ಚುನಾವಣಾ ಕೆಲಸ ಅಂಗನವಾಡಿ ಕಾರ್ಯಕರ್ತ ಬಿಡುಗಡೆಗೆ ಒತ್ತಾಯ- ಪ್ರತಿಭಟನೆ
ಈಗಾಗಲೆ ವಿಪರೀತ ವಿವಿಧ ಕೆಲಸಗಳಲ್ಲಿ ತೋಡಗಿರುವ ಅಂಗನವಾಡಿ ನೌಕರರನ್ನು ಚುನಾವಣಾ ಕೆಲಸದಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರ ಸಂಘ . ರಿ ಸಿಐಟಿಯು ವತಿಯಿಂದ ದಿನಾಂಕ; ೦೯-೦೮-೨೦೨೩ ರಂದು ಮಧ್ಯಾನ್ಹ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರ ಕಛೇರಿ ಎದರು ಧರಣಿ ನಡೆಸಿ ಪತಿಭಟಿಸಿದರು .
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ IಅಆS ಯೋಜನೆಯ ಉದ್ದೇಶಗಳನ್ನು ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳಿಗೆ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿ ಕೊಡಬೇಕು ಮತ್ತು ಕೇಂದ್ರ ಸರ್ಕಾರ ಇಲಾಖಾ ಸಚಿವರ ಮುಖಾಂತರ ಚುನಾವಣಾ ಆಯೋಗಕ್ಕೆ ಪತ್ರಬರೆದಯ ಬಿ.ಎಲ್ . ಓ ಅಗಿರುವ ಎಲ್ಲಾ ಅಂಗನವಾಡಿ ನೌಕರರನ್ನು ಬಿಡುಗಡೆ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಸಮಗ್ರ ಶಿಶು ಅಭಿವೃದ್ಧಿಯೋಜನೆ ೬ ವರ್ಷದೊಳಗಿನ ಮಕ್ಕಳನ್ನು ಮುಂದಿನ ಪ್ರಜೆಗಳನ್ನಾಗಿ ರೂಪಿಸುವ ಅತ್ಯಂತ ಮಹತ್ತರ ಉದ್ದೇಶವನ್ನಿಟ್ಟುಕೊಂಡಿದೆ. IಅಆS ಯೋಜನೆ ಪ್ರಾರಂಭವಾದದ್ದೇ ೬ ವರ್ಷದೊಳಗಿನ ಮಕ್ಕಳ ಮಾನಸಿಕ ಬೆಳವಣಿಗೆ ೮೦%, ದೈಹಿಕ ಬೆಳವಣಿಗೆ ೪೦% ಆಗುತ್ತಿದೆ. ಈ ಹಂತದಲ್ಲಿ ಮಗುವಿಗೆ ಬೇಕಾದ ಆಹಾರ, ಆರೋಗ್ಯ ಮತ್ತು ಶಿಕ್ಷಣವನ್ನು ಕೊಡಲಿಕ್ಕಾಗಿ ಪ್ರಾರಂಭಿಸಲಾಗಿದೆ.
ಈಗಾಗಲೇ ರಾಜ್ಯದಲ್ಲಿ ೨೦೨೨-೨೩ ರಲ್ಲಿ ೫೦ ಲಕ್ಷ ಫಲಾನುಭವಿಗಳಿದ್ದರು ೨೩-೨೪ ರಲ್ಲಿ ೪೮ ಲಕ್ಷಕ್ಕಿಳಿದಿದೆ. ಮಾತ್ರವಲ್ಲದೇ ೩ ರಿಂದ ೬ ವರ್ಷದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ಸಿಗುವುದಿಲ್ಲ ಕಾರ್ಯಕರ್ತರು ತಮ್ಮ IಅಆS ಯೇತರ ಮತ್ತು ಇಲಾಖೇತರ ಯೋಜನೆಗಳಿಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ ಎಂಬ ದೂರು ಸಾಮಾನ್ಯವಾಗಿದೆ. ಮಾತ್ರವಲ್ಲದೇ ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ಮತ್ತು ರಕ್ತಹೀನತೆಯ ಪ್ರಮಾಣವೂ ಹೆಚ್ಚಿದೆ ಇಂತಹ ಸಂದರ್ಭದಲ್ಲಿ ಕಾರ್ಯಕರ್ತೆ ಮಕ್ಕಳೊಡನೆ ಮತ್ತು ಗರ್ಭಿಣಿ ಬಾಣಂತಿಯೊಡನೆ ಹೆಚ್ಚಿನ ಒಡನಾಡಬೇಕಿದೆ. ಆದರೆ ಇಂದು ದಾಖಲೆಗಳನ್ನು ನಿರ್ವಹಿಸುವ ತಾಂತ್ರಿಕ ಕೆಲಸಗಳೇ ಹೆಚ್ಚಾಗಿ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಕೊಡಲು ಆಗುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ೧೭-೩-೨೦೨೨ ಮತ್ತು ೨೩-೨-೨೦೨೩ ರಂದು ಪತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಬರೆಯಲಾಗಿದೆ. ಆದರೂ ಯಾವುದೇ ಹೆಚ್ಚುವರಿ ಕೆಲಸಗಳು ನಿಂತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು
ಚುನಾವಣಾ ಕೆಲಸ ಅಂಗನವಾಡಿ ಕಾರ್ಯಕರ್ತ ಬಿಡುಗಡೆಗೆ ಒತ್ತಾಯ-

Leave a comment
Leave a comment