ಕೋಮುವಾದ ಅಳಿಸಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯ ಉಳಿಸಿ ಆಂದೋಲನ ಚಾಲನಾ ಸಮಿತಿ ಕಲ್ಬುರ್ಗಿ ಹಾಗೂ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಮಾಡುವ ಮುಖಾಂತರ ಹಾಗೂ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಲಾಯಿತು,, ಘನವೆತ್ತೆ ರಾಷ್ಟ್ರಪತಿಗಳು ಭಾರತ ಸರಕಾರ ನವದೆಹಲಿ ಅವರಿಗೆ ಕಲಬುರ್ಗಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು,, ಲಚ್ಚಪ್ಪ ಜಮಾದಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದಲ್ಲಿ ಐಕ್ಯ ವಿಶ್ವವಿದ್ಯಾನಿಲಯವಾಗಿದೆ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮ ಪ್ರಾಮಾಣಿಕ ಕಾಳಜಿಯ ಫಲವಾಗಿದೆ ಎಂದರರು. ಇದೇ ಸಂದರ್ಭದಲ್ಲಿ ಡಾ. ಡಿ .ಜಿ ಸಾಗರ್ ,ಅಶ್ವಿನಿ ಮದನಕರ್, ಮಾಂತೇಶ್ ಕೌಲಗಿ, ಅಬ್ದುಲ್ ಖಾದರ್ ,ನಿಂಗಣ್ಣ ನಂದೂರ್ ಸುರೇಶ್ ಹಾದಿಮನಿ ,ಪ್ರಕಾಶ್ ಮಾರುತಿ ಗೋಖಲೆ ಇತರರು ಉಪಸ್ಥಿತರಿದ್ದರು.