ತುಮಕೂರಿನ ದಯಾಸ್ಪರ್ಶ ಆಸ್ಪತ್ರೆಯಲ್ಲಿ ದಯಾವಿದ್ಯಾ ಸಹಾಯ ಮತ್ತು ದಯಾ ಪ್ರತೀಕ್ಷಾ ಕಾರ್ಯಕ್ರಮ
ದಯಾಭವನ ಸಮೂಹ ಸಂಸ್ಥೆಗಳು ಕಾರ್ಯ ಶ್ಲಾಘನೀಯ :
ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿ ತರಲು : ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಕರೆ
ತುಮಕೂರು:
ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಅತ್ಯುತ್ತಮ ಗುಣಮಟ್ಟದ ಸೇವೆಯೊಂದಿಗೆ ಚಿಕಿತ್ಸೆ ನೀಡಿ ಸಮಾಜದ ಮುಖ್ಯವಾಹಿನಿಗೆ ಕರೆ ತರುತ್ತಿರುವುದೇ ದಯಾಭವನ ಸಮೂಹ ಸಂಸ್ಥೆಗಳ ಸೇವೆಯಾಗಿದೆ ಎಂದು ತುಮಕೂರಿನ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ರವರು ತಿಳಿಸಿದರು.
ತುಮಕೂರಿನ ಗೆದ್ದಲಹಳ್ಳಿಯ ದಯಾಸ್ಪರ್ಶ ಆಸ್ಪತ್ರೆಯಲ್ಲಿ ದಯಾವಿದ್ಯಾ ಸಹಾಯ ಮತ್ತು ದಯಾ ಪ್ರತೀಕ್ಷಾ ಎಂಬ ಕಾರ್ಯಕ್ರಮಗಳನ್ನು ಮೇ.೨೬ ರಂದು ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಅವರು ದಯಾಭವನ ಸಮೂಹ ಸಂಸ್ಥೆಗಳು ಕಳೆದ ೨೦೦೮ ನೇ ಇಸವಿಯಿಂದ ತುಮಕೂರು ಜಿಲ್ಲೆಯಲ್ಲಿರುವ ಹೆಚ್.ಐ.ವಿ. ಭಾದಿತ/ ಭಾದಿತರಲ್ಲದ ೫೦೦ ಮಕ್ಕಳಿಗೆ ಪ್ರತಿ ವರ್ಷವೂ ಉಚಿತ ಶೈಕ್ಷಣಿಕ ಕಿಟ್ಗಳನ್ನು ಶಾಲಾ ಸಮವಸ್ತç ಶಾಲಾ ಶುಲ್ಕ ಹಾಗೂ ಪೌಷ್ಟಿಕ ಆಹಾರದ ಕಿಟ್ಗಳ ವಿತರಣೆಯನ್ನು ಮಾಡುತ್ತಿದ್ದು ಅವರು ಸರ್ವಾಂಗೀಣ ಅಭಿವೃದ್ಧಿ ಸತತವಾಗಿ ಶ್ರಮಿಸುತ್ತಿದ್ದಾರೆ. ಕಳೆದ ವರ್ಷಗಳಿಂದ ಜೈಲಿನಲ್ಲಿ ಬಂಧಿಯಾಗಿರುವ ಖೈದಿಗಳ ಮಕ್ಕಳ ಮಕ್ಕಳಿಗೂ ಸಹ ಉಚಿತ ಶೈಕ್ಷಣಿಕವಾಗಿ ಪೌಷ್ಟಿಕ ಹಾಗೂ ಇನ್ನಿತರೆ ವಸ್ತುಗಳನ್ನು ವಿತರಿಸುತ್ತಾ ಬರುತ್ತಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿಯಾದ ಪೂಜ್ಯ ಅಬ್ರಹಾಂ ರಾಂಬಾನ್ರವರು ಮಾತನಾಡುತ್ತಾ ಸಮೂಹಕ್ಕೆ ಕಳೆದ ೨೦ ವರ್ಷಗಳಿಂದ ಸುಮಾರು ೨೭ ಕ್ಕೂ ಅಧಿಕ ಯೋಜನೆಗಳ ಮೂಲಕ ಸಹಾಯ ಸಲ್ಲಿಸುತ್ತಿದ್ದು, ಇನ್ನೂ ಮುಂದೆಯೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪುವ ಕೆಲಸ ಮಾಡುತ್ತೇವೆ. ಈಗಾಗಲೇ ವರ್ಷಕ್ಕೆ ೫ ಲಕ್ಷಕ್ಕೂ ಮಿಗಿಲಾದ ಜನರನ್ನು ನಾವು ತಲುಪುತ್ತಿದ್ದೇವೆ. ಜನರ ಅಧಿಕಾರಿ ವರ್ಗದವರು ಹಾಗೂ ರಾಜಕೀಯ ಧುರೀಣರ ಸಹಕಾರ ಹೀಗೆ ನಮ್ಮೊಂದಿಗೆ ಮುಂದುವರೆಯಲಿ ಎಂದು ಆಶಿಸಿದ್ದರು.
ಕಾರ್ಯಕ್ರಮದ ಮುಖ್ಯಅತಿಥಿಗಳಾದ ತುಮಕೂರಿನ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯಾದ ದಿನೇಶ್ರವರು ಮಾತನಾಡುತ್ತಾ ಸಂಸ್ಥೆಯೂ ಪ್ರಾರಂಭದಿAದಲೂ ನಾವು ಸಂಸ್ಥೆ ಕಾರ್ಯವೈಖರಿಗಳನ್ನು ನೀಡುತ್ತಾ ಬಂದಿದ್ದು, ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡಿದೆ ಎಂದರು.
ದಯಾಸ್ಪರ್ಶ ಆಸ್ಪತ್ರೆಯಲ್ಲಿ ದಯಾವಿದ್ಯಾ ಸಹಾಯ ಮತ್ತು ದಯಾ ಪ್ರತೀಕ್ಷಾ ಕಾರ್ಯಕ್ರಮ
Leave a comment
Leave a comment