ಆಳವಾದ ಅಧ್ಯಯನ ಉನ್ನತ ಶಿಕ್ಷಣದ ನಿಜವಾದ ಮಾರ್ಗ: ಡಾ.ಎಂ.ಮAಗಳಗೌರಿ ಕರೆ
ತುಮಕೂರು : ತಮ್ಮ ವಿಷಯಗಳ ಆಧಾರದ ಮೇಲೆ ವಿದ್ಯಾರ್ಥಿಗಳು ಆಳವಾದ ಅಧ್ಯಯನ ಮಾಡಿದಾಗ ಮಾತ್ರ ಉನ್ನತ ಶಿಕ್ಷಣಕ್ಕೆ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ನಿರಂತರ ಕಲಿಕೆಯ ಮನೋಭಾವವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಉಪ ಕುಲಸಚಿವರಾದ ಡಾ. ಎಂ. ಮಂಗಳಗೌರಿ ಅವರು ಕರೆ ನೀಡಿದರು.
ನಗರದ ಶ್ರೀ ಸಿದ್ಧಾರ್ಥ ವ್ಯವಹಾರ ನಿರ್ವಹಣೆ ಕಾಲೇಜಿನ ಬಿಸಿಎ ವಿಭಾಗದ ಪ್ರಥಮ ವರ್ಷದ ತರಗತಿಗಳ ಉದ್ಘಾಟನೆ ಮತ್ತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜುಗಳಲ್ಲಿ ಅಧ್ಯಯನ ಮಾಡುವಾಗ ಕೆಲಸವನ್ನು ಸೃಷ್ಟಿಸಿಕೊಳ್ಳುವಂತ ಕಲಿಕೆ ಅಗತ್ಯ. ಪದವಿ ಹಂತದಲ್ಲಿ ಭಾಷೆಗಳ ಮೇಲಿನ ಹಿಡಿತ ಸಾಧಿಸಿದರೆ, ಸಂವಹನ ಸರಳವಾಗುತ್ತದೆ.ಇದರಿಂದ ಉದ್ಯೋಗ ನೇಮಕಾತಿಗೆ ಸಹಕಾರಿಯಾಗುತ್ತದೆ. ಶೈಕ್ಷಣಿಕ ಚಟುವಟಿಕೆಗಳು ಉತ್ತಮಗೊಳ್ಳಬೇಕಾದರೆ ಗ್ರಂಥಾಲಯಕ್ಕೆ ಹೋಗಿ ಹೆಚ್ಚು ವಿಷಯಗಳ ಅಧ್ಯಯನದ ಕಡೆ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಡಾ.ಎಂ.ಮAಗಳಗೌರಿ ಅವರು ನುಡಿದರು.
ಶ್ರೀ ಸಿದ್ದಾರ್ಥ ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆ ಮಾಡಬೇಕು. ಒಳ್ಳೆಯದು ಅಥವಾ ಕೆಟ್ಟದ್ದನ್ನು ಹೇಗೆ ಸ್ವೀಕರಿಸಬೇಕೆಂಬ ಚಿಂತನೆ ವಿದ್ಯಾರ್ಥಿಗಳಲ್ಲಿ ಬರಬೇಕು. ಆಗ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದರು.
ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ . ಮಮತಾ.ಜಿ, ಬಿಸಿಎ ವಿಭಾಗದ ಮುಖ್ಯಸ್ಥರಾದ ಮುತ್ತುರಾಜ್ ಟಿ.ಆರ್. ಎಂ.ಕಾA ವಿಭಾಗದ ಮುಖ್ಯಸ್ಥರಾದ ವಿ.ಎನ್.ಚಿದಾನಂದ, ಎಂ.ಎಸ್.ಡಬ್ಲೂö್ಯ ವಿಭಾಗದ ಮುಖ್ಯಸ್ಥರಾದ ಡಾ.ಗುರುಪ್ರಸಾದ್ ಸಿ.ವಿ. ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು .