದೇವ,ಗAಗಹನುಮಯ್ಯ,ನವೀನಕುಮಾರ್,ಆನAದ ಸೇರಿದಂತೆ ೩೫ ಜನರ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.