ತುಮಕೂರು – ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಿಂದ ವಿವೇಕಾನಂದ ರಸ್ತೆಗೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿರುವ ಡಿವೈಡರ್ ಹಾಗೂ ಬ್ಯಾರಿಕೇಡ್ ತೆರವುಗೊಳಿಸುವಂತೆ ಹಲವು ವರ್ತಕರು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದಾರೆ.
ಈ ಬ್ಯಾರಿಕೇಡ್ ತೆರವುಗೊಳಿಸುವ ಸಂಬAಧ ಮಾತನಾಡಿರುವ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಿಂದ ವಿವೇಕಾನಂದ ರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಕಟ್ಟಿಕೊಂಡು ಜೀವನ ನಡೆಸಿಕೊಂಡು ಬರುತ್ತಿದ್ದಾರೆ, ಜೊತೆಗೆ ಇದನ್ನೇ ನಂಬಿಕೊoಡು ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ ಇಂತಹ ವರ್ತಕರಿಗೆ ಬ್ಯಾರಿಕೇಡ್ ಆಡ್ಡಲಾಗಿರುವ ಕಾರುವ ಅಂಗಡಿಗಳಿಗೆ ಸಾರ್ವಜನಿಕರು ಹಾಗೂ ಗ್ರಾಹಕರು ಬಾರದೇ ಅಂಗಡಿ ವರ್ತಕರು ಕಂಗಾಲಾಗಿದ್ದು ಕೂಡಲೇ ಅಡ್ಡಲಾಗಿರುವ ಬ್ಯಾರಿಕೇಡ್ನ್ನು ತೆರವುಗೊಳಿಸುವ ಸಂಬoಧ ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ರವರಿಗೆ ಮನವಿಯನ್ನು ಮಾಡಿದ್ದಾರೆ.
ಇನ್ನು ತುಮಕೂರು ಗುಜರಿ ಸಂಘದ ಅಧ್ಯಕ್ಷ ಖುದ್ದುಸ್ ಅಹಮದ್ ಮಾತನಾಡಿ ಕೋವಿಡ್ ನಂತರ ಸಣ್ಣಪುಟ್ಟ ವ್ಯಾಪಾರಸ್ಥರು ಇತ್ತೀಚೆಗೆ ತಾನೇ ಸಹಜ ಸ್ಥಿತಿಗೆ ಮರಳುತ್ತಿದ್ದು ಇದರ ನಡುವೆಯೇ ಅಶೋಕ ರಸ್ತೆಯಲ್ಲಿನ ಪ್ರಶಾಂತ ಟಾಕೀಸ್ ಮುಂಭಾಗದಲ್ಲಿ ಇರುವ ಡಿವೈಡರ್ ಹಾಗೂ ಬ್ಯಾರಿಕೇಡ್ ಮುಚ್ಚಿರುವ ಕಾರಣ ಗ್ರಾಹಕರು ಬೇರೆ ರಸ್ತೆಗಳನ್ನು ಬಳಸಿ ಸಂಚರಿಸುತ್ತಿದ್ದಾರೆ. ಆ ಮೂಲಕ ಸ್ಥಳೀಯ ಸ್ಥಳಗಳಲ್ಲಿ ವ್ಯಾಪಾರ ಮಾಡುತ್ತಿರುವ ವರ್ತಕರಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ ಎಂದರು, ಆದುದರಿಂದ ಕೂಡಲೇ ಸ್ಥಳೀಯ ಆಡಳಿತಗಳು ಡಿವೈಡರ್ ತೆರವುಗೊಳಿಸಿ ವರ್ತಕರ ಸಂಕಷ್ಟಕ್ಕೆ ಸ್ಪಂದಿಸಬೇಕು ಹಾಗೂ ಶೀಘ್ರದಲ್ಲೇಯೇ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಪುನರಾರಂಭಗೊಳ್ಳುವ ದಿನ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಇತರೆ ವ್ಯಾಪಾರಸ್ಥರು ಸಹ ತಮ್ಮ ವ್ಯಾಪಾರವನ್ನು ಸುಗಮವಾಗಿ ನಡೆಸಲು ಸಹರಿಸಬೇಕು ಎಂದಿದ್ದಾರೆ.