ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಗಳ ಆವರಣದ ವತಿಯಿಂದ ಅಂತರರಾಷ್ಟಿçÃಯ ಯೋಗ ದಿನಾಚರಣೆ
ಯೋಗದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿ : ಅರುಣ್ ಕುಮಾರ್
ತುಮಕೂರು:
ಉತ್ತಮ ಜೀವನವನ್ನು ಸಾಗಿಸಲು ಯೋಗದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯಕರ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ.ದಿನವು ಸೂರ್ಯ ನಮಸ್ಕಾರ ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸು ಸ್ಥೀಮಿತದಲ್ಲಿ ಇರುತ್ತದೆ, ಮನಸ್ಸು ಮತ್ತು ದೇಹದ ಸ್ವಾಸ್ಥಕ್ಕೆ ಯೋಗ ಪರಿಣಾಮಕಾರಿಯಾಗಿದ್ದು, ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು, ಯೋಗಾಭ್ಯಾಸದಿಂದ ನಾವುಗಳು ದೀರ್ಘಕಾಲದವರೆಗೆ ಆರೋಗ್ಯವಾಗಿ ಬಾಳಬಹುದು ಹಾಗೂ ಯೋಗದ ವಿವಿಧ ಬಗೆಯ ಹಠಯೋಗ, ಅಷ್ಟಾಂಗ ವಿನ್ಯಾಸ ಯೋಗ, ಪವರ್ ಯೋಗ, ಪ್ರಾಣಾಯಾಮ ಮತ್ತು ಮುದ್ರೆ, ಧ್ಯಾನ ಮತ್ತು ಮಂತ್ರ ಇನ್ನೂ ಮುಂತಾದ ಯೋಗದಲ್ಲಿ ಪರಿಣಿತಿಯನ್ನು ಪಡೆದಿದ್ದಾರೆ ಎಂದು ತುಮಕೂರಿನ ಯೋಗ ಶಿಕ್ಷಣ ತರಬೇತುದಾರರಾದ ಡಿ.ಅರುಣ್ ಕುಮಾರ್ರವರು ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಗಳ ವತಿಯಿಂದ ಅಂತರರಾಷ್ಟಿçÃಯ ಯೋಗ ದಿನಾಚರಣೆಯನ್ನು ಜೂನ್ ೨೧ ರಂದು ಬುಧವಾರ ಬೆಳಿಗ್ಗೆ ೮ ಗಂಟೆಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀದೇವಿ ಸಂಸ್ಥೆಯ ಆಡಳಿತಾಧಿಕಾರಿಯಾದ ಟಿ.ವಿ.ಬ್ರಹ್ಮದೇವಯ್ಯರವರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಯೋಗವೂ ಪ್ರದರ್ಶನವಾಗದೆ ಯೋಗವೂ ನಿದರ್ಶನವಾಗಬೇಕು, ಉತ್ತಮ ಜೀವನವನ್ನು ಸಾಗಿಸಲು ಯೋಗದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯಕರ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಂತರಾಷ್ಟಿçÃಯ ಯೋಗ ದಿನಾಚರಣೆಯಲ್ಲಿ ಶ್ರೀದೇವಿ ಛಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಹಾಗೂ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ನಿದೇಶಕರಾದ ಡಾ.ರಮಣ್ ಆರ್ ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್. ಪಾಟೀಲ್ರವರು ವಿದ್ಯಾರ್ಥಿಗಳು ಭಾಗವಹಿಸಿದ್ದ ಯೋಗ ದಿನಾಚರಣೆಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಲ್.ಹರೇAದ್ರಕುಮಾರ್ರವರು ಮಾತನಾಡುತ್ತಾ ಮನಸ್ಸಿನ ವೃತ್ತಿ ಯೋಚನೆಗಳನ್ನು ಹೊರಹಾಕುವುದೇ ಯೋಗ ಆದ್ದರಿಂದ ಯೋಗವನ್ನು ಜೀವನದ ಅವಿಭಾಜ್ಯವಾದ ಅಂಗವಾಗುತ್ತದೆ. ಮನಸ್ಸು ಮತ್ತು ದೇಹದ ಸ್ವಾಸ್ಥಕ್ಕೆ ಯೋಗ ಪರಿಣಾಮಕಾರಿಯಾಗಿದ್ದು, ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದು ಅರ್ಥಪೂರ್ಣವಾಗಿ ವಿವರಿಸಿದರು.
ಇದೇ ಸಂದರ್ಭದಲ್ಲಿ ಶ್ರೀದೇವಿ ಪದವಿ ಮತ್ತು ಸ್ನಾತಕೋತ್ತರ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮುಬಾರಕ್, ಶ್ರೀದೇವಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎಸ್.ಲೋಕೇಶ್, ಡಾ.ಸತೀಶ್, ಶ್ರೀದೇವಿ ವಿದ್ಯಾ ಮಂದಿರ ಮುಖ್ಯಶಿಕ್ಷಕರಾದ ಆರ್. ವಿಜಯ್ಕುಮಾರ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ರಾಘವೇಂದ್ರ ಜಟ್ಟೆಣ್ಣ, ಯೋಗ ತರಬೇತುದಾರರಾದ ಲಕ್ಷಿö್ಮನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.
ಫೋಟೋ ಕ್ಯಾಷ್ಷನ್:
ನಗರದ ಶಿರಾರಸ್ತೆಯ ಶ್ರೀದೇವಿ ಸಮೂಹ ವಿದ್ಯಾಸಂಸ್ಥೆಗಳ ವತಿಯಿಂದ ಅಂತರಾಷ್ಟಿçÃಯ ಯೋಗ ದಿನಾಚರಣೆಯನ್ನು ಜೂನ್ ೨೧ ರಂದು ಬುಧವಾರ ಬೆಳಿಗ್ಗೆ ೮ ಗಂಟೆಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಚಿತ್ರದಲ್ಲಿ ತುಮಕೂರಿನ ಯೋಗ ಶಿಕ್ಷಣ ತರಬೇತುದಾರರಾದ ಡಿ.ಅರುಣ್ ಕುಮಾರ್, ಶ್ರೀದೇವಿ ಸಂಸ್ಥೆಯ ಆಡಳಿತಾಧಿಕಾರಿಯಾದ ಟಿ.ವಿ.ಬ್ರಹ್ಮದೇವಯ್ಯ, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಲ್.ಹರೇAದ್ರಕುಮಾರ್, ಪ್ರೊ.ಮುಬಾರಕ್, ಡಾ.ಬಿ.ಎಸ್.ಲೋಕೇಶ್, ಆರ್. ವಿಜಯ್ಕುಮಾರ್, ರಾಘವೇಂದ್ರ ಜಟ್ಟೆಣ್ಣ, ಲಕ್ಷಿö್ಮನಾರಾಯಣ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದರು.
ದಿನಾಚರಣೆಯೋಗದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿ
Leave a comment
Leave a comment