ಕಲಬುರಗಿ : ಕವಲಗಾ ( ಬಿ ) ಗ್ರಾಮದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಪ್ರೀತಿರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಗ್ರಾಮದ ಗುರುಸಿದ್ದಯ್ಯ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರೀತಿರಾಜ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ. ಗ್ರಾಮದಲ್ಲಿ ಪಂಪ್ ಆಪರೇಟರ್ ಆಗಿ ಪುನಃ ಕರ್ತವ್ಯಕ್ಕೆ ನೇಮಿಸಿಕೊಳ್ಳಲು ಹಾಗೂ ಹಿಂದಿನ ವೇತನ ಬಿಡುಗಡೆ ಮಾಡಿಕೊಡುವಂತೇ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು ಆದರೆ ಅಭಿವೃದ್ಧಿ ಅಧಿಕಾರಿಗಳು ಪದೇ ಪದೇ ಸತಾಯಿಸುತ್ತಿದ್ದರು, ಜೊತೆಗೆ 17000 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು, ಇದರಿಂದ ಬೇಸತ್ತ ಪಂಪ ಆಪರೇಟರ್ ಗುರುಸಿದ್ದಯ್ಯ ಲೋಕಾಯುಕ್ತರಿಗೆ ದೂರು ನೀಡಿದರು, ಹಾಗಾಗಿ ಅವರ ದೂರಿಗೆ ಸ್ಪಂದಿಸಿದ ಲೋಕಾಯುಕ್ತ ಅಧಿಕಾರಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರೀತಿರಾಜ್ ಫೋನ್ ಪೇ ಮೂಲಕ 17000 ರೂಪಾಯಿ ಹಣ ಹಾಕಿಸಿಕೊಳ್ಳುವ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಮನೆ ಮೇಲೆ ದಾಳಿ ಮಾಡಿ ಅಭಿವೃದ್ಧಿ ಅಧಿಕಾರಿಯನ್ನು ಬಂಧಿಸಿದ್ದಾರೆ.ಈ ಸಂದರ್ಭದಲ್ಲಿ ಪೊಲೀಸ ಇನ್ಸ್ಪೆಕ್ಟರ್, ಅರುಣ ಕುಮಾರ ಹಾಗೂ ಸಿಬ್ಬಂದಿಗಳಾದ ಮಸೂದ, ಮಲ್ಲಿನಾಥ, ಬಸವರಾಜ್, ಸಂತೋಷ, ಮದುಮತಿ, ಪ್ರಮೋದ ಸೇರಿದಂತೆ ಅನೇಕ ಸಿಬ್ಬಂದಿಗಳು ಉಪಸ್ಥಿತರಿದ್ದರು.